ಕವಿವಿ ಯಲ್ಲಿ ಗಾಂಧಿ ಅಧ್ಯಯನ ವಿಭಾಗದಿಂದ ವಿಚಾರ ಸಂಕಿರಣ ಮತ್ತು ನಾಟಕ ಪ್ರದರ್ಶನ
Seminar and drama performance by the Gandhian Studies Department at Kavivi
ಧಾರವಾಡ ಮಾ.11: ಕರ್ನಾಟಕ ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ವಿಭಾಗ, ಕ.ವಿ.ವಿ ಶಿಕ್ಷಣ ಮಹಾವಿದ್ಯಾಲಯ ಎನ್.ಎಸ್.ಎಸ್ ಘಟಕ, ರಾಷ್ಟ್ರೀಯ ಸೇವಾ ಯೋಜನಾ ಕೋಶ ಹಾಗೂ ರಂಗಾಯಣ, ಧಾರವಾಡ ಇವರ ಸಹಯೋಗದೊಂದಿಗೆ ಗಾಂಧಿ ಪುಣ್ಯತಿಥಿ ಹಾಗೂ 'ಗಾಂಧಿ ಭಾರತ' ಕಾರ್ಯಕ್ರಮದ ಅಂಗವಾಗಿ ಒಂದು ದಿನದ ವಿಚಾರ ಸಂಕಿರಣ ಮತ್ತು ನಾಟಕ ಪ್ರದರ್ಶನ ಏರಿ್ಡಸಲಾಗಿದೆ. ವಿಚಾರ ಸಂಕಿರಣ ಮಾರ್ಚ 10, 2026 ರಂದು ಬೆಳಿಗ್ಗೆ 10:00 ಗಂಟೆಗೆ ಕವಿವಿ ಯ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಜರುಗಲಿದೆ.
ಉದ್ಘಾಟನ ಸಮಾರಂಭದ ದಿವ್ಯಸಾನಿಧ್ಯವನ್ನು ಗದುಗಿನ ತೋಂಟದಾರ್ಯ ಮಠದ ಪೂಜ್ಯ ಶ್ರೀ ಸಿದ್ದರಾಮ ಸ್ವಾಮೀಜಿಯವರು ವಹಿಸಲಿದ್ದು ಉದ್ಘಾಟನೆಯನ್ನು ಕವಿವಿ ಕುಲಪತಿ ಪ್ರೊ. ಎ.ಎಂ.ಖಾನ್ ಅವರು ನೆರವೇರಿಸುವರು. ಸಮಾಜ ವಿಜ್ಞಾನ ನಿಕಾಯದ ಡೀನರು ಮತ್ತು ಗಾಂಧಿ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಪ್ರೋ. ಶೌಖತ್ ಅಝೀಮ ಅವರು ಕಾರ್ಯಕ್ರಮದ ಅಧಕ್ಷತೆ ವಹಿಸುವರು. ಎಲ್ಲ ಸಿಂಡಿಕೇಟ್ ಸದಸ್ಯರುಗಳು ಉಪಸ್ಥಿತರಿರುವರು.
ಸಂಪನ್ಮೂಲ ವ್ಯಕ್ತಿಯಾಗಿ ಹುಬ್ಬಳ್ಳಿಯ ತರಬೇತುದಾರರು ಹಾಗೂ ಆಪ್ತಸಮಾಲೋಚಕರಾದಡಾ. ಗುರುರಾಜ್ ಪಾಟೀಲ್ ಆಗಮಿಸುವರು. ಹಿರಿಯ ಲೇಖಕರು ಹಾಗೂ ಧಾರವಾಡದ ವಿಶ್ರಾಂತ ಶಿಕ್ಷಣ ಇಲಾಖೆಯ ಆಯುಕ್ತರಾದ ಶ್ರೀ ವೆಂಕಟೇಶ್ ಮಾಚಕನೂರ ಅಧ್ಯಕ್ಷತೆ ವಹಿಸುವರು. ಡಾ.ಅರವಿಂದ್ ಕರಬಸನಗೌಡರ, ಡಾ. ಸುರೇಶ ಸಮ್ಮಸಗಿ ಹಾಗೂ ಡಾ. ನಾಗರಾಜ್ ತಳವಾರ ಪ್ರತಿಕ್ರಿಯ ನೀಡುವರು. ಮ.3-00ರಿಂದ ಅದೇ ಸಭಾಭವನದಲ್ಲಿ " ಮರಳಿ ಮಹಾತ್ಮನೆಡೆಗೆ" ನಾಟಕ ಪ್ರದರ್ಶನ ಜರುಗುವದು. ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಹಿನ್ನಲೆಯಲ್ಲಿ ಧಾರವಾಡ ರಂಗಾಯಣದ ರೆಪರ್ಟರಿ ಕಲಾವಿದರು ವಿಶೇಷವಾಗಿ ಸಿದ್ಧಪಡಿಸಿದ ನಾಟಕದ ಪ್ರಥಮ ಪ್ರಯೋಗ ಇದಾಗಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 