ದಾಸ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ಸಂತ ಕನಕದಾಸರು: ಮಟೋಳ್ಳಿ
ಲೋಕದರ್ಶನ ವರದಿ,
ಜಮಖಂಡಿ 12: ಭಕ್ತ ಕನಕದಾಸರಲ್ಲಿನ ಹರಿಭಕ್ತ ಪ್ರತಿಯೊಬ್ಬರಲ್ಲಿ ಮೂಡಬೇಕು.ಸಂತ ಭಕ್ತ ಕನಕದಾಸರು ಕೇವಲ ಒಂದೇ ಸಮೂದಾಯಕ್ಕೆ ಮಾತ್ರ ಸಿಮೀತರಲ್ಲ,ಅವರು ಸರ್ವ ಸಮೂದಾಯದ ಪ್ರತೀಕರಾಗಿ ನಾಡಿನ ದಾಸ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡದ ಸಂತ ಎಂದು ಸಾರಿಗೆ ಸಂಸ್ಥೆ ವ್ಯವಸ್ಥಾಪಕ ಸಂಗಮೇಶ ಮಟೋಳ್ಳಿ ಹೇಳಿದರು.
ನಗರದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿನ ಕನಕ ಸಂಘದ ಆಶ್ರಯದಲ್ಲಿ ನಡೆದ ಭಕ್ತ ಕನಕದಾಸರ 535 ನೇ ಜಯಂತ್ಯೋತ್ಸವ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಪ್ರತಿಯೊಬ್ಬ ಕಾರ್ಮಿಕ ಕರ್ತವ್ಯದೊಂದಿಗೆ ರಾಷ್ಟ್ರೀಯ ಹಬ್ಬ-ಹರಿದಿನಗಳಲ್ಲಿ ಪಾಲ್ಗೊಂಡು ಮಹಾತ್ಮರು ಹಾಕಿಕೊಟ್ಟ ತತ್ವ-ಸಿದ್ದಾಂತ-ಆದರ್ಶಗಳನ್ನು ಪಾಲಿಸ ಬೇಕು.ಪ್ರತಿಯೊಬ್ಬರು ತಾವೂ ಸೇವೆ ಸಲ್ಲಿಸುವ ಸಂಸ್ಥೆ ಮೇಲೆ ಶೃದ್ದೆ-ಭಕ್ತಿಯನ್ನಿಟ್ಟು ಕಾಯಕ ನಡೆಸಬೇಕು.ಕಾರ್ಮಿಕರು ಭಕ್ತಿಸಾರವನ್ನು ಸಂಸ್ಥೆ ಮೇಲಿರಿಸಬೇಕು.ಆಗ ಮಾತ್ರ ಸಂಸ್ಥೆ ಮತ್ತು ನಾವೂ ಅಭಿದೃದ್ದಿ ಹೊಂದಲು ಸಾಧ್ಯ. ಸಾರಿಗೆ ಸಂಸ್ಥೆಯಲ್ಲಿ ಸೇವೆ ಸಲ್ಲಿರುವ ಎಲ್ಲರೂ ಪ್ರಯಾಣಿಕರೊಂದಿಗೆ ಸೌಜನ್ಯವಾಗಿ ವರ್ತಿಸಿ ಸಂಸ್ಥೆ ಹೆಸರನ್ನು ಹೆಚ್ಚಿಸಬೇಕೆಂದು ಹೇಳಿದರು.
ಅತಿಥಿಯಾಗಿದ್ದ ವಿಭಾಗೀಯ ತಾಂತ್ರಿಕ ಅಧಿಕಾರಿ ಭಾವಿ ಸಕರ್ಾರ ಮಾತನಾಡಿ, ಸಂಸ್ಥೆಯ ಆದಾಯ ಹೆಚ್ಚಳಕ್ಕೆ ಕಾರ್ಮಿಕರಿಂದ ಮಾತ್ರ ಸಾಧ್ಯ.ನಿಷ್ಠೆ-ಪ್ರಾಮಾಣಿ ಕತೆಯಿಂದ ಸೇವೆ ಸಲ್ಲಿಸಿ,ಸಂಸ್ಥೆ ಬೆಳವಣಿಗೆಯಲ್ಲಿ ಭಾಗಿಯಾಗಲು ಕರೆ ನೀಡಿದರು.
ಮಹಿಳಾ ಕಾಲೇಜಿನ ಅಧ್ಯಾಪಕ ಡಾ.ಮಲ್ಲಿಕಾರ್ಜುನ ಅಂಬಲಿ ಉಪನ್ಯಾಸ ನೀಡಿದರು. ಸಂಘದ ಅಧ್ಯಕ್ಷ ಭೀಮಣ್ಣ ನಾಯ್ಕೋಡಿ,ವಿ.ಎಸ್.ಗುಗ್ಗರಿ, ಶ್ರೀಮತಿ ಎಸ್. ಆರ್.ಕಾಜಗಾರ, ಸ್ರೀಮತಿ ಎನ್.ಕೆ.ಫಿರೋಜ, ಬಸವರಾಜ ಸಾಹುಕಾರ, ಎಸ್.ಕೆ.ಲಾತೂರ, ಎಂ.ಡಿ.ಹಿಪ್ಪರಗಿ, ಎಂ.ಬಿ.ಜೈನಾಪೂರ, ಎಸ್.ಹೆಚ್.ಪೂಜನ್ನವರ, ಆರ್.ಎಂ.ಸತ್ತಿಗೇರಿ, ಪ್ರಭು ಬಿದರಿ ಅನೇಕರು ಉಪಸ್ಥಿತರಿದ್ದರು. ಆನಂದ ಕರಾಬಿ ಸ್ವಾಗತಿಸಿ,ಪ್ರಾಸ್ತಾವಿಕವಾಗಿ ಮಾತನಾಡಿದರು.ಎಸ್.ಆರ್.ನ್ಯಾಮಗೌಡ ನಿರೂಪಿಸಿ, ವಂದಿಸಿದರು.