ಜಮಖಂಡಿ ಸಾರಿಗೆ ಸಂಸ್ಥೆಯಲ್ಲಿ ರಾಣಿ ಚನ್ನಮ್ಮಾ ಜಯಂತಿ
ಜಮಖಂಡಿ 24: ನಮಗೆ ದೇಶ ಏನ್ನು ನೀಡಿದೆ ಎಂಬುವುದಕ್ಕಿಂತ ನಾವೂ ದೇಶಕ್ಕೆ ಏನು ನೀಡಿದ್ದೆವೆಂಬುದನ್ನು ನಾವೆಲ್ಲರೂ ಮೊದಲು ಅರಿತುಕೊಳ್ಳಬೇಕು.ವೀರರಾಣಿ ಚನ್ನಮ್ಮಾ ಅವರ ಧೀರ-ದಿಟ್ಟತನದಿಂದ ಇಂಗ್ಲೇಂಡ್ ಸರ್ಕಾರ ಕಂಗೆಟ್ಟಿತ್ತು. ಥ್ಯಾಕರೆ ರುಂಡ ಚಂಡಾಡಿದ ರಾಣಿ ಚನ್ನಮ್ಮಳಿಗೆ ಇನ್ನೂವರೆಗೆ ಇಂಗ್ಲೆಂಡನಲ್ಲಿ ನಡುಕವಿದೆಂದು ರಾಜ್ಯ ಸಾರಿಗೆ ಸಂಸ್ಥೆ ಜಮಖಂಡಿ ಘಟಕ ವ್ಯವಸ್ಥಾಪಕ ಸಂಗಮೇಶ ಮಟೋಳಿ ಹೇಳಿದರು.
ನಗರದ ಸಾರಿಗೆ ಸಂಸ್ಥೆ ಘಟಕದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಅವರ 244 ನೇ ಜಯಂತ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಿತ್ತೂರು ರಾಣಿ ಚನ್ನಮ್ಮಾಳ ಬ್ರಿಟಿಷರ ವಿರುದ್ಧ ಹೋರಾಟವನ್ನು ಭಾರತದ ಮೊಟ್ಟ ಮೊದಲ ಮಹಿಳೆ ಹೋರಾಟಗಾರ್ತಿ ಎಂದು ಸಕರ್ಾರಗಳು ಘೋಷಿಸಬೇಕು.ಅವಳ ದಿಟ್ಟತನ, ಶೌರ್ಯಗಳ ಬಗ್ಗೆ ನಮ್ಮ ತಾಯಂದಿರು ಮಕ್ಕಳಿಗೆ ತಿಳಿ ಹೇಳಬೇಕೆಂದರು.
ಅತಿಥಿಗಳಾಗಿದ್ದ ಪಿಬಿ ಕಾಲೇಜಿನ ಉಪನ್ಯಾಸಕಿ ವಿಮಲಾ ಕುಬಕಡ್ಡಿ ಮಾತನಾಡಿ, ಕರ್ನಾಟಕದ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿ ಚನ್ನಮ್ಮಾ ಅವರು ಹೋರಾಟವನ್ನು ಪ್ರಥಮ ಸ್ವಾತಂತ್ರ್ಯಯ ಹೋರಾಟ ಸಂಗ್ರಾಮ ಎಂದು ಕರೆದರು ತಪ್ಪಾಗಲಿಕ್ಕಿಲ್ಲ. ಅವಳ ಹೋರಾಟ ನಮಗೆಲ್ಲರಿಗೂ ಬೆಳಕಿನ ಕಿಂಡಿಯಾಗಿ ಸ್ಫೂರ್ತಿ ನೀಡುವಂತಾಗಬೇಕು ಎಂದರು.
ಸಾನಿಧ್ಯ ವಹಿಸಿದ್ದ ಮೈಗೂರು ಗುರುಪ್ರಸಾದ ಶ್ರೀಗಳು ಆರ್ಶಿವಚನ ನೀಡಿ, ನಮ್ಮನ್ನು ಕಾಯುವ ದೇಶದ ಪ್ರತಿಯೊಬ್ಬ ಸೈನಿಕರಿಗೆ ನಾವೂ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆ. ಅವರು ಹಗಲಿರುಳು ಎಚ್ಚರಿದ್ದು, ನಮ್ಮನ್ನು ಸುಖನಿದ್ರೆ ಮಾಡುವುದು ಸೈನಿಕರು. ಈ ದೇಶದ ಪ್ರತಿಯೊಬ್ಬರೂ ನಿಷ್ಠೆ, ಶ್ರದ್ದೆ, ಪ್ರಾಮಾಣಿಕತೆಯಿಂದ ಕಾಯಕ ನಡೆಸಬೇಕು. ಆಗ ಮಾತ್ರ ದೇಶ ಅಭಿವೃದ್ದಿ ಹೊಂದಲು ಸಾಧ್ಯ. ರಾಣಿ ಚನ್ನಮ್ಮಾಜಿ ಅವರೊಂದಿಗೆ ಮೋಸ ನಡೆಯದಿದ್ದರೆ ಅಂದೇ ದೇಶಕ್ಕೆ ಸ್ವಾತಂತ್ರ ಸಿಗುತ್ತಿತ್ತೆಂದು ಹೇಳಿದರು.
ನಿವೃತ್ತ ಶಿಕ್ಷಕ ಎಸ್.ಆರ್.ಪವಾರ ಉಪನ್ಯಾಸ ನೀಡಿದರು. ಸಂಜಯ ಟೊನಪಿ, ಹಿಪ್ಪರಗಿ, ಬಿರಾದಾರ, ಪರಶುರಾಮ ದಂಡಗೊಂಡ, ರಮೇಶ ಭಜಂತ್ರಿ, ವಚನಾ ಕಾಸಾರ ಪ್ರಾಥರ್ಿಸಿದರು.ಮಲ್ಲು ಪಾಯಗೊಂಡ ಸ್ವಾಗತಿಸಿ,ನಿರೂಪಿಸಿದರು. ಬಸವರಾಜ ಮಸಬಿನಾಳ ವಂದಿಸಿದರು.