ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ
ಲೋಕದರ್ಶನ ವರದಿ,
ಜಮಖಂಡಿ 28: ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘದ ಕಾರ್ಯಕರ್ತೆಯರು ವಿವಿಧ ಬೇಡಿಕೆಗಳನ್ನು ಸರಕಾರ ಈಡೇರಿಸಬೇಕೆಂದು ನಗರದ ಎ,ಜಿ,ದೇಸಾಯಿ ವೃತ್ತದಿಂದ ಮಿನಿವಿಧಾನಸೌಧದವರೆಗೆ ಪಾದಯಾತ್ರೆಯ ಮೂಲಕ ಪ್ರತಿಭಟನೆಯನ್ನು ನಡೆಸಿದರು.
ಮಿನಿ ವಿಧಾನಸೌಧದಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿ, ಸರಕಾರದ ವಿರುದ್ಧ ಘೋಷಣೆಯನ್ನು ಕೂಗಿ. ನಂತರ ಉಪವಿಭಾಗಾಧಿಕಾರಿ ಡಾ,ಸಿದ್ದು ಹುಲ್ಲೋಳಿ ಅವರಿಗೆ ಮನವಿ ಸಲ್ಲಿಸಿದರು.
ತಾಲೂಕಾಧ್ಯಕ್ಷೆ ಕಸ್ತೂರಿ ಅಂಗಡಿ ಮಾತನಾಡಿ, ಅಂಗನವಾಡಿ ಕಾರ್ಯಕರ್ತಯರು ಮತ್ತು ಸಹಾಯಕಿಯರನ್ನು ಸರ್ಕಾರದ ಸಿ ಮತ್ತು ಡಿ ಗ್ರೂಪ್ ನೌಕರರೆಂದು ಪರಿಗಣಿಸಿ, ಎಲ್ಲಾ ಶಾಸನವಿದ ಸೌಕರ್ಯಗಳನ್ನು ನೀಡಬೇಕು, ಅಲ್ಲಿವರೆಗೆ ಕಾರ್ಯಕತೆ ಯರಿಗೆ ರೂ 35.950 ಹಾಗೂ ಸಹಾಯಕಿಯರಿಗೆ 31 ಸಾವಿರ ರೂ, ಮಾಸಿಕ ವೇತನ ನೀಡಬೇಕು, ಭಾರತ ರಾಷ್ಟ್ರೀಯ ಕಾರ್ಮಿ ಸಮ್ಮೇಳನ (ಐಎಲ್) ಶಿಫಾರಸ್ಸಿನಂತೆ ಇವರನ್ನು ಕಾರ್ಮಿಕರು ಎಂದು ಪರಿಗಣಿಸಿ ಕನಿಷ್ಠ ವೆತನ, ರಜೆ, ಇಪಿಎಫ್, ಇಎಸ್ಐ ಸಹಿತ ಕಾರ್ಮಿಕರಿಗೆ ಸೌಕರ್ಯಗಳನ್ನು ನೀಡಬೇಕು, ಪ್ರತಿ ತಿಂಗಳು 5ನೇ ತಾರಿಖಿನ ಒಳಗಾಗಿ, ಮಾಸಿಕ ವೇತನ ನೀಡಬೇಕು. ಇಡುಗಂಟು ರೂ 5 ಲಕ್ಷ ನಿಗದಿ ಮಾಡಬೇಕು, ಈಗಾಗಲೇ ನಿವೃತ್ತಿಯಾದ ನೌಕರರಿಗೆ ನಿವೃತ್ತಿ ಪರಿಹಾರಗಳು ಸಿಗುತ್ತಿಲ್ಲ. ಸೇವಾ ಹಿರಿತನವನ್ನು ಆಧರಿಸಿ ಶೇ,5ಂ ಮೇರಿಟ್ ಆಧರಿಸಿ ಶೇ, 50 ಕಾರ್ಯಕತೆ ಮತ್ತು ಸಹಾಯಕಿಯರು ಹುದ್ದೆಗೆ ಮುಂಬಡ್ತಿ ಹೊಂದಲು ಅವಕಾಶ ನೀಡಬೇಕೆಂದು ಸರಕಾರಕ್ಕೆ ಒತ್ತಾಯಿಸಿದರು.
ಸರೋಜನಿ ಮಾಳಿ, ಮಾಲಾಬಾಯಿ ಮುಳಿಕ, ಮಹಾದೇವಿ ಗುಣದಾಳ, ಲಕ್ಷ್ಮೀಂಬಾಯಿ ಕೊಣ್ಣುರ, ಭಾರತಿ ತಬ್ಸೆ, ದ್ರಾಕ್ಷಾಯಿಣಿ ನಂದೇಶ್ವರ, ಛಾಯಾ ಲಗಳಿ, ಇಂದುಮತಿ ಮಠಪತಿ, ಕನ್ಯಾ ಹೋಳೆನ್ನವರ, ಸತ್ಯವ್ವ ದೊಡಮನಿ, ಪಾರ್ವತಿ ಹಿರೇಮಠ, ಶಾಂತಾ ಕುಂಚನೂರ, ಯಮನವ್ವ ದರಮಟ್ಟಿ, ಸಾವಿತ್ರಿ ಯಲ್ಲಟ್ಟಿ, ನಿರ್ಮಲಾ ನಿಡೋಣಿ, ರೋಹಿಣಿ ಮನಗೂಳಿ, ಸುಮಿತ್ರಾ ಗುಗ್ಗರಿ, ಗಂಗಾ ಬಿರಾದಾರ, ಭಾರತಿ ಬಿರಾದಾರ ಅನೇಕರು ಪ್ರತಿಭಟನೆಯಲ್ಲಿ ಭಾಗಿಯಾಗಿದರು.