ಕನ್ನಡಪರ ಹೋರಾಟಗಾರ ಶಂಕರ ಹೂಗಾರರಿಗೆ ಕನ್ನಡ ನುಡಿಶ್ರೀ ಪ್ರಶಸ್ತಿಗೆ ಆಯ್ಕೆ
Pro-Kannada activist Shankara Hoogara selected for Kannada Nudishri Award
ಯಲಬುರ್ಗಾ 28: ಕನ್ನಡಪರ ಹೋರಾಟಗಾರರು,ಕರ್ನಾಟಕ ಸ್ವಾಭಿಮಾನಿ ವೇದಿಕೆ ರಾಜ್ಯಧ್ಯಕ್ಷರು ಆಗಿರುವ ತಾಲೂಕಿನ ಕಲ್ಲೂರು ಗ್ರಾಮದ ಶಂಕರ ಹೂಗಾರ ಅವರಿಗೆ ಕನ್ನಡ ನುಡಿಶ್ರೀ ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ.ಅಖಂಡ ಕರ್ನಾಟಕ ಏಕೀರಣ ಮತ್ತು ಭಾರತ ಸ್ವಾತಂತ್ಯ ಸಂಗ್ರಾಮ ಮುಂಚೂಣಿಯಲ್ಲಿದ್ದು,ನಾಗನೂರು ಸ್ವಾಮೀಗಳು ಎಂದೇ ಗಡಿಭಾಗ ಬೆಳಗಾವಿಯಲ್ಲಿ ಹೆಸರು ಪಡೆದಿರುವ ರುದ್ರಾಕ್ಷಿಮಠವು ನಾಡಿನ ಸಾಮಾಜಿಕ,ಧಾರ್ಮಿಕ, ಶೈಕ್ಷಣಿಕ,ಸಾಹಿತ್ಯಿಕ,ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಲ್ಲಿಸುತ್ತ ಬಂದಿದೆ. ಈ ನಿಟ್ಟಿನಲ್ಲಿ ಇದೇ ಡಿಸೆಂಬರ 6 ರಂದು ಬೆಳಗಾವಿಯಲ್ಲಿ ನಡೆಯುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ನಾಡು ನುಡಿಗಾಗಿ ಹೋರಾಟಗಾರರನ್ನು ಗುರ್ತಿಸಿ ರುದ್ರಾಕ್ಷಿಮಠದಿಂದ ಕೊಡಮಾಡುವ ಕನ್ನಡ ನುಡಿಶ್ರೀ ಪ್ರಶಸ್ತಿಗೆ ತಾಲೂಕಿನ ಕಲ್ಲೂರು ಗ್ರಾಮದವರೇ ಆಗಿರುವ ಬೆಂಗಳೂರಿನಲ್ಲಿರುವ ಕನ್ನಡಪರ ಹೋರಾಟಗಾರರು,ಕರ್ನಾಟಕ ಸ್ವಾಭಿಮಾನಿ ವೇದಿಕೆ ರಾಜ್ಯಧ್ಯಕ್ಷ ಶಂಕರ ಹೂಗಾರ ಅವರಿಗೆ ಕನ್ನಡ ನುಡಿಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದೆಂದು ಬೆಳಗಾವಿಯ ನಾಗನುರು ರುದ್ರಾಕ್ಷಿಮಠದ ಪೀಠಾಧಿಪತಿ ಡಾ.ಅಲ್ಲಮಪ್ರಭು ಸ್ವಾಮಿಜಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 