ಪ್ರತಿಭಾ ಕಾರಂಜಿ ಕಾರ್ಯಕ್ರಮದ ಪೂರ್ವಭಾವಿ ಸಭೆ
ಕುಕನೂರು: ಮಂಗಳೇಶ್ವರ ಶಿಕ್ಷಣ ಸಂಸ್ಥೆ(ರಿ)ಯ ಶಾಂತಿನಿಕೇತನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಸ್ಥೆಯ ಅಧ್ಯಕ್ಷ ಕೊಟ್ರಪ್ಪ ತೋಟದ ಮುತ್ತಾಳ ಇವರ ಅಧ್ಯಕ್ಷತೆಯಲ್ಲಿ ಮಂಗಳೂರು ಹಾಗೂ ಸುತ್ತಲಿನ ಸರಕಾರಿ ಕಿರಿಯ ಪ್ರಾಥಮಿಕ ಮಾಧ್ಯಮಿಕ ಪ್ರೌಢ ಶಾಲೆಗಳ ಹಾಗೂ ಖಾಸಗಿ ಅನುದಾನಿತ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ 19 ಶಾಲೆಗಳ ಮುಖ್ಯ ಶಿಕ್ಷಕರ ಸಭೆ ನಡೆದು ಮುಂದಿನ ತಿಂಗಳು ಸ. 15ರಂದು ನಡೆಸುವ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಯಶಸ್ಸಿಗಾಗಿ ಅನುಸರಿಸಬೇಕಾದ ಕ್ರಮಗಳ ಸವಿಸ್ತಾರ ಮಾಹಿತಿಯನ್ನು ರವಿ.ಡಿ.ಮಳಗಿ ಸಿಆರ್ ಪಿ ಅಧಿಕಾರಿ ತಿಳಿಸುತ್ತಾ ಮೂರು ಹಂತದಲ್ಲಿ ಅಂದರೆ ವಲಯ ಮಟ್ಟದ ತಾಲೂಕ ಮಟ್ಟದ ಜಿಲ್ಲಾಮಟ್ಟ ಹಾಗೂ ಪ್ರೌಡಾವಸ್ತೆಯ ಮಕ್ಕಳು ರಾಜ್ಯಮಟ್ಟಕ್ಕೆ ಸ್ಪರ್ಧೆಗೆ ಅರ್ಹರಾಗುವಂತೆ ತಮ್ಮ ತಮ್ಮ ಶಾಲಾ ಮಕ್ಕಳನ್ನು ಸಿದ್ದಗೊಳಿಸಿ ಕರೆ ತರಲು ತಿಳಿಸಿದರು.
ಈ ಖಾಸಗಿ ಶಿಕ್ಷಣ ಸಂಸ್ಥೆ ಹಾಗೂ ಊರಿನ ಎಲ್ಲಾ ಶಿಕ್ಷಣ ಸಂಸ್ಥೆಗಳ ಸಹಕಾರದಿಂದ ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆ ನಿಗದಿಗೊಳಿಸಿದ ನಿಯಮದಂತೆ ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಸಲು ಸನ್ನದ್ಧರಾಗಲು ಸಲಹೆ ಸೂಚನೆ ನೀಡಿದರು ಭಾಗವಹಿಸಿದ್ದ ಎಲ್ಲಾ ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯರು ಸಮರ್ಪಕ ಸಲಹೆ ಸೂಚನೆ ನೀಡಿದರು ಸರಕಾರಿ ಕರ್ನಾ ಟಕ ಪಬ್ಲಿಕ್ ಶಾಲೆಯ ಉಪ ಪ್ರಾಂಶುಪಾಲ ಹನುಮಂತಪ್ಪ ಕುರಿ ಗುರುಗಳು ಮಂಗಳೂರಿಗೆ ಹೆಸರು ಬರುವಂತೆ ಎಲ್ಲಾ ಶಾಲೆಯವರ ಸಮ್ಮಿಲನದಲ್ಲಿ ಹಾಗೂ ಶಿಸ್ತು ಬದ್ಧತೆಯಿಂದ ಈ ಕಾರ್ಯಕ್ರಮ ಯಶಸ್ವಿಗೊಳಿಸುವುದರ ಬಗ್ಗೆ ಸಮರ್ಪಕ ಮಾರ್ಗದರ್ಶಿ ಸೂತ್ರದ ನುಡಿಗಳನ್ನು ಹೇಳಿದರು. ಸಂಸ್ಥೆಯ ಕಾರ್ಯದರ್ಶಿ ರವೀಂದ್ರನಾಥ ಕೊಟ್ರಪ್ಪ ತೋಟದ ಸ್ವಾಗತಿಸಿದರು. ಮುಖ್ಯ ಗುರುಗಳಾದ ಪ್ರೀತಿ ದೇಸಾಯಿ ವಂದನೆ ಗೈದರು .