ಕ್ರೀಡಾ ಸಾಧನೆಗೆ ಶಾರೀರಿಕ ದೃಡತೆ ಜೊತೆಗೆ ಮಾನಸಿಕ ದೃಡತೆಯು ಮುಖ್ಯ
ಲೋಕದರ್ಶನ ವರದಿ
ಬೆಳಗಾವಿ 13: ಇವತ್ತು ಒಂದು ಕ್ರೀಡೆಯಲ್ಲಿ ಸಾಧನೆ ಮಾಡಬೇಕೆಂದರೆ ಕೇವಲ ಶಾರೀರಿಕವಾಗಿ ಶ್ರಮಿಸಿದರೆ ಸಾಲದು ಇದರ ಜೊತೆಗೆ ಈ ಕ್ರೀಡೆಯ ಬಗ್ಗೆ ಅಭಿಮಾನ, ಆಸಕ್ತಿ ಮತ್ತು ಪ್ರೀತಿ ಇರುವುದರ ಜೊತೆಗೆ ಹೆಮ್ಮೆ ಇರಬೇಕು ಕಾರಣ ಈ ಮೇಲಿನ ಅಂಶಗಳು ಕ್ರೀಡಾಪಟುವನ್ನು ಮಾನಸಿಕವಾಗಿ ಗಟ್ಟಿಗೊಳಿಸಿ ಸಾಧನೆಯ ಏಳಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ಉಪ ಅರಣ್ಯಾಧಿಕಾರಿ ಸತ್ಯನಾರಾಯಣ ವೆಣರ್ೆಕರ್ ಹೇಳಿದರು. ಬೆಳಗಾವಿಯ ಕೆ ಎಲ್ ಎಸ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ, ರಾಷ್ಟೀಯ ಮತ್ತು ಒಳ್ಳಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಶ್ರೇಷ್ಠ ಸಾಧನೆ ಮಾಡಿದ ಹಾಗೂ ಯೂನಿವಸರ್ಿಟಿ ಬ್ಲೂ ಆಗಿ ಆಯ್ಕೆಯಾದ ಜಿ ಐ ಟಿ ವಿದ್ಯಾಥರ್ಿಗಳನ್ನು ಸನ್ಮಾನಿಸಲು ದಿ.11ರಂದು ಹಮ್ಮಿಕೊಂಡ ವಾಷರ್ಿಕ ಕ್ರೀಡಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ವಿದ್ಯಾಥರ್ಿಗಳನ್ನು ಉದ್ದೇಶಿಸಿ ಅವರು ಮಾತನಾಡುತಿದ್ದರು.
ಸಾಧಿಸುವ ಛಲವನ್ನು ಹಾಗೂ ಕ್ರೀಡೆಯ ಬಗ್ಗೆ ಅಭಿಮಾನವಿರುವ ಕ್ರೀಡಾ ವ್ಯಕ್ತಿಗಳು ತಮ್ಮ ವೈಫಲ್ಯ ಮತ್ತು ನ್ಯೂನತೆಗಳನ್ನು ಮನ್ನಿಸಲು ಎಂದಿಗೂ ಕೇಳಿಕೊಳ್ಳುವುದಿಲ್ಲ. ಬದಲಾಗಿ, ಪ್ರತಿ ಸೋಲಿನ ಪಾಠವನ್ನು ಶ್ರೇಷ್ಠ ಭವಿಷ್ಯಕ್ಕೆ ಬುನಾದಿಯನ್ನಾಗಿ ಮಾಡಿಕೊಳ್ಳುತ್ತಾರೆ. ಕ್ರೀಡೆ ಕೇವಲ ಆಟವಾಗಿರದೆ ಅದೊಂದು ಮನುಷ್ಯನ ಜೀವನಕ್ಕೆ ಪಾಠವಾಗಬಹುದು ಕಾರಣ ಕ್ರೀಡೆ ಮನುಷ್ಯನಿಗೆ ಸೋಲನ್ನು ಯಾವರೀತಿ ಸ್ವೀಕರಿಸಬೇಕು, ಗೆಲುವಿನಲ್ಲಿ ಯಾವರೀತಿಯಾಗಿ ವತರ್ಿಸಬೇಕು ಜೊತೆಗೆ ತಾಳ್ಮೆ ಮತ್ತು ಪ್ರಾಮಾಣಿಕತೆಯನ್ನು ಕಲಿಸಕೊಡುತ್ತದೆ ಎಂದರೆ ತಪ್ಪಾಗಲಾರದು ಎಂದು ಅವರು ಹೇಳಿದರು. ನಾವುಗಳು ಯಾವತ್ತೂ ಗುರಿ ತಲುಪುವ ಮೊದಲೇ ಸೋಲನ್ನು ಒಪ್ಪಿಕೊಳ್ಳಬಾರದು ಎಂದು ಹೇಳಿದರು. ನಂತರ ಸಾಧನೆ ಮಾಡಿದ ವಿದ್ಯಾಥರ್ಿಗಳನ್ನು ಅವರು ಸನ್ಮಾನಿಸಿದರು. ಪ್ರಾಚಾರ್ಯ ಡಾ. ಎ. ಎಸ. ದೇಶಪಾಂಡೆ ಅಧ್ಯಕ್ಷೀಯ ನುಡಿಗಳನ್ನಾಡುತ್ತಾ ವಿದ್ಯಾಥರ್ಿಗಳನ್ನು ಅಭಿನಂದಿಸಿ ಸರಿಯಾದ ಯೋಜನೆ ಮತ್ತು ವ್ಯವಸ್ಥಿತಾಗಿ ಸಮಯವನ್ನು ನಿರ್ವಹಿಸಿದರೆ ಇಂದಿನ ಎಲ್ಲ ವಿದ್ಯಾಥರ್ಿಗಳು ಕ್ರೀಡೆಯಲ್ಲಿ ಶ್ರೇಷ್ಠ ಸಾಧನೆ ಮಾಡಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ, ಅಖಿಲ ಭಾರತ ಅಂತರ ವಿಶ್ವವಿದ್ಯಾಲಯದ ದೇಹದಾಡ್ರ್ಯ ಸ್ಪಧರ್ೆಯಲ್ಲಿ ಚಿನ್ನದ ಪದಕ ಗೆದ್ದ ವಿದ್ಯಾಥರ್ಿ ವಿಕ್ರಂ ಧಾಮಣಕರ್ ಇವರಿಗೆ ಟ್ರೋಫಿ ಮತ್ತು 10,000 ರೂ. ನಗದು ಬಹುಮಾನವನ್ನು ನೀಡಿ ಗೌರವಿಸಿದರು. ಜಿಐಟಿಯ 12 ವಿದ್ಯಾಥರ್ಿಗಳು ಯೂನಿವಸರ್ಿಟಿ ಬ್ಲೂಸ್ ಆಗಿ ಆಯ್ಕೆಯಾಗಿದ್ದಾರೆ ಮತ್ತು ಇವರಿಗೆ ಟ್ರೋಫಿ ಮತ್ತು 2,500 ರೂ.ಗಳನ್ನು ನಗದು ಬಹುಮಾನವಾಗಿ ನೀಡಿ ಗೌರವಿಸಲಾಯಿತು. ದೈಹಿಕ ಶಿಕ್ಷಣ ವಿಭಾಗದ ನಿದರ್ೆಶಕ ಡಾ. ಪಿ. ವಿ. ಕಡಗದಕೈ ಸ್ವಾಗತಿಸಿದರು, ದೈಹಿಕ ಶಿಕ್ಷಣ ವಿಭಾಗದ ಚೇರಮನ್ ಪ್ರೊ. ರಮೇಶ್ ಮೇದಾರ್ ವಾಷರ್ಿಕ ವರದಿಯನ್ನು ಓದಿದರು. ಮೃದುಲಾ ಹಲಗೇಕರ್ ವಂದಿಸಿದರು, ವೇದಾ ವಜರ್ಿ ನಿರೂಪಿಸಿದರು. ಈ ಸಮಯದಲ್ಲಿ ಕ್ರೀಡಾಪಟುಗಳು, ಎಲ್ಲ ವಿಭಾಗದ ಮುಖ್ಯಸ್ಥರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾಥರ್ಿಗಳು ಹಾಜರಿದ್ದರು.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 