ಕ್ರಿಸ್ಟಿಯನ್ಸ್ ಪಾಸ್ಟರ್ಸ ವೆಲ್ಫೇರ್ ಸಂಘದ ನೂತನ ಅಧ್ಯಕ್ಷರಾಗಿ ಪಾಲ್ ಪಂಪಾಪತಿ ಆಯ್ಕೆ
ಕಂಪ್ಲಿ:27 ಪಟ್ಟಣದ ನ್ಯೂ ಲೈಫ್ ಕ್ರೈಸ್ ಚರ್ಚ್‌ನಲ್ಲಿ ತಾಲೂಕು ಕ್ರಿಸ್ಟಿಯನ್ಸ್ ಪಾಸ್ಟರ್ಸ ವೆಲ್ಫೇರ್ ಅಸೋಸಿಯನ್ ಸಂಘಕ್ಕೆ ಚುನಾವಣೆ ನಡೆಯಿತು. ತಾಲೂಕು ಕ್ರಿಸ್ಟಿಯನ್ಸ್ ಪಾಸ್ಟರ್ಸ ವೆಲ್ಫೇರ್ ಅಸೋಸಿಯನ್ ಸಂಘದ ನೂತನ ಅಧ್ಯಕ್ಷರಾಗಿ ಎಲ್.ಷಡ್ಡಾಯ ಚರ್ಚ್‌ನ ಪಾಸ್ಟರ್ ಪಾಲ್ ಪಂಪಾಪತಿ, ಉಪಾಧ್ಯಕ್ಷರಾಗಿ ಪಾಸ್ಟರ್ ಇಸ್ರಾಯಲ್, ಕಾರ್ಯದರ್ಶಿಯಾಗಿ ಡ್ಯಾನಿಯಲ್, ಖಜಾಂಚಿಯಾಗಿ ರಾಜು ಮೈತ್ರಿ, ಸಹ ಖಜಾಂಜಿಯಾಗಿ ರವಿಕುಮಾರ್, ಸಲಹಾ ಸಮಿತಿ ಸದಸ್ಯರಾಗಿ ಪಾಸ್ಟರ್ ಪ್ರಸಾದ್‌ರಾವ್, ಮತ್ತಾಯ, ಸಾಂಬಯ್ ರೆಡ್ಡಿ , ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಬಿ.ರಾಜು ತಿಮೋತಿ ಯನ್ನಪ್ಪ, ಶ್ಯಾಲೋಂಮ್, ಶ್ರೀನಿವಾಸ ಆಯ್ಕೆಗೊಂಡರು. ಚುನಾವಣಾಧಿಕಾರಿಯಾಗಿ ಪಾಸ್ಟರ್ ಬಿ.ರಾಜು ಕಾರ್ಯನಿರ್ವಹಿಸಿದರು.ನಂತರ ನೂತನ ಪದಾಧಿಕಾರಿಗಳಿಗೆ ಮಾಲಾರೆ್ಣಯೊಂದಿಗೆ ಗೌರವಿಸಿದರು. ಸೇರಿ ಅನೇಕರಿದ್ದರು