ಸಂವಿಧಾನ ವಿರೋಧಿ ಸೂಚನಾ ಪತ್ರ ಹರಿದು ಆಕ್ರೋಶ
ಲೋಕದರ್ಶನ ವರದಿ,
ಜಮಖಂಡಿ : ಸಂವಿಧಾನ ಸಮರ್ಪಣಾ ದಿನವನ್ನು ಬ್ರಾಹ್ಮಣ ಶ್ರೇಷ್ಠತೆ ಪ್ರತಿಪಾದಿಸುವ ಚಾತುರ್ವರ್ಣಮತ್ತು ತಾರತಮ್ಯದ ಜಾತಿಪದ್ಧತಿಯ ವೈಭವೀಕರಣ ದಿನವನ್ನಾಗಿ ಬದಲಾಯಿಸಲು ಹೊರಟಿರುವ ಕೇಂದ್ರ ಸರಕಾರದ ವಿರುದ್ಧ ದಲಿತ ಸಂಘರ್ಷ ಸಮಿತಿಗಳ ಐಕ್ಯತಾ ಹೋರಾಟ ಚಾಲನಾ ಸಮಿತಿ ತೀವ್ರವಾಗಿ ಖಂಡಿಸಿ. ಸಂವಿಧಾನ ವಿರೋಧಿ ಸೂಚನಾ ಪತ್ರವನ್ನು ಹರಿದು ಹಾಕುವ ಮೂಲಕ ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು.
ನಗರದ ಡಾ, ಬಿ.ಆರ್ ಅಂಬೇಡ್ಕರ ಅವರ ವೃತ್ತದಲ್ಲಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವಿಸಿ. ನಂತರ ಮಾತನಾಡಿದರು. ಸಂವಿಧಾನ ಶಿಲ್ಪಿ ಡಾ, ಬಿ. ಆರ್. ಅಂಬೇಡ್ಕರರವರು ರಚಿಸಿದ ಸಂವಿಧಾನವನ್ನು ಸ್ವತಃ ನ. 26, 1949 ರಂದು ಸ್ವತಂತ್ರ ಭಾರತದ ಜನತೆಗೆ ಸಮರ್ಪಿಸಿದ್ದರು. ಆ ದಿನದ ನೆನಪಿಗೆ ನವೆಂಬರ್ 26ನ್ನು ಸಂವಿಧಾನ ಸಮರ್ಪಣಾ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಪ್ರಧಾನಿ ಮೋದಿಜಿ ಅವರ ನೇತೃತ್ವದ ಕೇಂದ್ರ ಸರಕಾರವೂ ಸಹ ಸಂವಿಧಾನ ಸಮರ್ಪಣಾ ದಿನವನ್ನು ಆಚರಿಸುತ್ತಿದೆ. ಆದರೆ ಭಾರತದ ಪ್ರಜಾಪ್ರಭುತ್ವವನ್ನೇ ಅಣಕಿಸುವ ರೀತಿಯಲ್ಲಿ ಸ್ವಾತಂತ್ರ್ಯ, ಸಮಾನತೆ, ಬಂಧುತ್ವ ಮತ್ತು ಸಾಮಾಜಿಕ ನ್ಯಾಯಗಳಿಗೆ ವಿರುದ್ಧವಾದ ಧೋರಣೆ ಹೊಂದಿರುವ ವೇದಗಳಲ್ಲಿಯೇ ಪ್ರಜಾ ಪ್ರಭುತ್ವವಿತ್ತು ಎಂಬ ಹಸಿ ಸುಳ್ಳು ಹೇಳಲು ಹೊರಟಿದೆ ಎಂದು ಆರೋಪಿಸಿ, ಸಂವಿಧಾನ ವಿರೋಧಿ ಸೂಚನಾ ಪತ್ರವನ್ನು ಹರಿದು ಹಾಕುವ ಮೂಲಕ ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು.
ಜಿಲ್ಲಾ ಸಂಚಾಲಕ ಪರಶುರಾಮ ಕಾಂಬಳೆ, ಸದಾಶಿವ ಐನಾಪೂರ, ಬಸವರಾಜ ದೊಡಮನಿ, ಸಂಗಮೇಶ ಕಾಂಬಳೆ, ಶ್ಯಾಮರಾವ ಮಾದರ ಯಾಕೂಬ ಕಪಡೆವಾಲಾ, ಯಾಸೀನ ಲೋದಿ, ಸುರೇಶ ನಡಗೇರಿ, ಪರಮಾನಂದ ಕಾಂಬಳೆ, ಬಸವರಾಜ ಬನ್ನೂರ, ವಿಠ್ಠಲ ಕಾಂಬಳೆ, ಪ್ರೇಮ ಬಳೋಲಗಿಡದ ಹಣಮಂತ ಕಾಂಬಳೆ ಸೇರಿದಂತೆ ಅನೇಕರು ಇದ್ದರು,