ಜಮಖಂಡಿ

ಯೋಗ, ಜ್ಞಾನ ನೀಡುವ ಜೊತೆಗೆ ಆಟೋಟ ಸ್ಪರ್ಧೆ ಏರ್ಪಡಿಸಿ: ರೆಡ್ಡಿ

ಯೋಗ, ಜ್ಞಾನ ನೀಡುವ ಜೊತೆಗೆ ಆಟೋಟ ಸ್ಪರ್ಧೆ  ಏರ್ಪಡಿಸಿ: ರೆಡ್ಡಿ
ನಗರದ ಹೊರ ವಲಯದಲ್ಲಿನ ಉಪ ಕಾರಾಗೃಹಕ್ಕೆ ಬೆಳಗಾವಿಯ ಕಾರಾಗೃಹಗಳ ಉಪ ಮಾಹಾ ನಿರೀಕ್ಷಕ ಉತ್ತರ ವಲಯ ಅಧಿಕಾರಿ ಪಿ,ವ್ಹಿ,ಆನಂದ

ಲೋಕದರ್ಶನ ವರದಿ,

ಜಮಖಂಡಿ 13: ಉಪ ಕಾರಾಗೃಹದಲ್ಲಿನ ಬಂಧಿಖಾನೆಯ ವ್ಯಕ್ತಿಗಳಿಗೆ ಕಲಿಕೆ ಕಾರ್ಯಕ್ರಮ, ವಯಸ್ಕರ ಶಿಕ್ಷಣ, ಗ್ರಂಥಾಲಯ ಸೌಲಭ್ಯ,  ಯೋಗ, ಜ್ಞಾನ ನೀಡುವ ಜೊತೆಗೆ ಆಟೋಟ ಸ್ಪರ್ಧೆ ಯನ್ನು ಏರ್ಪಡಿಸಬೇಕು. ಸಾಂಸ್ಕ್ರತಿಕ ಕಾರ್ಯಕ್ರಮ ನಡೆಸಬೇಕೆಂದು ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದೆನೆ ಎಂದು ಬೆಳಗಾವಿಯ ಕಾರಾಗೃಹಗಳ ಉಪ ಮಾಹಾ ನಿರೀಕ್ಷಕ ಉತ್ತರ ವಲಯ ಅಧಿಕಾರಿ ಪಿ,ವ್ಹಿ,ಆನಂದ ರೆಡ್ಡಿ ತಿಳಿಸಿದರು.

ನಗರದ ಹೊರ ವಲಯದಲ್ಲಿನ ಉಪ ಕಾರಾಗೃಹಕ್ಕೆ ಭೇಟಿ ನೀಡಿ. ಬಂಧಿಖಾನೆಯಲ್ಲಿ ಇರುವ ವ್ಯಕ್ತಿಗಳ ಕುಂದುಕೊರತೆಗಳನ್ನು ಆಲಿಸಿ, ನಿರುಪಯುಕ್ತ ಮೋಟರ್ ಬೈಕ್ ಹರಾಜು ಮಾಡಿ ಮಾತನಾಡಿದರು.

 ಬಂಧಿಖಾನೆಯಲ್ಲಿ ಇರುವ ವ್ಯಕ್ತಿಗಳನ್ನು ಸರಿಯಾದ ಸಮಯಕ್ಕೆ ನ್ಯಾಯಲಗಳಿಗೆ ಹಾಜರು ಪಡಿಸಲು ಸೂಚನೆ ನೀಡಲಾಗಿದೆ. ಅವರಿಗೆ ಆರೋಗ್ಯ ತಪಾಸಣೆಯನ್ನು ಮಾಡಲು ವೈದ್ಯಾಧಿಕಾರಿಗಳು ವಾರದಲ್ಲಿ ಒಂದು ಬಾರಿ ತಪಾಸಣೆ ಮಾಡುತ್ತಾರೆ. ಕಾರಾಗೃಹದ ಆವರಣವು ಸ್ವಚ್ಚತೆಯನ್ನು ಕಾಪಾಡಿಕೊಂಡು ಚನ್ನಾಗಿ ಇಟ್ಟಿದ್ದಾರೆ ಎಂದರು.

ಬಂಧಿಖಾನೆಗಲ್ಲಿ ಇರುವ ಜನರಿಗೆ ಮಾನವ ಹಕ್ಕುಗಳನ್ನು ಕಾಪಾಡಿಕೊಳ್ಳಲಿಕೆ ಹಾಗೂ ಮನಪರಿವರ್ತನೆ ಮಾಡಿಕೊಳ್ಳಲು ನಮ್ಮ ಇಲಾಖೆಯ ಅಧಿಕಾರಿಗಳ ಜವಾಬ್ದಾರಿಯು ಬಹಳ ಇರುತ್ತದೆ. ಅವರನ್ನು ಒಳ್ಳೆಯ ವ್ಯಕ್ತಿಯನ್ನಾಗಿಸುವ ಗುರಿಯನ್ನು ನಮ್ಮ ಅಧಿಕಾರಿಗಳು ಮಾಡುತ್ತಾರೆಂದು ಭಾವಿಸಿದೆನೆ. ಅವರು ಸಹ ತಮ್ಮ ಮನಸನು ಪರಿವರ್ತನೆ ಹೊಂದಿ ಒಳ್ಳೆಯ ನಡೆತೆಯ ವ್ಯಕ್ತಿಗಳು ಆಗುತ್ತಾರೆ ಎಂದರು.

ನಂತರ ಉಪ ಕಾರಾಗೃಹ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕ್ವಾಟಸರ್್ಗಳನ್ನು ಪರಿಶೀಲನೆ ಮಾಡಿದರು. ಅಲ್ಲಿರುವ ಕುಂದುಕೊರತೆಗಳನ್ನು ಆಲಿಸಿ. ಅವುಗಳನ್ನು ದುರಸ್ತೆ ಮತ್ತು ಸುಧಾರಣೆ ಮಾಡಲಿಕ್ಕೆ ಇಲಾಖೆಯ ಅಧಿಕಾರಗಳಿಗೆ ಸೂಚನೆಯನ್ನು ನೀಡಿದ್ದರು. ನಿರುಪಯುಕ್ತ ಮೋಟರ್ ಬೈಕ್ ಹರಾಜಿನಲ್ಲಿ 5 ಜನ ಭಾಗವಿಸಿದರು. ಅದರಲ್ಲಿ ಒಬ್ಬರಿಗೆ ಹರಾಜಿನಲ್ಲಿ ಬೇಡಿಕೆಯಾದ ಹಿನ್ನಲೆಯಲ್ಲಿ ಅವರಿಗೆ ಹಸ್ತಾಂತರವನ್ನು ಮಾಡಿದರು. 

ಜಮಖಂಡಿ ಉಪ ಕಾರಾಗೃಹ ಅಧೀಕ್ಷಕ ಉತ್ತಮ ಪಾಟೀಲ, ಬಿ,ಪಿ,ಹಿರೇಮಠ, ಬಿ,ಎಸ್,ಕರಿಗಾರ, ಶಹರ ಠಾಣೆ ಎ,ಎಸ್,ಐ, ಅಣ್ಣಾಸಾಹೇಬ ರೆಂದಾಳೆ. ಫಕೀರಪ್ಪ ಕರಿಗಾರ ಸೇರಿದಂತೆ ಸಂಸ್ಥೆಯ ಮಹಿಳಾ ಸಿಬ್ಬಂದಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.


, 

ಸುದ್ದಿ ಓದಿ