ವಿಜೃಂಭಣೆಯಿಂದ ನೆರವೇರಿದ ನೂತನ ಗೋಪುರ ಮತ್ತು ಕಳಸಾರೋಹಣ
ಕುಕನೂರು: ತಾಲೂಕಿನ ಮಂಡಲಗಿರಿ ಗ್ರಾಮದ ದ್ಯಾಮಾಂಬಿಕ ದೇವಿ ಸೇವಾ ಸಮಿತಿ ಮಂಡಲಗಿರಿ ಇವರ ವತಿಯಿಂದ ದ್ಯಾಮಾಂಬಿಕ ದೇವಿ ದೇವಾಲಯದ ಗೋಪುರ ಸ್ಥಾಪನೆ ಹಾಗೂ ಕಳಸ ರೋಹಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ವೇದಿಕೆಯ ಉದ್ದೇಶಿಸಿ ಸುಕ್ಷೇತ್ರ ಲೇಬಗೇರಿ ಲಕ್ಷೇಂದ್ರ ಮಹಾಸ್ವಾಮಿಗವರ ಮಠದ ಪೂಜ್ಯರಾದ ನಾಗಮೂರ್ತೆಂದ್ರಮಹಾಸ್ವಾಮಿಗಳು ಕಳಸಾರೋಹಣ ಹಾಗೂ ನೂತನ ಗೋಪುರದ ಲೋಕಾರ್ಪಣೆ ನೆರವೇರಿಸಿ ಮಾತನಾಡುತ್ತಾ ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಮನುಷ್ಯನ ಹೊರ ಜಗತ್ತಿನ ಒತ್ತಡಗಳನ್ನು ಮರೆತು ಪೂಜೆಗಳಲ್ಲಿ ಮಗ್ನರಾಗುವುದರಿಂದ ಮಾನಸಿಕ ಒತ್ತಡವನ್ನು ಹತೋಟಿಗೆ ತರಬಹುದಾಗಿದೆ ಹಾಗೂ ಹಿರಿಯರ ಮಾರ್ಗದರ್ಶನದಲ್ಲಿ ನಡೆದರೆ ಬಾಳಿನಲ್ಲಿ ಶಾಂತಿ ನೆಮ್ಮದಿ ಕಾಣಬಹುದ ಆದ್ದರಿಂದ ಪ್ರತಿಯೊಬ್ಬರೂ ಹಿರಿಯರ ಮಾತುಗಳನ್ನು ಅನುಸರಿಸುತ್ತ ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ. ಗ್ರಾಮದಲ್ಲಿ ಧಾರ್ಮಿಕ ಚಟುವಟಿಕೆಗಳು ಹೆಚ್ಚಾಗಿ ಆಯೋಜನೆಗೊಳ್ಳಲಿ ಎಂದು ಆಶೀರ್ವಚನ ನುಡಿದರು.
ಗ್ರಾಮದ ಪ್ರಮುಖರಾದ ಶರಣಬಸವನಗೌಡ ಹೊರಪೇಟೆ ಮಾತನಾಡಿ ಧರ್ಮದಿಂದಲೇ ಶಾಂತಿ ಎಂದು ಹಿರಿಯರ ವಾಕ್ಯದಂತೆ ಪ್ರತಿಯೊಬ್ಬರ ಅವರವರ ಧರ್ಮಕ್ಕನುಗುಣವಾಗಿ ದಾನ ಧರ್ಮದಂತಹ ಕಾರ್ಯಗಳಲ್ಲಿ ಪಾಲ್ಗೊಂಡಾಗ ಬದುಕು ಸಾರ್ಥಕ ವಾಗುತ್ತದೆ. ಪ್ರಪಂಚದ ಎಲ್ಲಾ ಧರ್ಮದ ಸಾರವು ಒಂದೇ ಆಗಿದ್ದು ಅನುಸರಿಸುವ ಪದ್ಧತಿ ಮತ್ತು ತತ್ವ ಮಾರ್ಗಗಳು ಮಾತ್ರ ವಿಭಿನ್ನವಾಗಿವೆ ಆದ್ದರಿಂದ ಇಲ್ಲಿ ಪ್ರತಿಯೊಬ್ಬರೂ ಸಮಾನರಾಗಿದ್ದು ಮೇಲು ಕೇಳ ಎಂಬ ಮನೋಭಾವನೆಯನ್ನು ತೆಗೆದು ಹಾಕಬೇಕು ಎಂದರು.
ಗೋಪುರ ನಿರ್ಮಾಣದ ದಾನಿಗಳಾದ ಪ್ರಕಾಶಗೌಡ ಪಾಟೀಲ ಮಾತನಾಡುತ್ತಾ ತಾವು ಗ್ರಾಮದ ಅನಿವಾಸಿ ಯಾಗಿದ್ದು ಬೇರೆ ಪ್ರದೇಶದಲ್ಲಿ ಜೀವನ ನಡೆಸುತ್ತಿದ್ದರು ಸಹ ಗ್ರಾಮದ ಅಭಿವೃದ್ಧಿಗಾಗಿ ತಮ್ಮ ಜೀವ ಮಿಡಿಯುತ್ತಿದ್ದು ತಮ್ಮ ತಂದೆಯವರ ಆಸೆಯಂತೆ ಹುಟ್ಟೂರಿಗೆ ಏನಾದರೂ ಕೊಡುಗೆ ನೀಡಬೇಕು ಎಂಬ ಮಹದಾಸೆಯಿಂದ ತಮ್ಮ ತಂದೆಯವರ ಸವಿ ನೆನಪಿನಗೋಸ್ಕರ ಈ ಕಾರ್ಯ ಮಾಡಿದ್ದು. ಇದಕ್ಕೆಲ್ಲ ತಮ್ಮ ತಂದೆ ಹಾಗೂ ಗ್ರಾಮದ ಪ್ರಮುಖರ ಪ್ರೇರಣೆ ಇಂದ ಸಾಧ್ಯವಾದ ಕಾರ್ಯ ಎಂದು ಹೇಳುತ್ತಾ ಮಾನವರು ಸಮಾಜ ನಮಗೆ ಏನು ಕೊಟ್ಟಿದೆ ಎಂಬುದಕ್ಕಿಂತ ಸಮಾಜಕ್ಕೆ ನಾನು ಏನು ಕೊಡುಗೆ ನೀಡಿದ್ದೇನೆ ಎಂದು ತಮ್ಮಷ್ಟಕ್ಕೆ ತಾವು ವಿಚಾರ ಮಾಡಿಕೊಂಡಾಗ ಪ್ರತಿಯೊಬ್ಬರಲ್ಲೂ ದಾನ ಧರ್ಮದ ವಿಚಾರಗಳು ಮೂಡುತ್ತವೆ ನಾನು ನನ್ನ ಜೀವನದ ಆದಾಯದಲ್ಲಿ ಕನಿಷ್ಠ 40 ಪ್ರತಿಶತ ಆದಾಯವನ್ನು ದಾನವಾಗಿ ನೀಡುತ್ತಿದ್ದೇನೆ ಆದ್ದರಿಂದ ಮಾನಸಿಕ ನೆಮ್ಮದಿಯನ್ನು ಜೀವನದಲ್ಲಿ ಕಂಡುಕೊಂಡಿದ್ದೇನೆ ಎಂದು ತಿಳಿಸಿದರು. ಗ್ರಾಮದ ಪ್ರಮುಖ ಹಂಚಾಲಪ್ಪ ತಳವಾರ್ ಸ್ವಾಗತ ನುಡಿಗಳನ್ನಾಹಾಡಿದರೆ , ಶ್ರೀಧರ ದೇಸಾಯಿ ಕಾರ್ಯಕ್ರಮದ ವಂದನಾರ್ಪಣೆ ಮಾಡಿದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ದ್ಯಾಮಾಂಬಿಕಾ ದೇವಿಯ ಬೃಹತ್ ಭಾವಚಿತ್ರದ ಹಾಗೂ ನೂತನ ಕಳಸದ ಮೆರವಣಿಗೆಯನ್ನು ಕುಂಬಾರೋಹಣ ಮಂಗಳವಾದ್ಯಗಳೊಂದಿಗೆ ಅದ್ದೂರಿಯಾಗಿ ಮಾಡಲಾಯಿತು. ಮಧ್ಯಾಹ್ನ ಅನ್ನಸಂತರ್ಪಣೆಯ ಆ ಯೋಜನೆ ಮಾಡಲಾಗಿತ್ತು.
ಪ್ರಮುಖರಾದ ಕಮಲಮ್ಮ ಹನುಮಂತ ಗೌಡ ಪಾಟೀಲ, ನಿಂಗರಾಜ ಪಾಟೀಲ, ಕೆಲಸದಾನಿಗಳಾದ ಶಿವಪ್ಪ ಚೆನ್ನವೀರಪ್ಪ ಅಂಗಡಿ, ಕೊಪ್ಪಳ ನಗರಸಭೆ ಸದಸ್ಯರಾದ ಮಲ್ಲಪ್ಪ ಕವಲೂರ, ಹನುಮಂತಪ್ಪ ಉಪ್ಪಾರ, ಹನುಮಂತಪ್ಪ ನಾಗನಗೌಡರು, ಜಯಪ್ರಕಾಶ ಗೌಡ ಪೋಲೀಸ ಪಾಟೀಲ,ಶಿವಮ್ಮ ಬಿನ್ನಾಳ,ವೆಂಕಟೇಶ ಈಳಿಗೆರ, ಮಹಮ್ಮದ್ ಪಾಷಾ ಮುಲ್ಲಾ, ಹರೀಶ, ಸಿದ್ದನಗೌಡ ಪೊಲೀಸ್ ಪಾಟೀಲ, ಈರಪ್ಪ ಉಪ್ಪಾರ, ಹನುಮೇಶ, ಮಹಮ್ಮದ್ ರಫಿ ಗ್ರಾಮ ಪಂಚಾಯಿತಿ ಸರ್ವ ಸದಸ್ಯರು ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು