ಅರಕೇರಿಯಲ್ಲಿ ಪ್ರಕೃತಿ ಚಿಕಿತ್ಸೆಯ ಸಮಾರೋಪ ಸಮಾರಂಭ
ಲೋಕದರ್ಶನ ವರದಿ
ವಿಜಯಪುರ 29: ಮನುಷ್ಯನ ದೇಹದಲ್ಲಿ ಹುದುಗಿರುವ ಕಲ್ಮಶಗಳನ್ನು ಹೊರ ಹಾಕುವ ಅದ್ಭುತ ಶಕ್ತಿ ಪ್ರಕೃತಿ ಚಿಕಿತ್ಸೆಗಿದೆ. ಹಾಗಾಗಿ ಪ್ರತಿಯೊಬ್ಬ ಪುರುಷ ಹಾಗೂ ಮಹಿಳೆಯರು ರೋಗ-ರುಜಿನುಗಳಿಂದ ಪಾರಾಗಬೇಕೆಂದರೆ ಶರೀರವನ್ನು ಪ್ರಕೃತಿ ಚಿಕಿತ್ಸೆಗೊಳಪಡಿಸಿಕೊಳ್ಳಬೇಕೆಂದು ಹುಲಕೋಟಿಯ ಕೆ.ಎಚ್. ಪಾಟೀಲ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಸಂಸ್ಥೆಯ ಮುಖ್ಯ ವೈದ್ಯಾಕಾರಿ ಡಾ. ಸತೀಶ ಹೊಂಬಾಳಿ ಹೇಳಿದರು.
ಮಾನವ ಧರ್ಮ ಸೇವಾ ಸಂಸ್ಥೆ, ಬಾಗಲಕೋಟ ತಾಲೂಕಿನ ಶಿರೂರದ ಶಿವಯೋಗ ಮತ್ತು ನಿಸರ್ಗ ಚಿಕಿತ್ಸಾ ಕೇಂದ್ರ ಹಾಗೂ ಶ್ರೀದೇವಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಹಾಗೂ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ತಾಲೂಕಿನ ಅರಕೇರಿ ಸೋಮನಿಂಗ ಕಟಾವಿ ಅವರ ತೋಟದಲ್ಲಿ ಹಮ್ಮಿಕೊಂಡಿದ್ದ 5 ದಿನಗಳ ಪ್ರಕೃತಿ ಚಿಕಿತ್ಸಾ ಶಿಬಿರದ ಸಮಾರೋಪವನ್ನುದ್ದೇಶಿಸಿ ಅವರು ಮಾತನಾಡಿದರು.
ಒತ್ತಡದ ಜೀವನದಲ್ಲಿ ಯಾರಿಗೂ ವ್ಯವಧಾನ ಸಿಗುತ್ತಿಲ್ಲ. ಹೀಗಾಗಿ ಜವಾರಿ ಊಟದ ಬದಲಿಗೆ ಜಂಕ್ ಫುಡ್ಗೆ ಜೋತು ಬಿದ್ದಿದ್ದಾರೆ. ಈ ಅವ್ಯವಸ್ಥೆಯಿಂದಾಗಿ ಪ್ರತಿಯೊಬ್ಬರ ದೇಹಗಳು ಕಲ್ಮಶಗಳ ತಾಣವಾಗಿವೆ. ಪರಿಣಾಮ ನಾನಾ ರೋಗಗಳಿಂದ ಬಳಲುತ್ತಿದ್ದಾರೆ. ಅದೆಷ್ಟೇ ಹಣ ಖಚರ್ು ಮಾಡಿದರೂ, ರೋಗ ವಾಸಿಯಾಗುತ್ತಿಲ್ಲ. ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡರೂ, ರೋಗಗಳು ವಾಸಿಯಾಗುತ್ತಿಲ್ಲ. ಬದಲಿಗೆ ಅದೇ ಬಾಡಿದ ಮುಖದೊಂದಿಗೆ ಮನೆ ಪ್ರವೇಶಿಸುವಂತಾಗಿದೆ. ಆದರೆ ಪ್ರಕೃತಿ ಚಿಕಿತ್ಸೆ ಇದಕ್ಕೆ ತದ್ವಿರುದ್ಧ. ರೋಗ ಬಾಧೆಯಿಂದಾಗಿ ಬಾಡಿದ ಮುಖದೊಂದಿಗೆ ಶಿಬಿರದಲ್ಲಿ ಭಾಗಿಯಾದರೆ, ಶಿಬಿರದಂತ್ಯಕ್ಕೆ ವಿಶಿಷ್ಠ ತೇಜಸ್ಸಿನೊಂದಿಗೆ ಮನೆ ಪ್ರವೇಶಿಸಬಹುದಾಗಿದೆ. ಹಾಗಾಗಿ ಮನುಷ್ಯರನ್ನು ಕಾಡುವ ಪ್ರತಿ ವ್ಯಾಗಳಿಗೆ ಈ ಪ್ರಕೃತಿ ಚಿಕಿತ್ಸೆ ರಾಮಬಾಣವಾಗಿದೆ ಎಂದರು.
ಆರೋಗ್ಯವಂತ ಶರೀರ ಆತ್ಮದ ಅರಮನೆಯಾಗಿದ್ದರೆ, ಅನಾರೋಗ್ಯ ಶರೀರ ಆತ್ಮದ ಸೆರೆಮನೆಯಾಗಿದೆ. ಪ್ರತಿಯೊಬ್ಬರೂ ಆರೋಗ್ಯದಿಂದ ಬದಕುಲು ಪ್ರಕೃತಿ ಚಿಕಿತ್ಸೆ ವರದಾನವಾಗಿದೆ. ಹಾಗಾಗಿ ಆರೋಗ್ಯ ಪೂರ್ಣ ಜೀವನ ಶೈಲಿ ನಿಮ್ಮದಾಗಬೇಕೆಂದರೆ ಪ್ರಕೃತಿ ಚಿಕಿತ್ಸೆ ಪಡೆದುಕೊಳ್ಳುವುದು ಇಂದಿನ ಅವಶ್ಯಕತೆಯಾಗಿದೆ ಎಂದರು. ಅಂಥ ಅದ್ಭುತ ಶಕ್ತಿ ಪ್ರಕೃತಿ ಚಿಕಿತ್ಸೆಯಲ್ಲಿದೆ. ಇದು ಮನುಷ್ಯನ ದೇಹವನ್ನು ಸಂಪೂರ್ಣ ಶುದ್ಧೀಕರಣಗೊಳಿಸಲಿದೆ ಎಂದರು. ಜೊತೆಗೊಂದಿಷ್ಟು ಉಪವಾಸ ಮಾಡುವುದರ ಮೂಲಕ ಪ್ರತಿಯೊಬ್ಬರೂ ಸದೃಢ ಕಾಯ ಹೊಂದಬಹುದಾಗಿದೆ ಎಂದರು. ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ನ ಆಯುಕ್ತ ಸಿದ್ಧಣ್ಣ ಸಕ್ರಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಕ್ಕಳೊಟ್ಟಿಗೆ ಪೋಷಕರು ಮ್ಯಾಗಿ ಎಂಬ ಹೊಲಸು ಆಹಾರ ಸೇವಿಸುತ್ತಿದ್ದಾರೆ. ಅಡುಗೆ ಸಿದ್ಧಪಡಿಸಲಿಕ್ಕೆ ಯಂತ್ರಗಳು ದಾಂಗುಡಿಯಿಟ್ಟಿವೆ. ಬೀಸುವುದು, ಕುಟ್ಟುವಂಥ ಶ್ರಮದಿಂದ ಮಹಿಳೆಯರು ವಿಮುಖರಾಗಿದ್ದರಿಂದ ಬಹುತೇಕ ಮಹಿಳೆಯರು ರೋಗಗಳ ಆಗರವಾಗಿದ್ದಾರೆ. ಇದರಿಂದ ಪಾರಾಗಲು ಪ್ರಕೃತಿ ಚಿಕಿತ್ಸೆಯೊಂದೇ ಪರಿಹಾರವಾಗಿದೆ ಎಂದರು.
ಶಿರೂರ ಮಹಾಂತ ತೀರ್ಥದ ಬಸವಲಿಂಗ ಸ್ವಾಮೀಜಿ ಇದಕ್ಕೂ ಮುನ್ನ ಆಶೀರ್ವಚನ ನೀಡಿದರು. ಪ್ರಕೃತಿ ಚಿಕಿತ್ಸಾ ತಜ್ಞ ಎಸ್.ಆರ್. ಮಠಪತಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಘಟಕರಾದ ಸೋಮನಿಂಗ ಕಟಾವಿ, ಅಪ್ಪಾಸಾಬ ಸೊನ್ನಗಿ, ನ್ಯಾಯವಾದಿ ಮನೋಹರ ಶಿವಣಗಿ, ಬಸವರಾಜ ಕೊಳ್ಳಿ, ವಾಣಿಜ್ಯ ತೆರಿಗೆ ಇಲಾಖೆಯ ಅಶೋಕ ಇಲಕಲ್, ಹುಬ್ಬಳ್ಳಿ ಪಿರಾಮಿಡ್ ಕೇಂದ್ರದ ಮಹಾಮನೆ ಮತ್ತಿತರರಿದ್ದರು. 27 ಶಿಬಿರಾಥರ್ಿಗಳು ಪ್ರಕೃತಿ ಚಿಕಿತ್ಸೆಯಲ್ಲಿ ಪಾಲ್ಗೊಂಡಿದ್ದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 