ಶ್ರೇಷ್ಠವಾದ ಮಾನವ ಜನ್ಮ ಸಾರ್ಥಕಮಾಡಿಕೊಳ್ಳಿ : ಸಾಹಿತಿ ಗೋಪಾಲ ಚಪಣಿ
Make the greatest human birth worthwhile: Literary writer Gopal Chapani
ಯಮಕನಮರಡಿ 07 : ಶ್ರೇಷ್ಠವಾದ ಮಾನವ ಜನ್ಮವೂ ಲಭಿಸಬೇಕಾದರೇ ಸುಮಾರು 80 ಸಾವಿರ ಕೋಟೀಜೀವರಾಶಿ ತಿರುಗಿ ತಿರುಗಿ ಬಂದ ನಂತರ ಕಡೆ ಜನ್ಮ ಅದುವೇ ಮಾನವ ಜನ್ಮ ಪ್ರತಿಯೊಬ್ಬರು ಈ ಮಾನವ ಜನ್ಮವನ್ನು ಸಾರ್ಥಕ ಮಾಡಿಕೊಳ್ಳಬೆಕೆಂದು ದಿನಾಂಕ 5 ರಂದು ಹತ್ತರಗಿ ಗ್ರಾಮದ ಹೋನ್ನಕ್ಕನ್ನವರ ಗಲ್ಲಿಯಲ್ಲಿ ಆಯೋಜಿಸಲಾಗಿದ್ದ ಆಧ್ಯಾತ್ಮೀಕ ಪ್ರವಚನಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ಮನುಷ್ಯರಿಗೆ ಸಿಕ್ಕಿರುವುದನ್ನು ಮಾನವ ಜನ್ಮ ಸಾರ್ಥಕಮಾಡಿಕೊಂಡರೆ ಮಾತ್ರ ಮನುಷ್ಯನು ಮನುಷ್ಯನಾಗಿ ಉಳಿಯುತ್ತಾನೆ ಅದರಿಂದಲೇ ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿಕೊಂಡು ಸನ್ಮಾನ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೆಳುತ್ತಾ ಪ್ರತಿಯೊಬ್ಬರಿಗೂ ಭಾರತ ಕಲಾ ಭೂಷನ ಪ್ರಶಸ್ತಿಗಳನ್ನು ಪಡೆಯಲು ಸಾಧ್ಯವೆಂದು ಮಾರ್ಮಿಕವಾಗಿ ಹೆಳುತ್ತಾ ಸನಾತನ ಧರ್ಮದವರಾದ ನಾವು ಪ್ರತಿಯೊಬ್ಬರು ಗುರು ಪುತ್ರರಾಗಿ ಗುರುವಿನ ಮಾರ್ಗದರ್ಶನದಲ್ಲಿ ನಡೆಯಬೇಕು ಪ್ರತಿಯೋಬ್ಬರು ಲಿಂಗಧಿಕ್ಷೇ ಪಡೆದು ಪುನಿತರಾಗಬೆಕೆಂದು ಹೇಳಿದರು.
ಸದರಿ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹತ್ತರಗಿ ಕಾರಿಮಠದ ಪೂಜ್ಯರಾದ ಗುರುಸಿದ್ದೇಶ್ವರ ಮಹಾಸ್ವಾಮಿಗಳು ವಹಿಸಿ ಆಶಿರ್ವಚನ ನಿಡಿದರು ಅದರಂತೆ ಯಮಕನಮರಡಿ ಶೂನ್ಯ ಸಂಪಾಧನಾ ಹುಣಸಿಕೊಳ್ಳಮಠದ ಉತ್ತರಾಧಿಕಾರಿಗಳಾದ ಸಿದ್ದಬಸವ ದೇವರು ಹೋಳಿ ಹಬ್ಬದ ಸಂಪ್ರದಾಯ ಕುರಿತು ಮಾತನಾಡಿದರು. ಕಾರ್ಯಕ್ರಮ ಆಯೋಜಕರಾದ ಶಿವಾನಂದ ಹೊನ್ನಕ್ಕನ್ನವರ, ಗಜಾನನ ತೆರಣಿ, ಅಶೋಕ ತವಗ, ಪರಾ್ಪ ಶಿರಗಾವಿ, ಅಮೀತ ಪಾಟೀಲ, ಶಿವಾಜಿ ಗಡಕರಿ, ಸತ್ಯಪ್ಪಾ ಮರಡಿ, ವಿನೋದ ಮರಡಿ, ಅನೀಲ ಶೇಲಾರ, ಸಿದ್ದಪ್ಪಾ ಬಿಸಿರೊಟ್ಟಿ, ಕೆಂಪಣ್ಣಾ ಸಮಯ, ಪ್ರಶಾಂತ ಹುಕ್ಕೇರಿ, ಗಣೇಶ ಹೋನ್ನಕ್ಕನವರ, ಶಿವಾನಂದ ಹೊನ್ನಕ್ಕನ್ನವರ ಶಾಂತಕುಮಾರ ಮಲಾಜಿ ಶುಭಂ ರಾಮಗೊಂಡಿ, ಸಾಗರ ಮಲಾಜಿ, ಸಚಿನ ಮರಡಿ, ಬಸವರಾಜ ಶಿರಗಾಂವಿ, ಬಸವರಾಜ ತವಗ, ಆನಂದ ಮಗದ್ದುಮ್ಮ, ಅಭಿಷೆಕ ಪಾಟೀಲ, ಮಲ್ಲಪ್ಪಾ ಮುತ್ಯನ್ನವರ, ಗಜಾನನ ತೇರಣಿ, ಈರಣ್ಣಾ ಶಿರಗಾಂವಿ ಮುಂತಾದವರು ಉಪಸ್ಥಿತರಿದ್ದರು.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 