ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಆನಂದ ನ್ಯಾಮಗೌಡ ಚಾಲನೆ
ಲೋಕದರ್ಶನ ವರದಿ,
ಜಮಖಂಡಿ21: ನಗರ ವಿವಿಧ ಬಡಾವಣೆಗಳಲ್ಲಿ 31 ಕೋಟಿ ರೂ,ಗಳ ಅನುದಾದಲ್ಲಿ ಮುಖ್ಯ ರಸ್ತೆಗಳ ಡಾಂಬರೀಕರಣ, ಸಿಸಿ ರಸ್ತೆಗಳನ್ನು ನಗರಸಭೆಯ ಸಹಯೋಗದಲ್ಲಿ ನಿರ್ಮಿಸಲಾಗುತ್ತದೆ ಎಂದು ಶಾಸಕ ಆನಂದ ನ್ಯಾಮಗೌಡ ಹೇಳಿದರು.
ಇಲ್ಲಿನ ವಿಜಯ ನಗರ, ಶಾಂತಿ ನಗರ, ಹುಡ್ಕೊ ಕಾಲೂನಿ, ಲಕ್ಷ್ಮೀ ನಗರ ಸೇರಿದ ವಿವಿಧ ಬಡಾವಣೆಗಳಲ್ಲಿ ಭೂಮಿ ಪೂಜೆ ನೇರವೇರಿಸಿ ಮಾತನಾಡಿದ ಅವರು, ಸರಕಾರದ ವಿಶೇಷ ಅನುದಾನದ 4 ಕೋಟಿ ರೂಗಳು, 2022 -23 ನೇ ಸಾಲಿನ 15 ನೇ ಹಣಕಾಸಿನ 1 ಕೋಟಿ ರೂಗಳು, ಮತ್ತು ನಗರೋಥ್ಥಾನ ನಾಲ್ಕನೇ ಹಂತದ ಅಡಿಯಲ್ಲಿ ಬರುವ 15 ಕೋಟಿ ಸೇರಿ, ಒಟ್ಟು 31 ಕೋಟಿ ರೂಗಳ ಅನುದಾದಲ್ಲಿ ನಗರದ ಎಲ್ಲ ಬಡಾವಣೆ ಮುಖ್ಯ ರಸ್ತೆಗಳ ಡಾಂಬರೀಕರಣ ಮತ್ತು ಸಿಸಿ ರಸ್ತೆಗಳನ್ನು ನಿರ್ಮಿಸಲಾಗುವದು. ಈ ಎಲ್ಲ ಕಾಮಗಾರಿಗಳು ಇಂದು ಪ್ರಾರಂಭಗೊಂಡು 1.5 ತಿಂಗಳಲ್ಲಿ ಪೂರ್ಣಗೊಳ್ಳುತ್ತವೆ ಎಂದರು.
ರಾಮತೀರ್ಥ ಹಂಚು ಕಾಲುವೆಯ ರಸ್ತೆಯು ಪೂರ್ಣವಾಗಿ ಹಾಳಾಗಿದ್ದು ಅದರ ಪುರುಜ್ಜೀವನಕ್ಕಾಗಿ ನಗರ ಸಭೆಯ ವ್ಯಾಪ್ತಿಯ ಬಸ ಡಿಪೋ ವರೆಗೆ 2 ಕೋಟಿ ರೂಗಳು, ಮತ್ತು ಜಿ.ಎಲ್.ಬಿಸಿ ಅನುದಾನದಲ್ಲಿ ಬಸ್ ಡಿಪೋದಿಂದ ಮತಕ್ಷೇತ್ರದ ವ್ಯಾಪ್ತಿಯವರೆಗೆ 2 ಕೋಟಿ ರೂಗಳ ಒಟ್ಟು 4 ಕೋಟಿ ರೂಗಳ ಅನುದಾನದಲ್ಲಿ ಸುಸಜ್ಜಿತವಾದ ರಸ್ತೆಯನ್ನು ನಿರ್ಮಿಸಲಾಗುತ್ತದೆ, ಎಪಿಎಂಸಿ ಗೇಟ್ದಿಂದ ಕೃಷಿ ಇಲಾಖೆಯವರಗೆ ರಸ್ತೆಯ ಪಕ್ಕದಲ್ಲಿ ಗಟ್ಟಾರ ಇದ್ದು, ಅದನ್ನು ದುರಸ್ಥಿ ಮಾಡಿ. ಪಾದಚಾರಿಗಳಿಗೆ ಅನುಕೂಲವಾಗುವಂತೆ ಸುಸಜಿತವಾದ ರಸ್ತೆಯನ್ನು ಮಾಡಲಾಗುತ್ತದೆ. ಇದರಿಂದ ಟ್ರಾಫೀಕ್ ಸಮಸ್ಯೆಯು ನಗರದಲ್ಲಿ ಕಡಿಮೆಯಾಗುತ್ತದೆ ಎಂದರು.
ವಾರ್ಡ್ನ ನಿವಾಸಿಗಳು ಸೇರಿದಂತೆ ನಗರಸಭೆಯ ಸದಸ್ಯರುಗಳು ಇದ್ದರು.