ಮುಂಡರಗಿ

ಕೈ ತಪ್ಪಿದ ಜೆಡಿಎಸ್ ಟಿಕೆಟ್ ಗೊಂದಳಿ ಸಮುದಾಯ ಅಸಮಾದಾನ : ವಿಠ್ಠಲ ಗಣಾಚಾರಿ

ಕೈ ತಪ್ಪಿದ ಜೆಡಿಎಸ್ ಟಿಕೆಟ್ ಗೊಂದಳಿ ಸಮುದಾಯ ಅಸಮಾದಾನ : ವಿಠ್ಠಲ ಗಣಾಚಾರಿ

ಲೋಕದರ್ಶನ ವರದಿ

ಮುಂಡರಗಿ 20: ಕೊಪ್ಪಳ ಜಿಲ್ಲೆಯ ಕುಷ್ಟಗಿ ವಿಧಾನಸಭೆ ಕ್ಷೇತ್ರದ ಆಕಾಂಕ್ಷಿ ತುಕಾರಾಮ ಸುರುವೆ ಇವರಿಗೆ ಈ ಮೊದಲು ಜೆಡಿಎಸ್ ಟಿಕೇಟ್ ನೀಡುತ್ತೇನೆಂದು ಭರವಸೆ ನೀಡಿ, ಕೊನೆಯ ಕ್ಷಣದಲ್ಲಿ ಅವರಿಗೆ ಟಿಕೇಟ್ ನೀಡದೇ ಗೊಂದಳಿ ಸಮುದಾಯಕ್ಕೆ ಅನ್ಯಾಯವನ್ನು ಎಸಗಿದ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಡೆಯನ್ನು ಖಂಡಿಸುತ್ತೇನೆ ಎಂದು ಅಖಿಲ ಕನರ್ಾಟಕ ಗೊಂದಳಿ ಸಮಾಜದ ಅಲೇಮಾರಿ ಮತ್ತು ಅರೆ ಅಲೆಮಾರಿ ಸಮಾಜದ ರಾಜ್ಯಾದ್ಯಕ್ಷ ವಿಠಲ ಗಣಾಚಾರಿ ಆರೋಪಿಸಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ರಾಜ್ಯದಲ್ಲಿ ಅಲೇಮಾರಿ ಹಾಗೂ ಅರೆಅಲೇಮಾರಿ ಜನಾಂಗದ ಮುಖ್ಯೆ, ಗೊಂದಳಿ ಹೀಗೆ ಹಲವರು ನಮ್ಮ ಸಮಾಜದ ಬೆಳವಣಿಗೆಯ ಕುಡಿಯನ್ನು ಮುರಿದು ಹಾಕುವ ಜನ ಹೆಚ್ಚಾಗಿದ್ದಾರೆ. ಹೀಗಾಗಿ ಗೊಂದಳಿ ಸಮಾಜದ ಒಬ್ಬ ಮುಖಂಡರಿಗೆ ಯಾವೊಂದು ಸ್ಥಾನಮಾನವೂ ಕೊಡದೇ ಅವರನ್ನು ನಡುದಾರಿಯಲ್ಲಿ ಕೈಬಿಡುತ್ತಿದ್ದಾರೆ.

ತುಕಾರಾಮ ಕೊಪ್ಪಳ ಜಿಲ್ಲೆಯ ಕುಷ್ಠಗಿ ವಿಧಾನಸಭೆಯಲ್ಲಿ ಜನರಸೇವೆ ಮಾಡಲು ಮುಂದಾದ ಕಾರಣ ಅವರಿಗೆ ಟಿಕೇಟ್ ನೀಡುತ್ತೇನೆ ಎಂದು ಸ್ವತಃ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಗಳೇ ಹೇಳಿದ್ದರು. ಇವರ ಭರವಸೆಯನ್ನು ನಂಬಿದ ತುಕಾರಾಮ ಚುನಾವಣೆ ಖಚರ್ಿಗಾಗಿ ತುಂಬಾ ಹಣ ಬೇಕಾಗುತ್ತೆ ಅಂತ ಇದ್ದ ತಮ್ಮ 10 ಎಕರೆ ಜಮೀನನ್ನು ಮಾರಿದರು. ಆದರೆ ತುಕಾರಾಮರನ್ನು  ಕಡೆಗಣಿಸಿ ಬೇರೊಬ್ಬರಿಗೆ ಟಿಕೇಟ್ ನೀಡಿದ್ದು ಗೊಂದಳಿ ಸಮಾಜಕ್ಕೆ ಮೋಸಮಾಡಿದೆ. ಈ ದೃಷ್ಟಿಯಿಂದ ನಮ್ಮ ಸಮಾಜಕ್ಕೆ ಯಾರೊಬ್ಬ ಜನಪ್ರತಿನಿಧಿಯೂ ಸಹಕಾರ ಹಾಗೂ ಬೆಂಬಲ ನೀಡುತ್ತಿಲ್ಲ. ನಮ್ಮ ಸಮಾಜದವರು ಬೆಳವಣಿಗೆಯಾಗಬೇಕು ಹಾಗೂ ಅಲೇಮಾರಿ ಜೀವನ ಸಾಗಿಸಿ ಬದುಕನ್ನು ನಡೆಸುತ್ತಿದ್ದಾರೆ. ಹೀಗಾಗಿ ನಮ್ಮ ಗೊಂದಳಿ ಸಮಾಜದ ರಾಜ್ಯಧ್ಯಕ್ಷನಾಗಿ ನಮ್ಮ ಸಮಾಜದ ಪ್ರಗತಿಯೊಂದಿಗೆ ಮುಂಬರುವ ಪೀಳಿಗೆಗೆ ಉತ್ತಮ ಶಿಕ್ಷಣ ನೀಡಿ, ಅವರನ್ನು ಬೆಳೆಸಬೇಕೆಂಬುದು ನಮ್ಮ ಜವಾಬ್ದಾರಿ ಹಾಗೂ ಉದ್ದೇಶವಾಗಿದೆ. 

ಆದರೆ ನಮ್ಮ ಸಮಾಜದ ಯಾವುದೇ ಕೆಲಸವನ್ನು ಮಾಡಿಕೊಳ್ಳುವ ದೃಷ್ಠಿಯಿಂದ ನಮ್ಮನ್ನು ಮುಂದೆ ತರಲು ಸಾಧ್ಯವಾಗದೇ ನಮ್ಮನ್ನು ಕಡೆಗನಿಸುತ್ತಿರುವುದು ನನಗೆ ತುಂಬಾ ಬೇಸರವಾಗಿದೆ. ಇದರಿಂದ ನಮ್ಮ ಗೊಂದಳಿ ಸಮಾಜಕ್ಕೆ ತುಂಬಾ ಅನ್ಯಾಯವಾಗಿದೆ. ಈ ಹಿನ್ನೆಲೆಯಲ್ಲಿ ಈ ಚುನಾವಣೆಯಲ್ಲಿ ರಾಜ್ಯಾದ್ಯಂತ ನಮ್ಮ ಗೊಂದಳಿ ಸಮಾಜದ ಎಲ್ಲರೂ ಜೆಡಿಎಸ್ ಪಕ್ಷದ ಚಟುವಟಿಕೆಗೆ ಬಹಿಸ್ಕಾರ ಹಾಕುತ್ತೇವೆ ಹಾಗೂ ಅವರಿಗೆ ಮತವನ್ನು ನೀಡುವುದಿಲ್ಲ ಎಂದು ಕರೆ ನೀಡಿದರು.

ಈ ವೇಳೆ ಗೋಂದಳಿ ಸಮಾಜದ ಹಿರಿಯರಾದ ದುರಗೋಜಪ್ಪ ಗಣಾಚಾರಿ, ದುರಗಪ್ಪ ವಾರಗನ್, ಬಸವರಾಜ ಗಣಾಚಾರಿ, ಪಾಂಡುರಂಗ ಮುಖ್ಯೆ, ಮಂಜಪ್ಪ ಮುಖ್ಯೆ ಅನೇಕರು ಇದ್ದರು 

ಸುದ್ದಿ ಓದಿ