ಕನ್ನಡ ಭಾಷೆಯ ಮೂಲಕ ಎಲ್ಲಾ ಭಾಷೆಗಳನ್ನು ಕಲಿಯಿರಿ: ನಾರಾಯಣಶಾಸ್ತ್ರಿ
ಜಮಖಂಡಿ 02: ತಾಯ ಹಾಲಿನ ಜೊತೆ ನಂಟನ್ನು ಹೊಂದಿರುವ ಕರುಳ ಭಾಷೆಯಾದ ಕನ್ನಡ ಭಾಷೆಯ ಮೂಲಕ ಎಲ್ಲ ಭಾಷೆಗಳನ್ನು ಕಲಿಯಬೇಕು. ಕನ್ನಡದ ಕನ್ನಡಿಯಲ್ಲಿ ಭಾವನೆಗಳ ಹೊನಲು ಹರಿದು ಬಾಳು ಸಮೃದ್ಧವಾಗಬೇಕೆಂದು ಆಶುಕವಿ ನಾರಾಯಣಶಾಸ್ತ್ರಿ ಹೇಳಿದರು.
ತಾಲೂಕಿನ ಕುಂಬಾರಹಳ್ಳ ಪ್ರೌಢಶಾಲೆಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಕನ್ನಡದಲ್ಲಿ ಏನುಂಟು ಎಂದು ಕೇಳಬೇಡಿ ಎಲ್ಲವೂ ಉಂಟು! ಅದಕ್ಕೆ ಎಂಟು ಜ್ಞಾನಪೀಠಗಳು ಬಂದಿವೆ ಎಂದರು.
ಶಿಕ್ಷಕ ಸಂಗಮೇಶ ಉಟಗಿ ಮಾತನಾಡಿ,ಕನ್ನಡ ಭಾಷೆಯ ವೈಭವವನ್ನು ಮೆಲಕು ಹಾಕಿ ಕನ್ನಡವನ್ನು ಮಾತಾಡುವುದರ ಮೂಲಕ ಕನ್ನಡ ಉಳಿಡಿ ಬೆಳೆಸಬೇಕು ಎಂದು ಹೇಳಿದರು.
ದೈಹಿಕ ಶಿಕ್ಷಕ ಬಾಹುಬಲಿ ಮುತ್ತೂರ ಮಾತನಾಡಿ,ಮಕ್ಕಳಿಗೆ 5 ನೇ ವರ್ಗದವರೆಗೆ ಮಾತೃಭಾಷೆಯಲ್ಲಿ ಶಿಕ್ಷಣ ನೀಡಬೇಕು ಎಂದು ಹೇಳಿದರು. ಶಿಕ್ಷಕಿ ಸವಿತಾ ಬೆನಕಟ್ಟಿ ಮಾತನಾಡಿದರು. ಅಧ್ಯಕ್ಷತೆ ವಹಿಸಿ ಪ್ರಭಾರೆ ಮುಖ್ಯಗುರು ಸಂಜೀವ ಝಂಬುರೆ ಮಾತನಾಡಿ ,ಕನ್ನಡತನ ಎನ್ನುವುದು ಬಾಳಿನ ಕಳಸವಾಗಿದೆ. ಕನ್ನಡ ಬಲ್ಲವ ಬೇರೆ ಭಾಷೆಯನ್ನು ಲೀಲಾಜಾಲವಾಗಿ ಕಲಿಯಬಹುದು ಎಂದು ಹೇಳಿದರು.
ವಿದ್ಯಾರ್ಥಿಗಳಾದ ಹನುಮವ್ವ ಭೂಮಾರ, ಪುಷ್ಪಾ ಹುದಲಿ, ಸಿದ್ಧಾರ್ಥ ಬಿದರಿ, ಸವಿತಾ ಮಟ್ಟಿ, ಸೃಷ್ಟಿ ಹಿರೇಕುರುಬರ, ಐಶ್ವರ್ಯ ಬಂಡಿವಡ್ಡರ, ಶಾಂತಾ ಹಿರೇಕುರುಬರ, ಪ್ರಿಯಾಂಕ ಗುಡೆಪ್ಪಗೊಳ ಅನೇಕರು ಮಾತನಾಡಿದರು. ಶಕುಂತಲಾ ಬಿರಾದಾರ ಸ್ವಾಗತಿಸಿದರು. ಎ.ಎಂ.ಮೋಮಿನ ವಂದಿಸಿದರು.
ಪೋಟೋ ;