ರಕ್ಷಣೆ ಕೇಳಿ ಸರಕಾರಕ್ಕೆ ಪತ್ರ ಬರೆದ ಲಾಲು ಪುತ್ರ
Lalu's son writes to government seeking protection
ಪಾಟ್ನಾ: ತನ್ನ ಜೀವಕ್ಕೆ ಅಪಾಯವಿದೆ ರಕ್ಷಣೆ ನೀಡಿ ಎಂದು ಬಿಹಾರ ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವ ಸಾಮ್ರಾಟ್ ಚೌಧರಿ ಅವರಿಗೆ ಬಿಹಾರದ ಮಾಜಿ ಸಚಿವ ಮತ್ತು ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಪುತ್ರ ತೇಜ್ ಪ್ರತಾಪ್ ಯಾದವ್ ಪತ್ರ ಬರೆದಿದ್ದಾರೆ.
ಜನಶಕ್ತಿ ಜನತಾ ದಳ (JJD)
ಪಕ್ಷದ ಅಧ್ಯಕ್ಷರಾಗಿರುವ ತೇಜ್ ಪ್ರತಾಪ್ ಬರೆದಿರುವ ಪತ್ರದಲ್ಲಿ, ತಮ್ಮದೇ ಪಕ್ಷದ ಉಚ್ಚಾಟಿತ ರಾಷ್ಟ್ರೀಯ ವಕ್ತಾರ ಸಂತೋಷ್ ರೇಣು ಯಾದವ್ ತಮಗೆ ಕೊಲೆ ಬೆದರಿಕೆ ಹಾಕುತ್ತಿದ್ದಾರೆ, ತನ್ನ ಜೀವಕ್ಕೆ ಅಪಾಯವಿದೆ ತನಗೆ ರಕ್ಷಣೆ ನೀಡಿ ಎಂದು ಬರೆದುಕೊಂಡಿದ್ದಾರೆ. ಪತ್ರ ಬರೆದಿರುವ ಕುರಿತು ಪ್ರತಿಕ್ರಿಯೆ ನೀಡಿದ ಸಚಿವಾಲಯ, ತೇಜ್ ಪ್ರತಾಪ್ ಬರೆದಿರುವ ಪತ್ರ ತಲುಪಿದೆ ಮತ್ತು ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಸಂತೋಷ್ ರೇಣು ಯಾದವ್ ಪಕ್ಷದ ಸಿದ್ಧಾಂತಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಉದ್ಯೋಗ ಕೊಡಿಸುವುದಾಗಿ ಹಣ ಪಡೆದು ವಂಚಿಸುತ್ತಿದ್ದಾರೆ ಎಂದು ಆರೋಪಿಸಿ ಡಿ. 14 ರಂದು ತೇಜ್ ಪ್ರತಾಪ್ ಅವರನ್ನು ಪಕ್ಷದಿಂದ ಉಚ್ಚಾಟಿಸಿದ್ದರು. ಇದಾದ ಬಳಿಕ ಸಂತೋಷ್ ರೇಣು ಅವರು ಫೇಸ್ಬುಕ್ ಮತ್ತು ಯೂಟ್ಯೂಬ್ ಲೈವ್ ಮೂಲಕ ಅಶ್ಲೀಲ ಪದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕುತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ತೇಜ್ ಪ್ರತಾಪ್ ಅವರನ್ನೂ ಸಹ ಈ ವರ್ಷದ ಆರಂಭದಲ್ಲಿ ಅವರ ತಂದೆ ಲಾಲು ಪ್ರಸಾದ್ ಯಾದವ್ ಅವರು ಆರ್ಜೆಡಿ ಪಕ್ಷದಿಂದ ಉಚ್ಚಾಟಿಸಿದ್ದರು ಇದಾದ ಬಳಿಕ ಜನ್ಶಕ್ತಿ ಜನತಾ ದಳ ಎಂಬ ಹೊಸ ಪಕ್ಷವನ್ನು ಹುಟ್ಟುಹಾಕಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 