ಜಮಖಂಡಿ

ಪಾಪ-ಪುಣ್ಯಗಳನ್ನು ತಿಳಿದುಕೊಳ್ಳು ಶಕ್ತಿ ಮಹಾತ್ಮರಿಂದ ಸಾಧ್ಯ: ಅವಧೂತರು

ಪಾಪ-ಪುಣ್ಯಗಳನ್ನು ತಿಳಿದುಕೊಳ್ಳು ಶಕ್ತಿ ಮಹಾತ್ಮರಿಂದ ಸಾಧ್ಯ:  ಅವಧೂತರು

ಲೋಕದರ್ಶನ ವರದಿ,

ಜಮಖಂಡಿ 05: ಮನುಷ್ಯನ ಜೀವನದಲ್ಲಿನ ಪಾಪ-ಪುಣ್ಯಗಳನ್ನು ತಿಳಿದುಕೊಳ್ಳು ಶಕ್ತಿ ಮಹಾತ್ಮರಲ್ಲಿ ಮಾತ್ರ ಇರುತ್ತದೆ ಎಂದು ರುದ್ರಾವಧೂತ ಮಠದ ಸಹಜಾನಂದ ಅವಧೂತರು ಹೇಳಿದರು. 

ನಗರದ ರುದ್ರಸ್ವಾಮಿ ಪೇಠದಲ್ಲಿ ನಡೆದ ಸದ್ಗುರು ರುದ್ರಾವಧೂತರ 92 ನೇ ಪುಣ್ಯಾರಾಧನೆ 37 ನೇ ವೇದಾಂತ ಪರಿಷತ ಮೊದಲನೆಯ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

 ಪ್ರತಿಯೊಬ್ಬ ವ್ಯಕ್ತಿಯಲ್ಲಿ ಅಹಂಕಾರವನ್ನು ಹುಟ್ಟಿರುತ್ತದೆ. ಅಹಂಕಾರವನ್ನು ಕಳೆದುಕೊಳ್ಳಬೇಕಾದರೆ. ಗುರುವಿನ ಜ್ಞಾನವನ್ನು ಪಡೆದುಕೊಂಡರೆ ಅದು ಹೋಗಲಾಗುತ್ತದೆ. ಯಾರು ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡಿದರೆ ಅಂತವರಲ್ಲಿ ಮಹಾತ್ಮರ ಆಶರ್ೀವಾದ ಇರುತ್ತದೆ. ದೇಹದಲ್ಲಿ ಆತ್ಮ ಇರುತ್ತದೆ. ಶ್ರೇಷ್ಠವಾದ ಆತ್ಮ ದೇವ ಸ್ವರೂಪವಾಗಿರುತ್ತದೆ. ಪಾಪ-ಪುಣ್ಯಗಳು ದೇಹಕ್ಕೆ ಮಾತ್ರ ಅಂಟಿಕೊಳ್ಳುತ್ತದೆ. ಆದರೆ ಆತ್ಮಕ್ಕೆ ಇರುವುದಿಲ್ಲ. ಅಹಂಕಾರವನ್ನು ಬಿಟ್ಟು ಪುಣ್ಯದ ದಾರಿಯಲ್ಲಿ ನಡೆದರೆ ನಡೆದು. ಮಹಾತ್ಮರ ಪ್ರವಚನ ತಿಳಿದುಕೊಳ್ಳುವದು ಅವಶ್ಯಕತೆಯಾಗಿದೆ ಎಂದರು

ಸದ್ಗುರು ಶ್ರೀ ರುದ್ರಾವಧೂತರ ಪಲ್ಲಕಿ ಉತ್ಸವದಲ್ಲಿ ರುದ್ರಾವಧೂತರ ಭಾವಚಿತ್ರ ಹಾಗೂ ಶ್ರೀಗಳ ಮೆರವಣಿಗೆಯಲ್ಲಿ ಮಹಿಳೆಯರು ಆರತಿಯ ಕಳಸವನ್ನು ಹಿಡುಕೊಂಡಿದರು. ಕರಡಿ ಮಜಲು. ವಾದ್ಯ ಮೇಳಗಳೊಂದಿಗೆ ನಗರದ ಪ್ರಮುಖ ರಸ್ತೆಯ ಮೂಲಕ ಭವ್ಯವಾದ ಮೆರವಣಿಗೆ ಶರಣ ಸದ್ಬಕ್ತರು ಭಾಗಿಯಾಗದರು.   ಜರುಗಿತು.

ಎರಡನೇಯ ದಿನದ ವೇದಾಂತ ಪರಿಷತ ಕಾರ್ಯಕ್ರಮದಲ್ಲಿ ಮೂರು ಜೋಡಿಯ ಸಾಮೂಹಿಕ ವಿವಾಹಗಳು ನಡೆಯಿತು. ಮಠದ ಶ್ರೀಗಳು ಆಶೀರ್ವಾದವನ್ನು ನೀಡಿ. ಶುಭವನ್ನು ಕೋರಿದರು. ವೇದಾಂತ ಪರಿಷತ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರಿಂದ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತಾಧಿಗಳು ಬೇರೆ ಬೇರೆ ಜಿಲ್ಲೆಯಿಂದ ಆಗಮಿಸಿ. ರುದ್ರಾವಧೂತರ ದರ್ಶನವನ್ನು ಪಡೆದುಕೊಳ್ಳವ ಜೊತೆಗೆ ಶ್ರೀಗಳ ಆಶೀರ್ವಚನ ಕೇಳಿ ಪುನಿತಕೊಂಡರು. ನಂತರ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಿತು.

ನಾಗೇಶ್ವರ ಶ್ರೀಗಳು ಕವಲಗುಡ್ಡ, ಜ್ಞಾನೇಶ್ವರ ಶ್ರೀಗಳು ನಾಗರಾಳ, ಸ್ವರೂಪಾನಂದ ಶ್ರೀಗಳು ಕೋಳಿಗುಡ್ಡ, ಶಿವಪುತ್ರ ಅವಧೂತರು ಲಿಂಗನೂರ, ಚಿನ್ನಯಾನಂದ ಶ್ರೀಗಳು ಗಣಿ, ಪ್ರಭುದೇವರು ಶ್ರೀಗಳು ಪಿ.ಜಿ.ಹುಣಶ್ಯಾಳ, ಮುಕುಂದನಾಥ ಶ್ರೀಗಳು ಹುಬ್ಬಳ್ಳಿ, ಶಂಕರಾನಂದ ಶ್ರೀಗಳು ಆಶರ್ೀವಚನ ನೀಡಿದರು. ಕೃಷ್ಣಾನಂದ ಅವಧೂತರು ಸ್ವಾಗತಿಸಿ,ನಿರೂಪಿಸಿ, ವಂದಿಸಿದರು,



ಸುದ್ದಿ ಓದಿ