ಜಮಖಂಡಿ

ಕಾಶಿಲಿಂಗೇಶ್ವರ ಎರಡನೇ ಕಾಶಿಯಾಗಿದೆ: ಮಾಜಿ ಸಿಎಂ

ಕಾಶಿಲಿಂಗೇಶ್ವರ ಎರಡನೇ ಕಾಶಿಯಾಗಿದೆ: ಮಾಜಿ ಸಿಎಂ
ಜಮಖಂಡಿ ತಾಲೂಕಿನ ಕಾಜಿಬೀಳಗಿ ಗ್ರಾಮದಲ್ಲಿ ನಡೆದ ಕಾಶಿಲಿಂಗೇಶ್ವರ ಕಲ್ಯಾಣ ಮಂಟಪದ ಕಾರ್ಯಕ್ರಮವನ್ನು ಮಾಜಿ ಸಿಎಂ, ಸಿದ್ದ

ಲೋಕದರ್ಶನ ವರದಿ,

ಜಮಖಂಡಿ20: ಲೋಕ ಕಲ್ಯಾಣಕ್ಕಾಗಿ ಕಾಶಿಲಿಂಗೇಶ್ವರ ಕೃಪೆಯು ಜನತೆಯ ಮೇಲೆ ಇದೆ. ಈ ಭಾಗದಲ್ಲಿ ಎರಡನೇ ಕಾಶಿಯಾಗಿದೆ. ಇಲ್ಲಿನ ಮಹಿಮೆ ಅಪಾರವಾಗಿದೆ ಎಂದು ಮಾಜಿ ಸಿಎಂ, ಸಿದ್ದರಾಮಯ್ಯನವರು ಹೇಳಿದರು.

ತಾಲೂಕಿನ ಕಾಜಿಬೀಳಗಿ ಗ್ರಾಮದಲ್ಲಿ ನಡೆದ ಕಾಶಿಲಿಂಗೇಶ್ವರ ಕಲ್ಯಾಣ ಮಂಟಪದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಶಿಲಿಂಗೇಶ್ವರ ದೇವಸ್ಥಾನ ಕಲ್ಯಾಣ ಮಂಟಪ ಕಟ್ಟಡಕ್ಕೆ ನಮ್ಮ ಸರಕಾರ 1 ಕೋಟಿ ರೂ. ಅನುದಾನ ನೀಡಿತ್ತು. ಮತ್ತೇ ಹಚ್ಚಿನ ಅನುದಾನವನ್ನು ಬಿಡುಗಡೆಗೊಳಿಸಿ 3.5 ಕೋಟಿ ರೂ ವೆಚ್ಚದಲ್ಲಿ ಸುಂದರವಾದ ಕಟ್ಟಡವನ್ನು ಕಟ್ಟಿದ್ದು ಶ್ಲಾಘನೀಯ. ಇದಕ್ಕೆ ಕಾರಣೀಭೂತರಾದ ಶಾಸಕ ಆನಂದ ನ್ಯಾಮಗೌಡ ಹಾಗೂ ದೆವಸ್ಥಾನ ಕಮೀಟಿಯವರ ಸಹಕಾರ ಮುಖ್ಯವಾಗಿದೆ. ಎಲ್ಲರ ಮೇಲೆ ಕಾಶಿಲಿಂಗೇಶ್ವರನ ಕೃಪೆ ಇರಲಿ. ಜಮಖಂಡಿ ಮತಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆದಿರುತ್ತವೆ. ಮುಂದಿನ ದಿನದಲ್ಲಿ ಮತ್ತೇ ನಮ್ಮದೆ ಜಯ ಎಂದರು.

ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ಈ ಕ್ಷೇತ್ರದ ಕಾಶಿಲಿಂಗೇಶ್ವರ ದೇವರನ್ನು ಭಕ್ತ, ಭಾವದಿಂದ ಈ ಭಾಗದ ಜನತೆ ಪೂಜಿಸುತ್ತಾರೆ, ಕಾಶಿಲಿಂಗೇಶ್ವರ ಮಹಿಮೆಯನ್ನು ತಿಳಿದುಕೊಂಡಿದ್ದಾರೆ. ದೈವಿ ಶಕ್ತಿ ಎಲ್ಲರಲ್ಲಿಯೂ ಒಳ್ಳೆಯ ಭಾವನೆ ಮೂಡಿಸಿ, ಒಳ್ಳೆಯ ವಿಚಾರವನ್ನು ಮೂಡಿಸುತ್ತಿದೆ ಎಂದರು. 

ಮಾಜಿ ಸಚಿವರಾದ ಸತೀಶ ಜಾರಕಿಹೊಳೆ, ಎಂ ಬಿ ಪಾಟಿಲ, ಮಾಜಿ ಭೂಸೇನಾ ನಿಗಮ ಉಪಾಧ್ಯಕ್ಷ ಶ್ರೀಶೈಲ ದಳವಾಯಿ, ಸದಾಲಿಂಗೇಶ್ವರ ಶ್ರೀಗಳು, ಅಜರ್ುನ ದಳವಾಯಿ, ವರ್ಧಮಾನ ನ್ಯಾಮಗೌಡ, ಸುಭಾಸ ಪಾಟೋಳಿ, ಶಿವಪ್ಪ ಅತಾಲಟ್ಟಿ ಸೇರಿದಂತೆ ಅನೇಕರು ವೇದಿಕೆಯಲ್ಲಿ ಉಪಸ್ಥಿತರಿದರು.


ಸುದ್ದಿ ಓದಿ