ಕನ್ನಡ ರಾಜ್ಯೋತ್ಸವ: ಅನಾಥ ವೃದ್ಧರಿಗೆ ಊಟ-ಉಪಹಾರ ವಿತರಣೆ
ಜಮಖಂಡಿ 02: ಜೀವನಜ್ಯೊತಿ ಮಕ್ಕಳ ಅನಾಥಾಶ್ರಮ ವಸತಿ ನಿಲಯ ಮತ್ತು ಭಾರತ ಮಾತಾ ವೃದ್ಧಾಶ್ರಮಗಳ ವೃದ್ಧರಿಗೆ, ಮಕ್ಕಳಿಗೆ ಕರ್ನಾಟಕ ಪ್ರಜಾ ರಕ್ಷಣಾ ಸೇನೆ ಸಂಘಟನೆ ಊಟ ಮತ್ತು ಸಿಹಿತಿಂಡಿಯನ್ನು ವಿತರಿಸಿದರು.
ಕನರ್ಾಟಕ ರಕ್ಷಣಾ ಸೇನೆಯ ಅಧ್ಯಕ್ಷ ಹಣಮಂತ ಗಾಣಿಗೇರ ಮಾತನಾಡಿ, ಕನ್ನಡ ರಾಜ್ಯೋತ್ಸವದ ನಿಮಿತ್ತ ರಬಕವಿಯ ಸಂಘಟನೆ ಜಮಖಂಡಿಯಲ್ಲೂ ಕೂಡಾ ಅನಾಥ ಮಕ್ಕಳ ಅನಾಥಾಶ್ರಮ, ಭಾರತಮಾತಾ ವೃದ್ಧಾಶ್ರಮಕ್ಕೆ ಉಪಹಾರ, ಊಟದ ವ್ಯವಸ್ಥೆ ಕಲ್ಪಿಸಿ ಅವರಿಗೆ ಸ್ವಲ್ಪವಾದರು ಖುಷಿ ತರುವ ಪ್ರಯತ್ನ ಮಾಡಿದೆ. ಮುಂದಿನ ದಿನಮಾನದಲ್ಲಿ ನಾವೂ ಕೈಲಾದಷ್ಟು ಅವಶ್ಯಕವಿರುವ ವಸ್ತುಗಳನ್ನು ಮತ್ತು ಸಹಾಯವನ್ನು ಮಾಡಲಾಗುತ್ತದೆಂದು ತಿಳಿಸಿದರು.
ಜೀವನಜ್ಯೋತಿ ಮಕ್ಕಳ ಅನಾಥಾಶ್ರಮದ ವ್ಯವಸ್ಥಾಪಕಿ ದ್ರಾಕ್ಷಾಯಿನಿ ಬಡಿಗೇರ ಮಾತನಾಡಿ, ಇಲ್ಲಿ 12 ಮಕ್ಕಳಿದ್ದು, 4 ಜನ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ದಾನಿಗಳು ಮತ್ತು ಅನೇಕರು ತಮ್ಮ ಕೈಲಾದಷ್ಟು ಸಹಾಯ ಮಾಡಿದ್ದಾರೆ.ಕೆಲವರು ಅನಾಥಾಶ್ರಮಕ್ಕೆ ಬೇಕಾದ ಸಾಮಗ್ರಿಗಳನ್ನು ಕೊಟ್ಟರೆ, ಕೆಲವರು ಆಹಾರದ ವ್ಯವಸ್ಥೆ ಮಾಡುತ್ತಿದ್ದಾರೆ.ಆದರೆ ಸರ್ಕಾರದ ಯಾವುದೇ ಸಹಾಯ ದೊರತಿಲ್ಲ. ಮಕ್ಕಳು ಉತ್ತಮ ಶಿಕ್ಷಣವನ್ನು ಕೂಡಾ ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿದ್ದಾರೆ ಎಂದರು.
ಭಾರತಮಾತಾ ವೃದ್ದಾಶ್ರಮಕ್ಕೆ ಕೂಡಾ ಊಟ ಮತ್ತು ಸಿಹಿ ವಿತರಿಸಿದರು.ಅಧ್ಯಕ್ಷ ಹಣಮಂತ ಗಾಣಿಗೇರ,ಉಪಾಧ್ಯಕ್ಷ ರಾಮು ಮಾಳಿಗೆನ್ನವರ,ಮುತ್ತು ಅಕ್ಕೇನವರ, ಕುಮಾರ ಸುನಗಾರ,ಪ್ರಭು ಅಕ್ಕೆನವರ,ಕಿರಣ ಅಕ್ಕೆನವರ,ವಿಜಯ ಅಕ್ಕೆನವರ ಅನೇಕರಿದ್ದರು.