ಕನಕದಾಸರ ಭಕ್ತಿ ಕೀರ್ತನೆಗಳು ಬಾಳಿಗೆ ದಾರಿ ದೀಪ: ನಾರಾಯಸ್ತ್ರಿ
ಲೋಕದರ್ಶನ ವರದಿ,
ಜಮಖಂಡಿ 12: ಭಕ್ತ ಶ್ರೇಷ್ಠರಾದ ಕನಕವನ್ನೇ ದಾಸನನ್ನಾಗಿ ಮಾಡಿಕೊಂಡ ಕನಕದಾಸರ ಭಕ್ತಿ ಯುತ ಕೀರ್ತನೆಗಳು ಬಾಳಿಗೆ ದಾರಿ ದೀಪಗಳಾಗಿವೆ. ಮಹಾತ್ಯಾಗಿ ಓನಕೆ ಓಬವ್ವಳ ತ್ಯಾಗ ಗುಣಗಳು ಇಂದಿನ ಅಗತ್ಯವಾಗಿದೆ.ಮಹಾ ಮಾನವತಾವಾದಿ ಮೌಲಾನ ಅಬ್ದುಲ್ ಕಲಾಂ ಆಝಾದರ ಶಿಕ್ಷಣ ಪ್ರೀತಿ ಬಹಳ ದೊಡ್ಡದು ಎಂದು ಮುಖ್ಯಗುರು ನಾರಾಯಸ್ತ್ರಿ ಹೇಳಿದರು.
ತಾಲೂಕಿನ ಕುಂಬಾರಹಳ್ಳ ಸರ್ಕಾರಿ ಪ್ರೌಢಶಾಲೆಯಲ್ಲಿ ಮೂವರು ಮಹಾತ್ಮರ ಜಯಂತಿಗಳ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಂಥವರ ಜೀವನವನ್ನು ಮೆಲಕು ಹಾಕುವುದರಿಂದ ದೇಹದಲ್ಲಿ ಮಿಂಚಿನ ಸಂಚಾರವಾಗುತ್ತದೆ.ಹೊಸ ಸ್ಪೂರ್ತಿ ಬರುತ್ತದೆ.ಮಕ್ಕಳು ಇವರ ಆದರ್ಶವನ್ನು ಅಳವಡಿಸಿಕೊಳ್ಳಬೇಕು ಎಂದರು.
ಅತಿಥಿಯಾಗಿದ್ದ ಶಿಕ್ಷಕ ಸಂಗನಬಸವ ಉಟಗಿ ಮಾತನಾಡಿ, ಸಾಧನೆಗೆ ಹುಟ್ಟು ಮುಖ್ಯವಲ್ಲ, ಮಾಡುವ ಕಾರ್ಯಗಳು ಮುಖ್ಯ, ಕನಕದಾಸರು ಕೀರ್ತನೆಗಳ ಮೂಲಕ ಜಾಗೃತಿ ಮೂಡಿಸಿದರೇ ವೀರವನತೆ ಒನಕೆ ಓಬವ್ವಳ ಧೈರ್ಯ, ಪರಾ ಕ್ರಮಗಳಿಂದ ಚಿರಸ್ಥಾಯಿಯಾದಳು. ಮೌಲಾನಾರು ಎಲ್ಲರಿಗೂ ಶಿಕ್ಷಣದ ಹಕ್ಕನ್ನು ಪ್ರತಿಪಾದಿಸಿದರು ಎಂದರು.
ಶಿಕ್ಷಕ ಸಂಜೀವ ಝಂಬುರೆ,ಬಾಹುಬಲಿ ಮುತ್ತೂರ,ಶಕುಂತಲಾ ಬಿರಾದಾರ ಇದ್ದರು. ವಿದ್ಯಾರ್ಥಿ ಗಳಾದ ಪೂರ್ಣಿಮಾ ಕುರಣಿ, ಸಾವಿತ್ರಿ ಪಕಾಲಿ, ಪುಷ್ಪಾ ಹುದಲಿ, ಸವಿತಾ ಮಟ್ಟಿ ಇನ್ನಿತರರು ಹಾಡು ಮತ್ತು ನುಡಿ ನಮನ ಸಲ್ಲಿಸಿದರು. ಸವಿತಾ ಬೆನಕಟ್ಟಿ ಸ್ವಾಗತಿಸಿದರು. ಆಶಿಪಾಭಾನು ಮೋಮಿನ್ ವಂದಿಸಿದರು.