ಜೆ.ಡಿ.ಎಸ್ ಪಕ್ಷದ ಪಂಚರತ್ನ ಯೋಜನೆಯ ಪೋಷ್ಟರ ಬಿಡುಗಡೆ
ಲೋಕದರ್ಶನ ವರದಿ
ಮುಂಡರಗಿ 25: ಮುಂದಿನ 2023ರಕ್ಕೆ ಬರುವಂತಹ ವಿಧಾನ ಸಭಾ ಚುನಾವಣೆಯಲ್ಲಿ ಶಿರಹಟ್ಟಿ ಮತಕ್ಷೇತ್ರದಿಂದ ಜ್ಯಾತೀತ ಜನತಾ ದಳ (ಜೆ.ಡಿ.ಎಸ್.) ಪಕ್ಷದಿಂದ ಸ್ಪದರ್ೆ ಕಚಿತ, ಹಾಗೇ ನಮ್ಮ ಪಕ್ಷದ ವರಿಷ್ಟರು ಸ್ಪರ್ಧಿಸುವ ಶೀಗ್ರದಲ್ಲಿಯೇ ಅಭ್ಯರ್ಥಿ ಘೋಷಣೆ ಮಾಡುವರು ಆದ್ದರಿಂದ ಮುಂದಿನ 2023ರ ಚುನಾವಣೆಯಲ್ಲಿ ಶಿರಹಟ್ಟಿ ಮತಕ್ಷೇತ್ರದಿಂದ ಜ್ಯಾತೀತ ಜನತಾ ದಳ (ಜೆ.ಡಿ.ಎಸ್.) ಪಕ್ಷದ ಅಭ್ಯರ್ಥಿಯ ಗೇಲವು ಕಚಿತವಾಗಲಿದೇ ಎಂದು ಗದಗ ಜಿಲ್ಲಾ ಜ್ಯಾತೀತ ಜನತಾ ದಳ (ಜೆ.ಡಿ.ಎಸ್.) ಪಕ್ಷದ ನಜೀರ್ಹಮ್ಮದ ಡಂಬಳ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜೆ.ಡಿ.ಎಸ್ ಪಕ್ಷದ ಪಂಚರತ್ನ ಯೋಜನೆಯ ಪೋಷ್ಟರಗಳನ್ನು ಬಿಡುಗಡೆಗೊಳಿಸಿ ಸುದ್ಧಿಗಾರರೊಂದಿಗೆ ಮಾತನಾಡಿ, ಮುಂಬರುವಂತಹ 2023ರ ವಿಧಾನ ಸಭಾ ಚುನಾವಣೆಯನ್ನು ಗೆಲ್ಲುವದರೊಂದಿಗೆ ಕರ್ನಾಟಕದ ಅಧಿಕಾರ ಚಿಕ್ಕಾಣಿಯನ್ನು ಹಿಡಿದುಕೊಳ್ಳುವದಕ್ಕಾಗಿ ಜೆ.ಡಿ.ಎಸ್. ಪಕ್ಷದ ವರಿಷ್ಟರು ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿಗಳಾದ ಎಚ್.ಡಿ.ದೇವೇಗೌಡರು ರಾಜ್ಯದ ಸರ್ವ ಜಾತಿ, ಧರ್ಮ ಜನಾಂಗದ ಅಭಿವೃದ್ಧಿಗಾಗಿ ಹಾಗೂ ರಾಜ್ಯದ ಪ್ರಗತಿಗಾಗಿ ಪಂಚರತ್ನ ಯೋಜನೆ ರೂಪಿಸಿ ಅವುಗಳನ್ನು ಚುನಾವಣೆಯ ಅಜಂಡಾಗಳನ್ನಾಗಿ ಮಾಡಿಕೊಂಡು ಚುನಾವಣೆ ಎದುರಿಸುವದಕ್ಕೆ ಮುಂದಾಗಿದ್ದಾರೆ.
ಹಾಗೂ ಈಗಾಗಲೇ ರಾಜ್ಯ 224 ಕ್ಷೇತ್ರಗಳ ಪೈಕಿ 96 ಕ್ಷೇತ್ರಗಳಿಗೆ ಅಭ್ಯಥರ್ಿಗಳನ್ನು ಆಯ್ಕೆ ಮಾಡಿ ಈಗಿನಿಂದಲೇ ಕ್ಷೇತ್ರಗಳಲ್ಲಿ ಚುನಾವಣೆ ಪ್ರಾರಂಭಿಸಿದ್ದಾರೆ ಅದರ ಅನುಗುಣವಾಗಿ ಮೀಸಲು ಕ್ಷೇತ್ರವಾದ ಶಿರಹಟ್ಟಿ ಕ್ಷೇತ್ರಕ್ಕೂ ಈ ಭಾರಿ ಜೆ.ಡಿ.ಎಸ್. ಪಕ್ಷದ ಅಭ್ಯಥರ್ಿಯು ಸ್ಪದರ್ೆ ಮಾಡುತ್ತಿದೆ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವಂತಹ ಬಿ.ಜೆ.ಪಿ.ಯು ಭ್ರಷ್ಟಾಚಾರದ ದುರಾಢಳಿತವನ್ನು ನಡೆಸುತ್ತಿದ್ದು, ಹಾಗೇ ರಾಜ್ಯದಲ್ಲಿ ಬಿ.ಜೆ.ಪಿ ಪಕ್ಷವು ಅಧಿಕಾರಕ್ಕೆ ಬಂದಾಗಿನಿಂದ ಯಾವುದೇ ಒಂದು ಜನಪರವಾದ ಅಭಿವೃದ್ಧಿಯ ಕೆಲಸ ಕಾರ್ಯಗಳನ್ನು ಮಾಡದೇ ಕೇವಲ ರಾಜ್ಯದಲ್ಲಿ ಹಾಗೂ ಸಮಾಜದಲ್ಲಿ ಜಾತಿ,ಧರ್ಮದ ಕೋಮು ಗಲಭೆಗಳನ್ನು ಸೃಷ್ಠಿಸಿ ಜನವಿರೋಧಿ ಆಡಳಿತ ನಡೆಸುತ್ತಿದೆ.
ಹಾಗೇ ಕಾಂಗ್ರೆಸ್ ಪಕ್ಷವು ನಾನು ಮುಖ್ಯಮಂತ್ರಿಯಾಗಬೇಕು, ನಾನು ಮುಖ್ಯಮಂತ್ರಿಯಾಗಬೇಕು ಎಂದು ಪಕ್ಷದ ಒಳಗೆ ಆಂತರಿಕ ಕಚ್ಚಾಟ ಮಾಡುತ್ತಿದೆ, ಆದರೆ ರಾಜ್ಯದ ಜನರ ಹಾಗೂ ನಾಡಿನ ಅಭಿವೃದ್ಧಿಯ ಕನಸು ಕಟ್ಟಿಕೊಂಡಿರುವಂತಹ ನಮ್ಮ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರಸ್ವಾಮಿಗಳು ರಾಜ್ಯದಲ್ಲಿ ಜನಪರವಾದ, ಬಡವರ ಪರವಾದ ಜೆ.ಡಿ.ಎಸ್. ಪಕ್ಷವನ್ನು ಅಧಿಕಾರಕ್ಕೆ ತರುವದಕ್ಕಾಗಿ ಪ್ರಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ.
ಅದರಲ್ಲಿಯು ಮುಂದಿನ 2023ನೇ ವಿಧಾನ ಸಭಾ ಚುನಾವಣೆಯನ್ನು ಪ್ರಮುಖವಾಗಿ ಪ್ರಣಾಳಕಿಯ ರೂಪವಾಗಿ, 5 ಗುರಿ ಉದ್ದೇಶಗಳ ನಾಡಿನ ಜನತೆಗೆ ನೀಡಿದ್ದು ಅವುಗಳೆಂದರೆ " ಶಿಕ್ಷಣವೇ ಆಧುನಿಕ ಶಕ್ತಿ" ಅಂದರೇ ರಾಜ್ಯದ ಪ್ರತಿಯೊಬ್ಬ ಮಗುವಿಗೂ ಉತ್ತಮ ಗುಣಮಟ್ಟದ ಹಾಗೂ ವ್ಯವಸ್ಥಿತ ಶಿಕ್ಷಣವನ್ನು ಉಚಿತವಾಗಿ ನೀಡುವ ಯೋಜನೆ," ಆರೋಗ್ಯ ಸಂಪತ್ತು" ಅಂದರೆ ಪ್ರತಿಯೊಂದು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ದಿನದ 24 ತಾಸು ಕಾರ್ಯನಿರ್ವಹಿಸುವ ಸುಸಜ್ಜಿತ ಹೈಟೆಕ್ ಆಸ್ಪತ್ರೆ ನಿರ್ಮಾಣ ಮಾಡುವದು. " ರೈತ ಚೈತನ್ಯ" ಯೋಜನೆಯ ಅಡಿ ಆಧುನಿಕ ತಂತ್ರಜ್ಞಾನದ ಕೃಷಿ ಪದ್ಧತಿ ಅಳವಡಿಕೆ, ಸರಿಯಾದ ಬೆಳೆ ಶೇಖರಣಾ ಹಾಗೂ ಲಾಭಧಾಯಕವಾದ ಮಾರುಕಟ್ಟೆ ವ್ಯವಸ್ಥೆ ಮಾಡುವದು. " ಯುವ ನವ ಮಾರ್ಗ ಹಾಗೂ ಮಹಿಳಾ ಸಬಲೀಕರಣ" ಯೋಜನೆಯ ಅಡಿಯಲ್ಲಿ ನಾಡಿನಲ್ಲಿರುವಂತಹ ಯುವ ಜನತೆ ಹಾಗೂ ಮಹಿಳೆಯರಿಗೆ ಉದ್ಯೋಗ ಪಡೆಯಲು ಅಗತ್ಯ ತರಬೇತಿ ಹಾಗೂ ಮಾರ್ಗದರ್ಶನ ನೀಡುವದು. ಹಾಗೇ " ವಸತಿಯ ಆಸರೆ" ಯೋಜನೆಯ ಅಡಿಯಲ್ಲಿ ರಾಜ್ಯದಲ್ಲಿ ವಸತಿ ಇಲ್ಲದವರಿಗೆ ಸಕರ್ಾರದಿಂದಲೇ ವಸತಿ ಕಟ್ಟಿಸಿಕೊಡುವುದು ಯೋಜನೆ ಅಡಿಯಲ್ಲಿ " ವಾಗ್ದಾನ ನಮ್ಮದು ನಿಧರ್ಾರ ನಿಮ್ಮದು' ವಾಕ್ಯದೊಂದಿಗೆ ಮತದಾರರಲ್ಲಿ ಮತ ಕೇಳುತ್ತಿದ್ದೇವೆ ಆದ್ದರಿಂದ ನಾಡಿನ ಮತದಾರರು ಈವರಿಗೆ ಜನವಿರೋಧಿ ಆಡಳಿತ ನಡೆಸಿದಂತಹ ಎರಡು ರಾಷ್ಟ್ರೀಯ ಪಕ್ಷದಗಳ ದುರಾಢಳಿತಕ್ಕೆ ನೊಂದು ಈ ಭಾರಿ ಜೆ.ಡಿ.ಎಸ್. ಪಕ್ಷಕ್ಕೆ ಅಧಿಕಾರ ನೀಡುವದಕ್ಕೆ ಮುಂದಾಗಿದ್ದಾರೆಂದು ಗದಗ ಜಿಲ್ಲಾ ಜ್ಯಾತೀತ ಜನತಾ ದಳ (ಜೆ.ಡಿ.ಎಸ್.) ಪಕ್ಷದ ನಜೀರ್ಹಮ್ಮದ ಡಂಬಳ ಹೇಳಿದರು.
ಗದಗ ಜಿಲ್ಲಾ ಜೆ.ಡಿ.ಎಸ್. ಪಕ್ಷದ ಕಾರ್ಯಾ ಧ್ಯಕ್ಷರಾದ ಎಂ.ಆರ್. ಸೋಂಪೂರ ಮಾತನಾಡುತ್ತಾ, ಜೆ.ಡಿ.ಎಸ್. ಪಕ್ಷವು ಈ ಭಾರಿಯ ಚುನಾವಣೆಯಲ್ಲಿ ಯಾರನ್ನು ವೈಯಕ್ತಿಕವಾಗಿ ಟೀಕೆ ಮಾಡುವದಿಲ್ಲಾ, ಯಾಕೆಂದರೆ ರಾಜ್ಯದಲ್ಲಿ ಈವರಿಗೆ ಆಡಳಿತ ಮಾಡಿದಂತಹ ಪಕ್ಷಗಳು ಏನೇನು ಮಾಡಿದ್ದಾರೆಂಬುವುದು ನಾಡಿನ ಜನತೆಗೆ ಗೊತ್ತಿದೆ, ಹಾಗೇ ಈ ಹಿಂದೆ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರಸ್ವಾಮಿಯವರು ಮಾಡಿರುವಂತಹ ಜನಪರವಾದ ಕೆಲಸ ಕಾರ್ಯಗಳು ಹಾಗೂ ಇದೆ ಅವಧಿಯಲ್ಲಿ ಪ್ರಾರಂಭದಲ್ಲಿ 14 ತಿಂಗಳು ರಾಜ್ಯದ ಮುಖ್ಯಮಂತ್ರಿಗಳಾಗಿ 226-00 ಕೋಟಿ ನಾಡಿನ ರೈತರ ಸಾಲ ಮನ್ನಾ ಮಡಿರುವದರೊಂದಿಗೆ ಅಧಿಕಾರ ಅವಧಿಯಲ್ಲಿ ಜಾರಿಗೆ ತಂದಿರುವಂತಹ ಯೋಜನೆಗಳನ್ನು ಮುಂದಿಟ್ಟುಕೊಂಡು ನಾವು ಚುನಾವಣೆ ಮಾಡುತ್ತೆವೆ ನಾಡಿನ ಹಾಗೂ ಶಿರಹಟ್ಟಿ ಕ್ಷೇತ್ರದ ಜನತೆ ನಮ್ಮ ಪಕ್ಷಕ್ಕೆ ಬೆಂಬಲಿಸುತ್ತಿದ್ದಾರೆ ಎಂದು ಹೇಳಿದರು.
ಶಿರಹಟ್ಟಿ ಮತ ಕ್ಷೇತ್ರದ ಜೆ.ಡಿ.ಎಸ್. ಪಕ್ಷದ ಆಕಾಂಕ್ಷಿ ಅಭುಥರ್ಿಯಾಗಿರುವಂತಹ ಹನಮಂತಪ್ಪ ಎಮ್.ನಾಯಕ್ ಮಾತನಾಡುತ್ತಾ, ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರಸ್ವಾಮಿಯವರು ಈ ಹಿಂದೆ 14 ತಿಂಗಳಗಳ ಕಾಲ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ರಾಜ್ಯ ರೈತರ 2-00 ಲಕ್ಷದವರಗಿನ ಸಾಲ ಮನ್ನಾ ಮಾಡಿದಾಗ ಆ ಯೋಜನೆಯ ಲಾಭವನ್ನು ಶಿರಹಟ್ಟಿ ಮತಕ್ಷೇತ್ರದಲ್ಲಿಯೇ ಸೂಮಾರು 17684 ಫಲಾನುಭವಿಗಳು ರೈತರು ಸಾಲ ಮನ್ನಾ ಯೋಜನೆಯ ಲಾಭ ಪಡೆದಿದ್ದು ಅವರ ಮನೆಯ ಬಾಗಿಲುಗಳಿಗೆ ಹೋಗಿ ಅವರಲ್ಲಿ ಮನವಿ ಮಾಡಿಕೊಂಡು ಮತ ಕೇಳುತ್ತೆವೆ. ಹಾಗೇ ಬಿ.ಜೆ.ಪಿ ಪಕ್ಷದ ಜನವಿರೋಧಿ ದುರಾಢಳಿತದಿಂದ ಗ್ರಾಮೀಣ ಭಾಗದಲ್ಲಿ ಅನೇಕ ಯುವಕರು, ಮಹಿಳೆಯರು, ಹಾಗೂ ವಿವಿಧ ಪಕ್ಷದ ಕಾರ್ಯಕರ್ತರು ಜೆ.ಡಿ.ಎಸ್. ಪಕ್ಷಕ್ಕೆ ಬರುತ್ತಿದ್ದು ನಾವು ಕ್ಷೇತ್ರದ ಪ್ರತಿ ಹಳ್ಳಿ ಹಳ್ಳಿಗಳಿಗೂ ಬೇಟಿ ನೀಡಿ ರಾಜ್ಯದ ಜನತೆಗೆ ಜೆ.ಡಿ.ಎಸ್. ಪಕ್ಷವು ಮಾಡಿರುವಂತಹ ಯೋಜನೆಗಳ ಬಗ್ಗೆ ಅರಿವು ಮೂಡಿಸುವದರೊಂದಿಗೆ ಶಿರಹಟ್ಟಿ ಕ್ಷೇತ್ರದಲ್ಲಿ ಪಕ್ಷದ ಭಲವರ್ಧನೆ ಮಾಡುತ್ತೆವೆ ಹಾಗೇ ಈ ಭಾರಿ ರಾಜ್ಯದಲ್ಲಿ ಮತ್ತೆ ಎಚ್.ಡಿ. ಕುಮಾರಸ್ವಾಮಿಗಳು ಮುಖ್ಯಮಂತ್ರಿಗಳಾಗುತ್ತಾರೆ ಎಂದು ಹೇಳಿದರು.
ಸಂಧರ್ಭದಲ್ಲಿ ಮುಂಡರಗಿ ತಾಲೂಕು ಜೆ.ಡಿ.ಎಸ್. ಪಕ್ಷದ ಅಧ್ಯಕ್ಷರ ಜೆ.ಕೆ. ಕೊಳ್ಳಿಮಠ, ಅಶೋಕ ತ್ಯಾಮಣ್ಣನವರ, ದೇವರಡ್ಡಿ ರಾಜೂರು, ಬಿ.ಎಸ್. ನಾಡಗೌಡರ, ಮಹಾದೇವಪ್ಪ ರಾಜೂರು, ಅಮರೇಶ ಆರಿ, ಯಲ್ಲಪ್ಪ ಭಜಂತ್ರಿ, ಮೌಲಾಸಾಬ್ ತೇಂಬೊಲಿ, ಒಳಗೊಂಡತ್ತೆ ಮುತ್ತಾಂದ ಕಾರ್ಯಕರ್ತರು ಪಾಲ್ಗೊಂಡಿದ್ದರು