ಜಮಖಂಡಿಗೆ ವಿಶ್ವವಿದ್ಯಾಲಯ ಆರಂಭಕ್ಕೆ ಅನುಮತಿ ನೀಡಿರುವುದು ಸ್ವಾಗತಾರ್ಹ
ಲೋಕದರ್ಶನ ವರದಿ
ಜಮಖಂಡಿ09: ಶೈಕ್ಷಣಿಕ ಕ್ಷೇತ್ರದಲ್ಲಿ ಜಮಖಂಡಿ ಅಧ್ಯಯನ ಕಾಶಿ ಎಂದು ಗುರುತಿಸಿಕೊಂಡಿದೆ. ಧಾರವಾಡ ನಂತರ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಜಮಖಂಡಿ ತಾಲೂಕಿನಲ್ಲಿ ವಿವಿಧ ವಿಭಾಗಗಳಲ್ಲಿ ಅಧ್ಯಯನ ಮಾಡುತ್ತಿರುವ ಸಂದರ್ಭದಲ್ಲಿ ರಾಜ್ಯ ಸರಕಾರ ಜಮಖಂಡಿಗೆ ವಿಶ್ವವಿದ್ಯಾಲಯ ಆರಂಭಕ್ಕೆ ಅನುಮತಿ ನೀಡಿರುವದು ಸ್ವಾಗತಾರ್ಹ ಎಂದು ರಾಣಿಚೆನ್ನಮ್ಮಾ ವಿಶ್ವವಿದ್ಯಾಲಯದ ಮಾಜಿ ಸಿಂಡಿಕೇಟ ಸದಸ್ಯ ಸಂದೀಪ ಬೆಳಗಲಿ ಹೇಳಿದರು.
ನಗರದ ರಮಾನಿವಾಸ ಸಭಾಭವನದಲ್ಲಿ ಸ್ನಾತಕೋತರ ಹೋರಾಟ ಅಭಿವೃದ್ಧಿ ಸಮಿತಿ ಮತ್ತು ಹಳೆ ವಿದ್ಯಾರ್ಥಿಗಳ ಸಂಘಟನೆ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 7 ಜುಲೈ 2017ರಂದು ಜಮಖಂಡಿ ನಗರದಲ್ಲಿ ರಾಣಿಚೆನ್ನಮ್ಮ ವಿಶ್ವವಿದ್ಯಾಲಯ ಸ್ನಾತಕೋತರ ಕೇಂದ್ರ ಆರಂಭಿಸುವಂತೆ ಮನವಿ ಸಲ್ಲಿಸ ಲಾಗಿತು. 17 ಜುಲೈ 2017 ರಂದು ನಡೆದ 47ನೇ ಸಿಂಡಿಕೇಟ್ ಸಭೆಯಲ್ಲಿ ಮಂಜೂರಾತಿ ಲಭಿಸಿದೆ. ಅಂದಿನ ಶಾಸಕ ದಿ.ಸಿದ್ದು ನ್ಯಾಮಗೌಡ ಅವಿರತ ಪ್ರಯತ್ನದಿಂದ ಕುಂಚನೂರ ವೃತ್ತದ ಹತ್ತಿರ ನಿರ್ಮಾಣ ಗೊಂಡಿದ್ದ ಮಿನಿ ವಿಧಾನಸೌಧ ರಾಣಿಚೆನ್ನಮ್ಮಾ ವಿಶ್ವವಿದ್ಯಾಲಯಲಕ್ಕೆ ಹಸ್ತಾಂತರಿಸುವ ಮೂಲಕ ತಾಲೂಕಿಗೆ ಸ್ನಾತಕೋತರ ಕೇಂದ್ರ ಲಭಿಸಿದೆ ಎಂದರು.
ಸ್ನಾತಕೋತರ ಕೇಂದ್ರವನ್ನು ವಿಶ್ವವಿದ್ಯಾಲಯವನ್ನಾಗಿ ಪರಿವರ್ತಿಸುವ ಮೂಲಕ ರಾಜ್ಯ ಸರಕಾರ ಜಮಖಂಡಿಗೆ ವಿಶ್ವವಿದ್ಯಾಲಯ ಆರಂಭ ಅನುಮತಿ ನೀಡಿದೆ. ಸಿಂಡಿಕೇಟ ಸದಸ್ಯರಾದ ಕಿರಣ ದೇಸಾಯಿ, ರಮೇಶ ಸವದಿ, ಜಮಖಂಡಿ ತಾಲೂಕಿನ ಮಠಾಧೀಶರು, ರಾಜಕೀಯ ನಾಯಕರು, ಜನಪ್ರತಿನಿಧಿಗಳು, ವಕೀಲರ ಸಂಘ ಸಹಿತ ವಿವಿಧ ಸಂಘ-ಸಂಸ್ಥೆಗಳ ಸದಸ್ಯರ ಪ್ರತಿಭಟನೆ, ಮನವಿ ಸಲ್ಲಿಕೆ ಮೂಲಕ ತಾಲೂಕಿನ ಜನತೆಗೆ ವಿಶ್ವ ವಿದ್ಯಾಲಯ ಲಭ್ಯವಾಗಿದೆ ಎಂದರು.
ಜಮಖಂಡಿ ಆರಂಭಗೊಳ್ಳಲಿರುವ ವಿಶ್ವವಿದ್ಯಾಲಯಕ್ಕೆ ವಿಜಯಪೂರ ಜಿಲ್ಲೆ ಕಾಲೇಜುಗಳ ಸೇರ್ಪಡೆಗೊಂಡರೇ ರಾಜ್ಯದಲ್ಲಿ ಅತಿದೊಡ್ಡ ಎರಡನೇಯ ವಿಶ್ವವಿದ್ಯಾಲಯ ಆಗಲಿದೆ. ವಿಜಯಪೂರ, ಇಂಡಿ, ಸಿಂದಗಿ, ಬಬಲೇಶ್ವರ, ಅಥಣಿ ತಾಲೂಕಿನ ಜನತೆ ವಿಶ್ವವಿದ್ಯಾಲಯಕ್ಕೆ 250 ಕಿ.ಮೀ. ಕ್ರಮಿಸುವ ಬದಲಾಗಿ ಕೇವಲ 60 ರಿಂದ 80 ಕಿ.ಮೀ. ಅಂತರದಲ್ಲಿ ಜಮಖಂಡಿ ವಿಶ್ವವಿದ್ಯಾಲಯ ಲಭವ್ಯವಾಗಲಿದೆ. ಬೆಳಗಾವಿ, ಧಾರವಾಡ ವಿಶ್ವವಿದ್ಯಾಲಯ ಬದಲಾಗಿ ಜಮಖಂಡಿ ವಿಶ್ವವಿದ್ಯಾಲಯ ಸೂಕ್ಷ್ಮ ಸ್ಥಳವಾಗಲಿದೆ. ನಗರದಲ್ಲಿ ನಿಮರ್ಾಣಗೊಂಡಿರುವ ಸ್ನಾತಕೋತರ ಕೇಂದ್ರ ಅತ್ಯಂತ ಸುಸಜ್ಜಿತ ಕಟ್ಟಡ ಹೊಂದಿದ್ದು, ವಿಶ್ವವಿದ್ಯಾಲಯ ಆರಂಭಿಸುವದಕ್ಕೆ ಅಗತ್ಯ ಮೂಲಭೂತ ಸೌಕರ್ಯಗಳ ಹೊಂದಿದೆ. ಈಗಾಗಲೇ 6 ವಿಭಾಗಳಳಲ್ಲಿ 150ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, 8 ವಿದ್ಯಾರ್ಥಿಗಳು ಪಿ.ಎಚ್.ಡಿ. ಅಧ್ಯಯನದಲ್ಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಮಹಾಂತೇಶ ತೆಲಬಕ್ಕನ್ನವರ, ಸಿದ್ದಾರ್ಥ ತಳಕೇರಿ, ಈರಪ್ಪ ಸುತಾರ, ವಿಠ್ಠಲ ಚವ್ಹಾಣ, ಡಾ.ಮಲ್ಲಕಾಜರ್ುನ ಅಂಬಲಿ, ಡಾ.ಬಿ.ಕೆ.ರವಿಕುಮಾರ, ಜಬೀನಾ ಮೌಲ್ವಿ, ಡಾ. ರಮೇಶ ಸಂಗನ್ನವರ ಸಹಿತ ಹಲವರು ಇದ್ದರು.