ದನದ ಕೊಟ್ಟಿಗೆಗೆ ಹಾನಿ ಮಾಡಿದ ಘಟನೆ
Incident of damage to a cowshed
ದಾಂಡೇಲಿ 02: ಇಲ್ಲಿಗೆ ಸಮೀಪದ ಆಲೂರು ಗ್ರಾಮದ ಹೊಲಕ್ಕೆ ಒಂಟಿ ಸಲಗವೊಂದು ದನದ ಕೊಟ್ಟಿಗೆಗೆ ಹಾನಿ ಮಾಡಿದ ಘಟನೆ ರವಿವಾರ ಮಧ್ಯರಾತ್ರಿ ನಡೆದಿದೆ. ಕಳೆದ ಕೆಲವು ತಿಂಗಳಿಂದ ಆಲೂರು ಗ್ರಾಮಕ್ಕೆ ಮೇಲಿಂದ ಮೇಲೆ ಕಾಡಾನೆಗಳು ನುಗ್ಗಿ ಬೆಳೆ ನಾಶ ಮಾಡುತ್ತಾ ಬಂದಿದ್ದವು. ಆದರೆ ರವಿವಾರ ಮಧ್ಯರಾತ್ರಿ ಆಲೂರಿನ ಹೊಲಕ್ಕೆ ನುಗ್ಗಿರುವ ಒಂಟಿಸಲಗವೊಂದು ಬೆಳೆಗಳನ್ನು ಹಾನಿ ಮಾಡಿ, ಹೊಲದಲ್ಲಿದ್ದ ಕೊಟ್ಟಿಗೆಗೆ ನುಗ್ಗಿ ದ್ವಂಸಗೊಳಿಸಿದ್ದಲ್ಲದೆ, ಅಲ್ಲಿದ್ದ ಎಮ್ಮೆ ಮತ್ತು ಕರುವಿಗೆ ಗಾಯಗೊಳಿಸಿದ ಘಟನೆ ಕೂಡಾ ಜರುಗಿದೆ. ಆಲೂರಿನ ಪುಂಡಲಿಕ ಜಾಧವ ಎನ್ನುವವರ ಹೊಲದಲ್ಲಿರುವ ದನದ ಕೊಟ್ಟಿಗೆಯಾಗಿತ್ತು. ಅರಣ್ಯ ಇಲಾಖೆಯವರು ಕೂಡಲೇ ಪರೀಶೀಲನೆ ನಡೆಸಿ ಸೂಕ್ತ ಪರಿಹಾರ ನೀಡುವದರೊಂದಿಗೆ ಕಾಡಾನೆಯನ್ನು ಕಾಡಿಗಟ್ಟುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 