ರಂಗೋಲಿ ಬಿಡಿಸಿ, ಸ್ವಚ್ಚತಾ ಜಾಗೃತಿ ಕಾರ್ಯ
ಲೋಕದರ್ಶನ ವರದಿ,
ಜಮಖಂಡಿ 28: ನಗರಸಭೆಯ ಸ್ವಚ್ಛ ಸರ್ವೇಕ್ಷಣೆ-2023 ರ ಸ್ವಚ್ಛ ಭಾರತ ಅಭಿಯಾನದಡಿ ನಗರದ ಓಲಿಮಠದ ಬಳಿ ಹಾಗೂ ಗೌವಳಿಗಲ್ಲಿಯಲ್ಲಿನ ಸಾರ್ವಜನಿಕರು ಎಲ್ಲಂದರಲ್ಲಿ ಕಸ ಹಾಕಿ,ಬ್ಲಾಕ್ ಸ್ಪಾಟ್ವನ್ನಾಗಿ ಮಾಡಿದ್ದರು. ಇದನ್ನು ಅರಿತ ನಗರಸಭೆ ಅಧಿಕಾರಿಗಳು ಆ ಪ್ರದೇಶದಲ್ಲಿ ಪೌರಕಾಮರ್ಿಕರು ಹಾಗೂ ನಗರಸಭೆ ಸಿಬ್ಬಂದಿಗಳಿಂದ ರಂಗೋಲಿ ಬಿಡಿಸಿ, ಕಸವನ್ನು ಎಸೆಯದಂತೆ ಸಾರ್ವಜನಿಕರಿಗೆ ತಿಳಿ ಹೇಳಿದರು. ಪೌರಾಯುಕ್ತೆ ಲಕ್ಷ್ಮೀ ಅಷ್ಟಗಿ, ಸಹಾಯಕ ಕಾರ್ಯಪಾಲಕ ಅಭಿಯಂತರ(ಪರಿಸರ) ಕುಸಮಾ ಸೊಪ್ಪಡ್ಲ, ಆರೋಗ್ಯ ನಿರೀಕ್ಷಕ ಮಂಜುನಾಥ ಹಡಪದ ಇನ್ನಿತರರು ತಿಳುವಳಿಕೆ ಮೂಡಿಸಿದರು.