ಸಾರ್ವಜನಿಕ ರಸ್ತೆಯನ್ನೆ ಕಬಳಿಸಿ ನಿಮರ್ಿಸಿರುವ ಜಿಲ್ಲಾ ನೌಕರ ಭವನ
ಹಾವೇರಿ೧೪: ಜಿಲ್ಲಾ ಪ್ರದೇಶವಾಗಿರುವ ಹಾವೇರಿ ನಗರದಲ್ಲಿ ಸಾರ್ವಜನಿಕ ರಸ್ತೆಯನ್ನೇ ಅತಿಕ್ರಮಣ ಮಾಡಿ ನೌಕರರ ಭವನ ಕಟ್ಟಿಕೊಂಡು ರಾಜಾರೋಷವಾಗಿ ಮೆರೆಯುತ್ತಿರುವ ನೌಕರರ ಸಂಘಕ್ಕೆ ಕಾನೂನೇ ಇಲ್ಲದಂತಾಗಿದೆ.
ಸಾರ್ವಜನಿಕರಿಗೆ ಬುದ್ಧಿ ಹೇಳುವವರೇ ಈ ರೀತಿ ಕಟ್ಟಡಗಳನ್ನು ಕಟ್ಟಿಸಿಕೊಂಡು ಲಾಭವನ್ನು ಪಡೆಯುತ್ತಿದ್ದಾರೆ. ಸಾರ್ವಜನಿಕ ರಸ್ತೆ ಜಾಗದಲ್ಲಿ ವಾಹನಗಳಿಗೆ ಓಡಾಡಲು ತೊಂದರೆ ಇದ್ದರೂ ಇದರ ಬಗ್ಗೆ ಯಾವುದೇ ಕನಿಷ್ಠ ಯೋಚನೆ ಕೂಡಾ ಇದುವರೆಗೂ ಮಾಡಿಲ್ಲ. ಇತ್ತಿತ್ತಲಾಗಿ ಒಳಚರಂಡಿ ಮೇಲೆ ಮೇಲ್ಛಾವಣೆ ಹಾಕಿ ಮಳಿಗೆಗಳನ್ನು ಕಟ್ಟಿಕೊಂಡು ಈ ಸಾರ್ವಜನಿಕ ಆಸ್ತಿ ಕಬಳಿಸಿದ್ದಾರೆ. ಇವರಿಗೆ ಸರಿಯಾದ ರೀತಿಯಲ್ಲಿ ಕಟ್ಟಡ ನಿಮರ್ಿಸಿಕೊಳ್ಳುವಂತೆ ನಗರಸಭೆ ಕೂಡಾ ಯಾವುದೇ ಸೂಚನೆ ನೀಡಿಲ್ಲ ಎನ್ನುವ ಚಚರ್ೆ ಸಾರ್ವಜನಿಕರಿಂದಲೇ ಕೇಳಿ ಬಂದಿವೆ. ಸಾರ್ವಜನಿಕ ಜನಬೀಡು ಪ್ರದೇಶವಾಗಿರುವ ಜೆಪಿ ಸರ್ಕಲ್ ವ್ಯಾಪ್ತಿಯಲ್ಲಿ ಈ ಕಟ್ಟಡ ಬಹಳ ಹಳೆಯ ಕಟ್ಟಡವಾಗಿದ್ದರೂ ಕಾಲ,ಕಾಲಕ್ಕೆ ನವೀಕರಣ ಮಾಡಿಕೊಂಡು ಬರಲಾಗಿದೆ ಅಲ್ಲದೇ ಒಳ್ಳೆಯ ಉದ್ದೇಶಕ್ಕೆ ಈ ಕಟ್ಟಡ ಸದ್ಭಳಕೆಯಾಗುತ್ತಿದ್ದರೂ ಸಹ ಅದು ನಿಯಮದಂತೆ ಸಾರ್ವಜನಿಕ ರಸ್ತೆ ಮೇಲೆ ನಿಮರ್ಾಣವಾಗಿರುವುದಂತೂ ಸತ್ಯ ಹಾಗಾದರೆ ಇದಕ್ಕೆಲ್ಲ ಕಾರಣರಾದವರ ಮೇಲೆ ಕ್ರಮವಾಗಬೇಕು. ನಿಯಮ ಬಾಹಿರ ಕಟ್ಟಡಗಳು ಈ ನಗರದಲ್ಲಿ ತೆರವು ಮಾಡುವ ಕೆಲಸವನ್ನು ನಗರಸಭೆ ಮಾಡಬೇಕಾಗಿದೆ ಎಂದು ಸ್ಥಳೀಯ ಜನರ ಒತ್ತಾಯವಾಗಿದೆ.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 