ಸಂಘದ ಬೆಳವಣಿಗೆಗೆ ಸಹಕಾರ ಮುಖ್ಯ: ತಡವಲಗಾ ಶ್ರೀಗಳು
ಲೋಕದರ್ಶನ ವರದಿ
ಇಂಡಿ 21: ಸಹಕಾರ ಸಂಘಗಳ ಬೆಳವಣಿಗೆ ಎಲ್ಲ ಸದಸ್ಯರ ಸಹಕಾರದಿಂದ ಮಾತ್ರ ಸಾಧ್ಯ ಎಂದು ತಡವಲಗಾ ಹಿರೇಮಠದ ಅಭಿನವ ರಾಚೋಟೇಶ್ವರ ಶಿವಾಚಾರ್ಯ ಹೇಳಿದರು. ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 2025-26ನೇ ಸಾಲಿನ ವಾರ್ಷಿಕ ಸರ್ವಸಾಧಾರಣ ಸಭೆಯ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಸಹಕಾರಿ ಸಂಘಗಳ ಮೂಲತತ್ತ್ವವೇ “ಒಬ್ಬರಿಗಾಗಿ ಎಲ್ಲರೂ, ಎಲ್ಲರಿಗಾಗಿ ಒಬ್ಬರು” ಎಂಬುದಾಗಿದೆ. ಸಹಕಾರಿ ಸಂಸ್ಥೆಯ ನೈಜ ಯಶಸ್ಸು, ನಿರಂತರ ಬೆಳವಣಿಗೆ ಹಾಗೂ ಆಡಳಿತಾತ್ಮಕ ಶಿಸ್ತು ಸಂಪೂರ್ಣವಾಗಿ ಅದರ ಸಮಸ್ತ ಷೇರುದಾರರ (ಸದಸ್ಯರ) ಸಕ್ರಿಯ ಪಾತ್ರ ಮತ್ತು ಬದ್ಧತೆಯ ಮೇಲೆ ನಿಂತಿದೆ. ಷೇರುದಾರರು ಕೇವಲ ಬಂಡವಾಳ ಹೂಡುವ ಹೂಡಿಕೆದಾರರಲ್ಲ; ಅವರು ಸಂಸ್ಥೆಯ ನಿಜವಾದ ಮಾಲೀಕರು ಎಂದು ಹೇಳಿದರು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ರಾಮಣ್ಣ ದೂಳಪ್ಪ ರೂಗಿ ಅವರು ವಹಿಸಿದ್ದರು.
ಈ ಸಂದರ್ಭದಲ್ಲಿ ಬಾಬುಸ್ವಾಮಿ ಮಠಪತಿ, ರಮೇಶ ಹೊಸಮನಿ, ಅಶೋಕ ಮಿರ್ಜಿ, ನಾಗಪ್ಪ ಮಕಣಿ, ಸುರೇಶ ಹಿಳ್ಳಿ, ಬಸವರಾಜ ಗಬ್ಬೂರ, ಸಂಘದ ಉಪಾಧ್ಯಕ್ಷ ರಾಮಣ್ಣ ತಳವಾರ, ಮಂಜುನಾಥ ಮದರಿ, ಭೀಮರಾಯ ಮಡ್ನಳ್ಳಿ, ಸಂಪತ್ ಕುಮಾರ್ ಹಿಳ್ಳಿ, ಅಶೋಕ ಕುದರಿ, ಬಸಪ್ಪ ಸಾರವಾಡ, ಬೀಮು ಮೇಲಿನಕೇರಿ, ರಾಜು ಕ್ಷೇತ್ರಿ, ಹುಮಯಾನ ಕಸ್ಸಾಬ, ಯಶವಂತ ರೂಗಿ, ಸಂಘದ ಕಾರ್ಯನಿರ್ವಾಹಣಾಧಿಕಾರಿ ರಫೀಕ್ ತಾಂಬೂಳಿ, ಸಿಬ್ಬಂದಿಗಳಾದ ರವಿ ರೂಗಿ, ವೀರೇಶ ಹಿರೇಮಠ, ಅಂಬರೀಶ್ ತಾರಾಪೂರ, ಅಣ್ಣಪ್ಪ ರಾಂಪೂರ, ಹಣಮಂತ ನಾದ, ಕಮಲಾಕರ ತಡ್ಲಗಿ, ಪ್ರಕಾಶ್ ತಳವಾರ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.