ನೂತನ ಶಾಸಕರಿಗೆ ಅಭಿನಂದನೆ ಸಮಾರಂಭ
ಕುಕನೂರು 01-ತಾಲೂಕಿನ ಮಂಗಳೂರು ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಆಯೋಜಿಸಿದ ಅಭಿನಂದನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ನೂತನ ಶಾಸಕ ಬಸವರಾಜ ರಾಯರೆಡ್ಡಿ ಮಾತನಾಡುತ್ತಾ ಚುನಾವಣಾ ಸ್ಪರ್ಧಿಸುವಾಗ ಮಾತ್ರ ಪಕ್ಷಗಳು ಪರಗಣನೆಗೆ ಬರುತ್ತವೆ. ಆಯ್ಕೆಯಾದ ನಂತರ ಯಾವುದೇ ಪಕ್ಷಗಳು ಸಂಬಂಧವಿಲ್ಲ ಅದು ಕೇವಲ ರಾಜಕಾರಣದಲ್ಲಿ ಮಾತ್ರ ಆದರೆ ಜನಸಾಮಾನ್ಯರನ್ನರಲ್ಲಿ ಬೆರೆಯುವಾಗ, ಕ್ಷೇತ್ರದ ಅಭಿವೃದ್ಧಿಯ ವಿಚಾರ ಮಾಡುವಾಗ ನಾನು ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕನೆ ಹೊರತು ಕೇವಲ ಕಾಂಗ್ರೆಸ್ ಶಾಸಕನಲ್ಲ, ನನಗೆ ನನಗೆ ಮತ ನೀಡಿ ಗೆಲ್ಲಿಸಿದ ಮತದಾರರು ಎಷ್ಟು ಮುಖ್ಯವೋ ಮತ ಹಾಕದೆ ಇರುವ ಮತದಾರರು ಕೂಡ ಅಷ್ಟೇ ಮುಖ್ಯ ಮತ ಹಾಕಿದವರು, ಹಾಕದೆ ಇರುವವರು ಎಲ್ಲರೂ ನನ್ನ ಯಲಬುರ್ಗಾ ಕ್ಷೇತ್ರದ ಮತದಾರರೇ ಹೊರತು ಬೇರೆಯವರಲ್ಲ ನನಗೆ ಆಯ್ಕೆಯಾದ ನಂತರ ಪಕ್ಷ ಭೇದ ಜಾತಿ ಲೆಕ್ಕಕ್ಕೆ ಬರುವುದಿಲ್ಲ ಎಲ್ಲರನ್ನೂ ಸಮಾನವಾಗಿ ಕಾಣುವ ದೃಷ್ಟಿಕೋನವನ್ನು ನಾನು ಹೊಂದಿದ್ದೇನೆ ಹಾಗೂ ನನ್ನನ್ನು ಆಯ್ಕೆ ಮಾಡಿದ ಕ್ಷೇತ್ರದ ಎಲ್ಲ ಜನತೆಗೆ ಎಂದೇದಿಗೂ ನಾನು ಋಣಿಯಾಗಿರುತ್ತೇನೆ ಎಂದು ಹೇಳಿದರು.
ಕ್ಷೇತ್ರದ ಕೆಲ ಜನ ನನ್ನ ವಿರೋಧಿಗಳು ನನ್ನನ್ನು ಸೌಜನ್ಯವಿಲ್ಲದವನು, ಯಾರಿಗೂ ಗೌರವ ಕೊಡದೆ ಇರುವವನು, ನಾವಿಲ್ಲದ ಸಮಯದಲ್ಲಿ ನಮ್ಮನ್ನು ಬೈಯುತ್ತಾ ಇರುತ್ತಾನೆ ಎಂದು ನನ್ನ ಬಗ್ಗೆ ಇಲ್ಲ ಸಲ್ಲದ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದು ದಯವಿಟ್ಟು ಅದನ್ನು ನಿಲ್ಲಿಸಬೇಕು ಹಾಗೂ ನಾನು ಯಾರಾದರೂ ಬೈದಿದ್ದರೆ ನೀವು ನನ್ನನ್ನು ಇಂತಹ ವೇಳೆಯಲ್ಲಿ ಬೈದಿದ್ದರೂ ಎಂದು ವೇದಿಕೆಯಲ್ಲಿ ಹೇಳಿದರೆ ಅವರಿಗೆ ಬಹಿರಂಗವಾಗಿಯೇ ಕ್ಷಮೆ ಕೇಳುತ್ತೇನೆ ದಯವಿಟ್ಟು ತೆರೆಮರೆಯಲ್ಲಿ ನನ್ನ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುವುದನ್ನು ನಿಲ್ಲಿಸಿ ಎಂದು ಹೇಳಿದರು. ನೂತನ ಶಾಸಕರಾಗಿ ಸಚಿವ ಬಸವರಾಜ ರಾಯರೆಡ್ಡಿ ಅವರು ಮಂಗಳೂರು ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಭಜ ಭಜಂತ್ರಿ ಯೊಂದಿಗೆ ಪಟಾಕಿ ಸಿಡಿಸಿ ಗ್ರಾಮದ ರಾಜಬೀದಿಯಲ್ಲಿ ಮೆರವಣಿಗೆ ಮಾಡುತ್ತ ವೇದಿಕೆಯತ್ತ ಅವರನ್ನು ಕರೆತರಲಾಯಿತು.
ಹನುಮಂತ ಗೌಡ ಚಂಡೂರ, ವೀರನಗೌಡ ಬಳೂಟಗಿ, ರಾಮಣ್ಣ ಸಾಲಬಾವಿ, ಎಂ ಎ ದೇಸಾಯಿ, ವೀರಣ್ಣ ಹಳ್ಳಿಕೇರಿ , ಗವಿದ್ದಯ್ಯ ಅರಳಲೇಮಠ ಎಂ ಎಫ್ ನದಾಫ್, ರಾಜಶೇಖರ ನಿಂಗೋಜಿ, ಅಶೋಕ ತೋಟದ ಸಕ್ರಪ್ಪ ಚೌಡ್ಕಿ, ಪ್ರಶಾಂತ ಪಟ್ಟಣಶೆಟ್ಟಿ,ಸುರೇಶ ಮ್ಯಾಗಳೇಶಿ, ಪ್ರಶಾಂತ ಅಳವಂಡಿ ಮಂಜುನಾಥ ವಿವೇಕಿ ಮರಿಸ್ವಾಮಿ ಪೂಜಾರಿ,ಮಂಗಳೇಶಿ ಬಂಡಿ, ಡಾ. ಶಿವನಗೌಡ ದಾನರೆಡ್ಡಿ, ಶರಣಪ್ಪ ಗಾಂಜಿ, ಇನ್ನಿತರ ಮುಖಂಡರು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು