ಜಮಖಂಡಿ

ಸಮುದಾಯ ಆಧಾರಿತ ತಪಾಸಣಾ ಶಿಬಿರ

ಸಮುದಾಯ ಆಧಾರಿತ ತಪಾಸಣಾ ಶಿಬಿರ
ಜಮಖಂಡಿ ತಾಲೂಕಿನ ಹಿರೇಪಡಸಲಗಿ ಜಮಖಂಡಿ ಶುಗರ್ ಕಾರ್ಖಾನೆಯಲ್ಲಿ ರೋಗಿಗಳನ್ನು ತಪಾಸಣೆ ನಡೆಸುವ ವೈದ್ಯರು.

ಲೋಕದರ್ಶನ ವರದಿ,

ಜಮಖಂಡಿ 20:ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಯಿಟಿ, ಜಿಲ್ಲಾ ಆಡಳಿತ, ಜಿಪಂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಹಾಗೂ ನಿಯಂತ್ರಣ ಘಟಕ, ತಾಲೂಕಾ ಆರೋಗ್ಯಾಧಿಕಾರಿಗಳ ಕಚೇರಿ ಇವುಗಳ ಆಶ್ರಯದಲ್ಲಿ ಸಮುದಾಯ ಆಧಾರಿತ ತಪಾಸಣಾ ಶಿಬಿರವನ್ನು ತಾಲೂಕಿನ ಹಿರೇಪಡಸಲಗಿ ಜಮಖಂಡಿ ಶುಗರ್ ಕಾರ್ಖಾನೆಯಲ್ಲಿ ನಡೆಸಲಾಯಿತು.

ಶಿಬಿರದಲ್ಲಿ ಒಟ್ಟು 151 ಹೆಚ್ಐವ್ಹಿ, ಮಧುಮೇಹ, ಬಿಪಿ ರೋಗಿಗಳ ತಪಾಸಣೆ ಮಾಡಲಾಯಿತು. ಚೈತನ್ಯ ಏಡ್ಸ್ ತಡೆಗಟ್ಟುವ ಮಹಿಳಾ ಸಂಘ ಹಾಗೂ ಕರ್ನಾಟಕ  ಆರೋಗ್ಯ ಸಂವರ್ಧನಾ ಸಿಬ್ಬಂದಿ ಆಶಾ ಕಾರ್ಯಕರ್ತರು, ಉಪ ವಿಭಾಗೀಯ ಆಸ್ಪತ್ರೆಯ ಡಾ.ರಷ್ಮಿ ರಜಪೂತ ಐಸಿಟಿಸಿ ಸಿಬ್ಬಂದಿ ದಳವಾಯಿ, ಹೊನವಾಡ  ವಿರುಪಾಕ್ಷಿ, ಮಂಜು  ಲಮಾಣಿ ಭಾಗವಹಿಸಿದರು. ಶುಗರ್ ಕಾರ್ಖಾನೆಯ ಸಿಬ್ಬಂದಿಗಳು ಶಿಬಿರದಲ್ಲಿ ಭಾಗಿಗಳಾಗಿದ್ದರು. 


ಸುದ್ದಿ ಓದಿ