ಅಂಬೇಡ್ಕರ್‌ರ ಸಿದ್ದಾಂತದ ಹೋರಾಟದಿಂದ ಬಲಿಷ್ಠ ಸಂಘಟನೆೆ ಕಟ್ಟಲು ಮುಂದಾಗಿ: ಡಿ.ಶಿವಶಂಕರ್

ಅಂಬೇಡ್ಕರ್‌ರ ಸಿದ್ದಾಂತದ ಹೋರಾಟದಿಂದ ಬಲಿಷ್ಠ ಸಂಘಟನೆೆ ಕಟ್ಟಲು ಮುಂದಾಗಿ: ಡಿ.ಶಿವಶಂಕರ್  Building a strong organization through the struggle for Ambedkar's ideology: D. Shivshankar


ಗದಗ ಮಾ.4. : ಕರ್ನಾಟಕ ರಾಜ್ಯ ಸರ್ಕಾರಿ ಎಸ್‌.ಸಿ .ಎಸ್‌.ಟಿ ನೌಕರರ ಸಮನ್ವಯ ಸಮಿತಿ ಪ್ರಾರಂಭಗೊಂಡು ಇಪ್ಪತ್ತು ವರ್ಷ ಪೂರೈಸಿ ಇಪ್ಪತ್ತೊಂದನೇ ವರ್ಷದಲ್ಲಿ ಪಾದಾರೆ​‍್ಣ ಮಾಡಿದ್ದು ಎಲ್ಲರಿಗೂ ಸಂತೋಷದಾಯಕ ವಿಚಾರವಾಗಿದೆ. ಈ ಸಂಘಟನೆಗೆ ರಾಜ್ಯದ ಪ್ರತಿಯೊಂದು ಜಿಲ್ಲಾ ಶಾಖೆ ತಾಲ್ಲೂಕ ಶಾಖೆ ಪದಾಧಿಕಾರಿಗಳು ಮತ್ತು ಸಮಸ್ತ ಎಸ್ಸಿ.ಎಸ್ಟಿ ನೌಕರರು ಜೊತೆಗೆ ಹೆಜ್ಜೆಗಳನ್ನು ಇಟ್ಟು ಪ್ರೋತ್ಸಾಹಿಸಿದ ಎಲ್ಲರಿಗೂ ರಾಜ್ಯಾಧ್ಯಕ್ಷರಾದ ಡಿ.ಶಿವಂಶಕರ ರವರು ಅಭಿನಂದನೆಗಳನ್ನು ಸಲ್ಲಿಸಿದರು. 

ಕರ್ನಾಟಕ ರಾಜ್ಯ ಸರ್ಕಾರಿ ಎಸ್‌.ಸಿ .ಎಸ್‌.ಟಿ ನೌಕರರ ಸಮನ್ವಯ ಸಮಿತಿ ಬೆಂಗಳೂರು ನಲ್ಲಿ ಏರಿ​‍್ಡಸಿದ ಕೇಂದ್ರ ಕಾರ್ಯಕಾರಿ ಚಿಂತನ-ಮಂಥನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಡಾ.ಬಿ.ಆರ್‌.ಅಂಬೇಡ್ಕರ್ ರವರ ಸಿದ್ದಾಂತದ ಹೋರಾಟ ಬಲಿಷ್ಠ ಸಂಘಟನೆಯ ಕಟ್ಟಲು ಮುಂದಾಗಬೇಕು, ರಾಜ್ಯ ನೌಕರರ ಸಮಸ್ಯೆಗಳ ಬಗ್ಗೆ ಮತ್ತು ಅವರ ನೋವು ನಲಿವು ಬಗ್ಗೆ ಪ್ರತಿಯೊಬ್ಬ ಪದಾಧಿಕಾರಿಗಳು ಸ್ಪಂದನೆ ಮಾಡಬೇಕು. ಎಪ್ರೀಲ್‌/ಮೇ 2026ರಲ್ಲಿ ಬೆಂಗಳೂರಿನಲ್ಲಿ ಅರಮನೆ ಮೈದಾನದಲ್ಲಿ ರಾಜ್ಯ ಮಟ್ಟದ ಸಮಾವೇಶ ಏರಿ​‍್ಡವುದಾಗಿ ಮತ್ತು ತಾವೆಲ್ಲರೂ ತನು ಮನ ಧನ ಸಹಕಾರ ನೀಡಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕೆಂದು ಹೇಳಿದರು. 

ಸಂಘದ ರಾಜ್ಯ ಪ್ರದಾನ ಕಾರ್ಯದರ್ಶಿಗಳಾದ ಡಾ.ಎಸ್‌.ವಿಜಯಕುಮಾರ ಮಾತನಾಡಿ ಇಂದು ಎಸ್ಸಿ,ಎಸ್ಸಿ ನೌಕರರು ಡಾ.ಬಿ.ಆರ್‌.ಅಂಬೇಡ್ಕರ್ ತೋರಿದ ಹಾದಿಯಲ್ಲಿ ಸಾಗಬೇಕಾಗಿ ಮತ್ತು ರಾಜ್ಯದಲ್ಲಿ ನಮ್ಮ ಸಂಘಟನೆಯ ಶಕ್ತಿಯನ್ನು ತೋರಿದಬೇಕಾಗಿದೆ. ರಾಜ್ಯದಲ್ಲಿ  ಸಮಾಜಿಕ ಅಸಮಾನತೆ, ಆರ್ಥಿಕ ಅಸಮಾನತೆಯ ಬಗ್ಗೆ ರಾಜ್ಯ ಸರ್ಕಾರಿ ನೌಕರರರಲ್ಲಿ ಅರಿವನ್ನು ಮೂಡಿಸಿ ಸಂಘಟನೆಯಲ್ಲಿ ಹೆಚ್ಚು ನೌಕರರ ಸಂಘಟನೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿ ಬಲಿಷ್ಟ ಸಂಘಟನೆಯನ್ನು ಕಟ್ಟೋಣ ಎಂದು ಹೇಳಿದರು. 

ಕರ್ನಾಟಕ ರಾಜ್ಯ ಸರ್ಕಾರಿ ಎಸ್‌.ಸಿ .ಎಸ್‌.ಟಿ ನೌಕರರ ಸಮನ್ವಯ ಸಮಿತಿ ಗದಗ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವಿಶ್ವನಾಥ ಹೊಸಮನಿ ಕ್ರಾಂತಿ ಗೀತೆಯನ್ನು ಹೇಳಿ ಮಾತನಾಡಿ ಗದಗ ಜಿಲ್ಲೆಯಲಿ ಪ್ರತಿಯೊಂದು ತಾಲ್ಲೂಕಿನ ಸಂಘಟನೆಯನ್ನು ನಮ್ಮ ಜಿಲ್ಲಾ ಅಧ್ಯಕ್ಷರಾದ ಸಿದ್ದಪ್ಪ ಎನ್ ಲಿಂಗದಾಳ ರವರ ನೇತೃತ್ವದಲ್ಲಿ ಬಲಿಷ್ಠವಾದ ಸಂಘಟನೆಯನ್ನು ಕಟ್ಟುತ್ತೇವೆ ತಮ್ಮ ಪ್ರೋತ್ಸಾಹ ಸಧಾ, ನೀಡಬೇಕೆಂದು ಹೇಳಿದರು. ಕಾರ್ಯಕ್ರಮದಲ್ಲಿ  ರಾಜ್ಯ ಉಪಾಧ್ಯಕ್ಷ ಆರ್ ಮೋಹನ್ ಸತ್ಯನಾರಾಯಣ ಎಂ.ಎಲ್‌. ಹರೀಶ್ ಚವ್ಹಾಣ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಇದ್ದರು.