ಬಾಗಲಕೋಟೆ: ಎಸ್ಸಿಪಿ, ಟಿಎಸ್ಪಿ ಅನುದಾನ ಬಳಕೆಯಾಗದಿದ್ದಲ್ಲಿ ಕ್ರಮ: ಜಿಲ್ಲಾಧಿಕಾರಿ ರಾಮಚಂದ್ರನ್
ಬಾಗಲಕೋಟೆ 15: ವಿವಿಧ ಇಲಾಖೆಯ ಅನುದಾನದಲ್ಲಿ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಗಳ ಕಾರ್ಯಕ್ರಮಗಳಿಗೆ ಮೀಸಲಿರಿಸಲಾದ ಹಣವನ್ನು ಸಮರ್ಪಕವಾಗಿ ಬಳಕೆಯಾಗದಿದ್ದಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಹೇಳಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಎಸ್ಸಿಪಿ, ಟಿಎಸ್ಪಿ ಪ್ರಗತಿ ಪರಿಶೀಲನೆ, ಜಿಲ್ಲಾ ಮಟ್ಟದ ಜಾಗೃತ ನಿಯಂತ್ರಣ ಹಾಗೂ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆ ಕಾರ್ಯಕ್ರಮಗಳಿಗೆ ನಿಗದಿಪಡಿಸಿದ ಅನುದಾನವನ್ನು ಕಡ್ಡಾಯವಾಗಿ ಖಚರ್ು ಮಾಡಬೇಕು. ಸಂಪೂರ್ಣವಾಗಿ ಖಚರ್ಾಗದೇ ಇದ್ದಲ್ಲಿ ಅಂತಹ ಅಧಿಕಾರಿಗಳ ಮೇಲೆ ಸೂಕ್ತ ಕ್ರಮಕ್ಕಾಗಿ ಹಿಂಜರಿಯುವದಿಲ್ಲವೆಂದು ತಿಳಿಸಿದರು.
ಜಿಲ್ಲೆಯಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪಂಗಡ ವರ್ಗದವರ ವಿಕಲಚೇತನರ ಸವರ್ೆ ಮಾಡಿ ಮಾಹಿತಿ ನೀಡುವಂತೆ ಆಯಾ ತಾಲೂಕಿನ ತಾ.ಪಂ ಕಾರ್ಯನಿವರ್ಾಹಕ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಆದರೆ ಬಾಗಲಕೋಟೆ ಮತ್ತು ಹುನಗುಂದ ತಾಲೂಕು ಹೊರತುಪಡಿಸಿ ಉಳಿದ ತಾಲೂಕಿನ ಮಾಹಿತಿ ನೀಡದನ್ನು ಕಂಡ ಜಿಲ್ಲಾಧಿಕಾರಿಗಳು ಶೀಘ್ರವಾಗಿ ಮಾಹಿತಿ ನೀಡಲು ಸೂಚಿಸಿದರು. ಅಲ್ಲದೇ ಜಿಲ್ಲೆಯಲ್ಲಿ ಈಗಾಗಲೇ 6 ರಿಂದ 18 ವರ್ಷದೊಳಗಿನ 844 ಮಕ್ಕಳ ಪೈಕಿ 84 ಮಕ್ಕಳನ್ನು ಮರಳಿ ಶಾಲೆಗೆ ಕರೆತರಲಾಗಿರುವ ವಿಷಯವನ್ನು ಸಭೆಗೆ ತಿಳಿಸಿದಾಗ ಶಾಲೆ ಬಿಟ್ಟ ಪ್ರತಿಯೊಂದು ಮಗು ಮರಳ ಶಾಲೆಗೆ ದಾಖಲಾಗಬೇಕು. ಪ್ರತಿಯೊಬ್ಬ ಬಿಇಓ ಪ್ರತಿನಿದ ಒಂದು ಮಗುವನ್ನಾದರು ಶಾಲೆಗೆ ದಾಖಲಿಸುವ ಕೆಲಸವಾಗಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ವಿವಿಧ ಸ್ಥಳೀಯ ಸಂಸ್ಥೆಗಳು ಸಂಗ್ರಹಿಸಲಾದ ಹಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ ವರ್ಗಕ್ಕೆ ಮೀಸಲಿರಿಸಲಾದ ಹಣವನ್ನು ಸಂಪೂರ್ಣ ಖಚರ್ು ಆಗಬೇಕು. ವಿನಾಕಾರಣ ಸಬೂಬು ಹೇಳಬಾರದು. ಸಭೆಯಲ್ಲಿ ಕೇಳಿದ ಪ್ರಶ್ನೆಗೆ ಮಾತ್ರ ಸೂಕ್ತ ಉತ್ತರ ನೀಡಬೇಕು. ವಿನಾಕಾರಣ ಸಮಯ ಹಾಳು ಮಾಡಬಾರದು. ಕೆಲಸದಲ್ಲಿ ಬೇಜವಾಬ್ದಾರಿತ ತೋರಿದಲ್ಲಿ ಸೂಕ್ತ ಕ್ರಮಕೈಗೊಳ್ಳುವುದರ ಜೊತೆಗೆ ನಿಮ್ಮ ಕೇಸ್ ಸಹ ದಾಖಲಿಸಲು ಹಿಂಜರಿಯುವುದಿಲ್ಲವೆಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು. ಕೆಬಿಜಿಎನ್ಎಲ್ ರವರು ಮೀಸಲಿರಿಸಿದ ಅನುದಾನದಲ್ಲಿ ಬೋರವೆಲ್ ಕೊರೆಯಲು ಅವಕಾಶ ವಿರುವುದಾಗಿ ನಾಮನಿದರ್ೇಶಿತ ಸದಸ್ಯರಾದ ಶಂಭುಗೌಡ ಪಾಟೀಲ ಸಭೆಗೆ ತಿಳಿಸಿದಾಗ ಬೋರ್ವೆಲ್ ಕೊರೆದ ಬಗ್ಗೆ ಕೆಬಿಜಿಎನ್ಎಲ್ ಅವರಿಂದ ಸಂಪೂರ್ಣ ಮಾಹಿತಿ ಪಡೆಯುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಬಾದಾಮಿ ಪಟ್ಟಣದಲ್ಲಿ ವಾಲ್ಮೀಕಿ ಭವನ ನಿಮರ್ಾಣಕ್ಕಾಗಿ ಕಳೆದ 2 ವರ್ಷಗಳಿಂದ ಅನುದಾನ ಬಿಡುಗಡೆ ಮಾಡಿದರೂ ಸಹ ಕೆ.ಆರ್.ಆಯ್.ಡಿಎಲ್ನವರು ಕಾಮಗಾರಿ ಪ್ರಾರಂಭಿಸದಿರುವದನ್ನು ಕಂಡ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಕಾರ್ಯನಿವರ್ಾಹಕ ಅಧಿಕಾರಿಗಳ ಮೇಲೆ ನೋಟಿಸ್ ಜಾರಿ ಮಾಡಿ ಬಿಡುಗಡೆ ಮಾಡಿದ ಹಣವನ್ನು ವಾಪಸ್ ಪಡೆದು ಇನ್ನು ಮುಂದೆ ಕೆ.ಆರ್.ಐಡಿ.ಎಲ್ ನವರಿಗೆ ಯಾವದೇ ರೀತಿಯ ಕಾಮಗಾರಿಗಳನ್ನು ನೀಡದಂತೆ ಸೂಚಿಸಲಾಯಿತು. ನಿಮರ್ಿತಿ ಕೇಂದ್ರದಿಂದ ಒಟ್ಟು 40 ವಿವಿಧ ಭವನ ಹಾಗೂ ಸಮುದಾಯಗಳ ಕಾಮಗಾರಿಗಳನ್ನು ಪೂರ್ಣಗೊಳಿಸಿ ಇಲಾಖೆಗೆ ಹಸ್ತಾಂತರಿಸಿದರು ಇಲಾಖೆಯಿಂದ 2.13 ಕೋಟಿ ರೂ. ಬಾಕಿ ಉಳಿಸಿಕೊಂಡಿರುವುದಾಗಿ ನಿಮರ್ಿತಿ ಕೇಂದ್ರದ ಯೋಜನಾ ನಿದರ್ೇಶಕ ಶಂಕರಲಿಂಗ ಗೋಗಿ ಸಭೆಗೆ ತಿಳಿಸಿದಾಗಿ ಬಾಕಿ ಹಣ ನೀಡಲು ಕ್ರಮಕ್ಕಾಗಿ ಜಿಲ್ಲಾಧಿಕಾರಿಗಳು ಸೂಚಿಸಿದರು.
ಕಳೆದ ಸಾಲಿನಲ್ಲಿ ಮೀನುಗಾರಿಕೆ, ಅರಣ್ಯ, ಸಹಕಾರ, ಸಣ್ಣ ನೀರಾವರಿ, ಲೋಕೋಪಯೋಗಿ ಇಲಾಖೆ, ಭಾರಿ ನೀರಾವರಿ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಇಂಧನ ಇಲಾಖೆಗಳು ನೂರಕ್ಕೆ ನೂರರಷ್ಟು ಪ್ರಗತಿ ಸಾಧಿಸಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು ಕಡಿಮೆ ಪ್ರಗತಿ ಸಾಧಿಸಿದ ಆರೋಗ್ಯ, ನಗರಾಭಿವೃದ್ದಿ, ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳ ಕಾರ್ಯವೈಖರಿಯಿಂದ ಅಸಮಾದಾನಗೊಂಡರು. ಅಧಿಕಾರಿಗಳು ಮುತುವಜರ್ಿ ವಹಿಸಿ ಕಾಳಜಿ ವಹಿಸಿ ಹಾಗೂ ಕಾನೂನಾತ್ಮಕವಾಗಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನಗರಾಭಿವೃದ್ದಿ ಇಲಾಖೆಯಲ್ಲಿ ವಿವಿಧ ಯೋಜನೆಗಳಿಗೆ ಸಂಪೂರ್ಣ ಖಚರ್ು ಮಾಡಿ ಉಳಿದ ಸೇವಿಂಗ ಹಣಕ್ಕೆ ಇತರೆ ಕಾರ್ಯಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡುವಂತೆ ನಗರಾಭಿವೃಧ್ದಿ ಇಲಾಖೆಯ ಮೇಲಾಧಿಕಾರಿಗಳಿಗೆ ಪತ್ರ ಬರೆಯುವಂತೆ ನಗರಾಭಿವೃದ್ದಿ ಕೋಶದ ಯೋಜನಾ ನಿದರ್ೇಶಕರಿಗೆ ತಿಳಿಸಿದರು. ಜಿಲ್ಲೆಯಲ್ಲಿ ಒಟ್ಟು ಎಸ್ಸಿಪಿ ಯೋಜನೆಯಡಿ 97.12 ಕೋಟಿ ರೂ. ಖಚರ್ು ಮಾಡುವ ಮೂಲಕ ಶೇ.95.23 ರಷ್ಟು ಪ್ರಗತಿ ಸಾಧಿಸಿದರೆ, ಟಿಎಸ್ಪಿ ಯೋಜನೆಯಡಿ 37.13 ಕೋಟಿ ರೂ. ವೆಚ್ಚ ಮಾಡಿ ಶೇ.94.50 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಸಭೆಗೆ ತಿಳಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ ಖರೆ, ಅಪರ ಜಿಲ್ಲಾಧಿಕಾರಿ ದುಗರ್ೇಶ ರುದ್ರಾಕ್ಷಿ, ಜಿ.ಪಂ ಉಪಕಾರ್ಯದಶರ್ಿ ಎಸ್.ಎಸ್.ಹಿರೇಮಠ, ಉಪವಿಭಾಗಾಧಿಕಾರಿ ಎಚ್.ಜಯಾ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ನಾಮನಿದರ್ೇಶಿತ ಸದಸ್ಯರು ಹಾಗೂ ವಿವಿಧ ನಾಮನಿದರ್ೇಶಿತ ಸಂಸ್ಥೇಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 