ಜಮಖಂಡಿ

ಜಮಖಂಡಿ ವಿಶ್ವವಿದ್ಯಾಲಯ ಆದೇಶದ ಹಿನ್ನೆಲೆ: ರಾಜ್ಯ ಸರ್ಕಾರಕ್ಕೆ ಅಭಿನಂದನೆ

ಜಮಖಂಡಿ ವಿಶ್ವವಿದ್ಯಾಲಯ ಆದೇಶದ ಹಿನ್ನೆಲೆ: ರಾಜ್ಯ ಸರ್ಕಾರಕ್ಕೆ ಅಭಿನಂದನೆ

ಲೋಕದರ್ಶನ ವರದಿ,

ಜಮಖಂಡಿ 05: ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ  ಒಕ್ಕೂಟ ಹಾಗೂ ಜಮಖಂಡಿ ವಿಶ್ವವಿದ್ಯಾಲಯ ಹೋರಾಟ ಮತ್ತು ಅಭಿವೃದ್ಧಿ ಸಮಿತಿ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಲಾಯಿತು. ವಿದ್ಯಾರ್ಥಿ  ಒಕ್ಕೂಟದ ಜಿಲ್ಲಾಧ್ಯಕ್ಷ ವಿಜಯ ತಿಪ್ಪರಡ್ಡಿ, ವಿದ್ಯಾರ್ಥಿ  ಒಕ್ಕೂಟದ ಸದಸ್ಯ ಮರಳಿ ವಿಶ್ವವಿದ್ಯಾಲಯದ ಆದೇಶದ ಹಿನ್ನೆಲೆಯಲ್ಲಿ ಎ.ಜಿ.ದೇಸಾಯಿ ವೃತದಲ್ಲಿ ಪಟಾಕಿ ಸಿಡಿಸುವ ಮೂಲಕ ಸಂತೋಷ ವ್ಯಕ್ತಪಡಿಸಿದರು.

 ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಜಯ ತಿಪ್ಪರಡ್ಡಿ,ಈ ಭಾಗಕ್ಕೆ ವಿಶ್ವವಿದ್ಯಾಲಯ ಮರಳಿ ಸಿಗಬೇಕಾದರೆ ಶಾಸಕರ, ಮಾಜಿ ಶಾಸಕರ ನಾಯಕರ ಹೋರಾಟದಿಂದ ಹಾಗೂ ಕಾರ್ಯಕರ್ತರ ಹೋರಾಟದಿಂದ ವಿಶ್ವವಿದ್ಯಾಲಯ ಆದೇಶವಾಗಿದೆ ಎಂದರು.

ಜಮಖಂಡಿ ವಿಶ್ವವಿದ್ಯಾಲಯ ಹೋರಾಟ ಮತ್ತು ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಂದೀಪ ಬೆಳಗಲಿ ಮಾತನಾಡಿ, ವಿಶ್ವವಿದ್ಯಾಲಯ ಆದೇಶವನ್ನು ಮರಳಿ ಜಮಖಂಡಿಗೆ ಹೊರಡಿಸಿದ್ದು, ಸಂತೋಷದ ಸಂಗತಿ. ಕೂಡಲೇ ಸರ್ಕಾರ ವಿಶ್ವವಿದ್ಯಾಲಯಕ್ಕೆ ಬೇಕಾಗುವ ಸಕಲ ಸೌಲಭ್ಯಗಳನ್ನು ಒದಗಿಸಬೇಕು. ಈ ಶೈಕ್ಷಣಿಕ ವರ್ಷದಿಂದ ವರ್ಗಗಳು ಪ್ರಾರಂಭಿಸುವಂತೆ ಸರ್ಕಾರ ನೋಡಿಕೊಳ್ಳಬೇಕೆಂದು ಒತ್ತಾಯಿಸಿದರು. ಶಂಭು ಪಡಸಾಲಿ, ರಾಮಣ್ಣ ಕಾಂಬಳೆ, ಆನಂದ ಕಾಂಬಳೆ,ಮಂಜುನಾಥ ಕಣಬೂರಮಠ, ಸಿದ್ದಾರ್ಥ ತಳಕೇರಿ ಗೋಷ್ಠಿಯಲ್ಲಿದ್ದರು. 


ಸುದ್ದಿ ಓದಿ