ಕುಕನೂರ್

ಸರ್ಕಾರಿ ಶಾಲೆಯ ಶಿಕ್ಷಕನ ಉಚಿತ ಕೊಡುಗೆ ಆದರ್ಶವಾದದು

ಸರ್ಕಾರಿ ಶಾಲೆಯ ಶಿಕ್ಷಕನ ಉಚಿತ ಕೊಡುಗೆ ಆದರ್ಶವಾದದು

ಲೋಕದರ್ಶನ ವರದಿ

ಕುಕನೂರು 08: ತಾಲೂಕ ಮಂಗಳೂರು ಗ್ರಾಮದ ಸಿದ್ದಲಿಂಗ ನಗರದ ಸರ್ಕಾರಿ ಕಿರಿಯ  ಪ್ರಾಥಮಿಕ ಶಾಲೆಯ ಶಿಕ್ಷಕರಾದ ಹನುಮಂತಪ್ಪ ಎನ್ ಉಪ್ಪಾರ್ ತಮ್ಮ ಸ್ವಂತ ಹಣದಿಂದ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಬ್ಯಾಗ, ನೋಟ್ ಬುಕ್, ಫೈಲ್, ಪೆನ್ಸಿಲ್, ಇತ್ಯಾದಿ ಕಲಿಕಾ ಸಾಮಗ್ರಿಗಳನ್ನು ವಿತರಿಸಿದರು. ಈ ಒಂದು ಕಾರ್ಯಕ್ರಮದಲ್ಲಿ ಮಂಗಳೂರು ವಲಯದ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ  ರವಿ ಡಿ ಮಳಿಗಿ ಯವರು ಪ್ರಾಸ್ತಾವಿಕ ಮಾತುಗಳನ್ನು ಆಡುತ್ತಾ  ಸರ್ಕಾರಿ ಶಾಲೆಯ ಬಲವರ್ಧನೆಗೆ ಇಂತಹ ಉತ್ತೇಜಕಗಳು ಪ್ರೇರಕವಾಗುತ್ತವೆ. ಮಕ್ಕಳ ಕಲಿಕೆಗೆ ಸ್ಪೂರ್ತಿಯಾಗುತ್ತವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

      ಮಂಗಳೂರು ವಲಯದ ಬಿ ಆರ್ ಸಿ ನೋಡಲ್ ಅಧಿಕಾರಿಗಳಾದ ಶಿವಪ್ಪ ಉಪ್ಪಾರ್ ಅವರು ಮಾತನಾಡುತ್ತಾ ವಿದ್ಯಾರ್ಥಿಗಳ ದಾಖಲಾತಿ ಮತ್ತು ಹಾಜರಾತಿ ಹೆಚ್ಚಳಕ್ಕೆ ಈ ರೀತಿಯ  ಕೊಡುಗೆ ಇಂದು ಅವಶ್ಯವಾಗಿದೆ. ಶಿಕ್ಷಕರ ಈ ಒಂದು ಸೇವೆ ಮಾದರಿಯವಾದದ್ದು ಎಂದು ಹರ್ಷ ವ್ಯಕ್ತಪಡಿಸಿದರು. ಮಂಗಳೂರು ಕೆಪಿಎಸ್ ಶಾಲೆಯ ಭೌತಿಕ ಸಮಿತಿಯ ಅಧ್ಯಕ್ಷರಾದ ಮಾಬುಸಾಬ್ ಗೋಡೆಕಾರ್ ಅವರು ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಿಸಿ ಮಾತನಾಡುತ್ತ ಇಂಥ ಅನುಕರಣೀಯ  ಮತ್ತು ಆದರ್ಶ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಂದ ಶಾಲೆಯ ಸರ್ವತೋಮುಖ ಅಭಿವೃದ್ಧಿ ಆಗುವುದರಲ್ಲಿ ಸಂದೇಹವಿಲ್ಲ ಎಂದರು. ಮಾರುತಿ ಹಾದಿಮನಿ ಅವರು ಮಾತನಾಡುತ್ತಾ ಶಿಕ್ಷಕರು ಪ್ರತಿಯೊಂದು ಮಗುವಿಗೆ  ಆದ್ಯತೆ ನೀಡುವುದರ ಜೊತೆಗೆ ಎಲ್ಲರ ಕಲಿಕೆಗೆ ಉತ್ತೇಜನ ನೀಡುತ್ತಿರುವದು ಸಂತಸ ಸಂಗತಿ ಎಂದರು.

      ಕುಕುನೂರು ಕೆ ಎಲ್ ಇ ಕಾಲೇಜಿನ ಉಪನ್ಯಾಸಕ ಶರಣಪ್ಪ ಉಮಚಗಿ  ಬ್ಯಾಗ್ ವಿತರಿಸಿ ಮಾತನಾಡುತ್ತಾ  ಪ್ರತಿಯೊಬ್ಬ ಶಿಕ್ಷಕರು ಇಂಥ ಮಾದರಿಯ ಆದರ್ಶ ಕಾರ್ಯಗಳನ್ನು ಕೈಗೊಂಡರೆ ಸರಕಾರಿ ಶಾಲೆಗಳು ಉನ್ನತ ಮಟ್ಟಕ್ಕೆ ಬೆಳೆಯುತ್ತವೆ ಹನುಮಂತಪ್ಪ ಉಪ್ಪಾರ್ ಶಿಕ್ಷಕರ  ನಿಸ್ವಾರ್ಥ ಸೇವೆ ನಮ್ಮ ಗ್ರಾಮಕ್ಕೆ ಮಾದರಿಯಾಗಿದೆ ಎಂದರು. ಈ ಒಂದು ವಿಶೇಷ ಕಾರ್ಯಕ್ರಮಕ್ಕೆ ಮಂಗಳೂರು  ಗ್ರಾಮ ಪಂಚಾಯತಿಯ ಅಧ್ಯಕ್ಷ ಸಕ್ರಪ್ಪ ಚಿನ್ನೂರ್, ಉಪಾಧ್ಯಕ್ಷೆ ಅನ್ನಪೂರ್ಣ ಸುರೇಶ್ ಮ್ಯಾಗಳೇಶಿ ಹಾಗೂ ಗ್ರಾಮ ಪಂಚಾಯತಿ ಸದಸ್ಯ ಮಂಜುನಾಥ್ ಆರೇರ್, ಯಲಬುರ್ಗಾ ತಾಲೂಕ ಶಿಕ್ಷಕರ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷರಾದ ಮಾರುತಿ ಹಾದಿಮನಿ, ಯುವ ಸಾಹಿತಿಗಳಾದ ವಿರೂಪಾಕ್ಷಪ್ಪ ಎಲಿಗಾರ್ ಅನಿಲಕುಮಾರ ನಿಂಗಾಪುರ ಮತ್ತು ಸರಕಾರಿ ಉರ್ದು  ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಕೊಟ್ರಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಬ್ಯಾಗ್ ಫೈಲ್ ಇತ್ಯಾದಿಗಳನ್ನು ವಿತರಿಸಿ ಪ್ರೋತ್ಸಾಹ ವ್ಯಕ್ತಪಡಿಸಿದರು.

     ಇದೇ ಸಂದರ್ಭದಲ್ಲಿ ಪಕ್ಕದ ಶಾಲೆ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೂ ಕೂಡ ಹನುಮಂತಪ್ಪ ಉಪ್ಪಾರ್ ಶಿಕ್ಷಕರು ಉಚಿತವಾಗಿ ನೋಟ್ ಬುಕ್ ಮತ್ತು ಪೆನ್ ಪೆನ್ಸಿಲ್ ಗಳನ್ನು ವಿತರಿಸಿದರು. ಈ ಒಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಮಂಗಳೇಶ್ ಯತ್ನಟ್ಟಿಯವರು ವಹಿಸಿದ್ದರು. ಪ್ರಾರಂಭದಲ್ಲಿ ಪ್ರಾರ್ಥನಾ ಗೀತೆಯನ್ನು ಮಾರುತಿ ಹಾದಿಮನಿ ಹಾಡಿದರು ಕಾರ್ಯಕ್ರಮಕ್ಕೆ ಸರ್ವರನ್ನ ಹನುಮಂತಪ್ಪ ಶಿಕ್ಷಕರು ಸ್ವಾಗತಿಸಿದರು ಕಾರ್ಯಕ್ರಮದ ನಿರೂಪಣೆಯನ್ನು ಮಾಬುಸಾಬ್ ಗೋಡೆಕರ್ ಮತ್ತು ಮಾರುತಿ ಹಾದಿಮನಿ ಅವರು ನಿರ್ವಹಿಸಿದರೆ ಕೊನೆಯಲ್ಲಿ ಅನಿಲ್ ಕುಮಾರ್ ನಿಂಗಾಪೂರ ವಂದಿಸಿದರು 

ಸುದ್ದಿ ಓದಿ