ಉತ್ತೂರ ಪಿಕೆಪಿಎಸ್ಗೆ 20.77 ಲಕ್ಷ ರೂ ಲಾಭ
ಲೋಕದರ್ಶನ ವರದಿ
ಮುಧೋಳ 26: ಸಹಕಾರ ಧ್ಯೇಯದಿಂದ ಕೃಷಿಪತ್ತಿನ ಸಹಕಾರ ಸಂಘ ಕಾರ್ಯ ನಿರ್ವಹಿಸುತ್ತಿವೆ. ಕೊಟ್ಟು ತೆಗೆದುಕೊಳ್ಳುವ ಪ್ರಕ್ರಿಯೆ ಸರಿಯಾಗಿ ನಡೆದಾಗ ಮಾತ್ರ ಸಹಕಾರ ತತ್ವ ಉಳಿಯುತ್ತದೆ ಎಂದು ಉತ್ತೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವೆಂಕಣಗೌಡ ಪಾಟೀಲ ತಿಳಿಸಿದರು.
ಶನಿವಾರ ಸ್ಥಳೀಯ ಹನುಮಾನ ದೇವಸ್ಥಾನದ ಸಭಾ ಭವನ ದಲ್ಲಿ ನಡೆದ ಸಂಘದ 77ನೇ ವಾರ್ಷಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಈ ಕಾರಣಕ್ಕಾಗಿ ಉತ್ತೂರ ಪಿಕೆಪಿಎಸ್ ಈ ಸಲ 22.77ಲಕ್ಷ ರೂ ಲಾಭ ಗಳಿಸಿದೆ,ಸಂಘವು ಉತ್ತಮವಾಗಿ ಕಾರ್ಯನಿರ್ವಹಿಸಿ ಪ್ರತಿವμರ್À ಹೆಚ್ಚು ಲಾಭಗಳಿಸುತ್ತ ಸಾಗುತ್ತಿದೆ. ಇದಕ್ಕೆ ರೈತರು, ಠೇವಣಿದಾರರು, ಗ್ರಾಹಕರ ವಿಶ್ವಾಸ ಹಾಗೂ ಸಿಬ್ಬಂದಿಯ ಪ್ರಾಮಾಣಿಕ ಸೇವೆ ಕಾರಣವಾಗಿವೆ ಎಂದರು. μÉೀರುದಾರರಿಗೆ ಡಿವಿಡೆಂಡ್ ವಿತರಿಸಲಾಗುತ್ತದೆ.
ಮುಖ್ಯ ಕಾರ್ಯನಿರ್ವಾಹಕ ವ್ಯವಸ್ಥಾಪಕ ಸತೀಶ ಮಳಲಿ ಮಾತನಾಡಿ, ಸಂಘವು 135.95 ಲಕ್ಷ μÉೀರು ಬಂಡವಾಳ ಹೊಂದಿದೆ,154.45 ನಿಧಿಗಳನ್ನು ಹಾಗೂ 619.31 ಲಕ್ಷ ಠೇವಣಿಗಳನ್ನು ಹೊಂದಿದ್ದು,ಒಟ್ಟು 1045.39 ಲಕ್ಷ ಸಾಲ ವಿತರಣೆ ಮಾಡಿದ್ದು 2019-20ನೇ ಸಾಲಿನಲ್ಲಿ ಒಟ್ಟು 20.77 ಲಕ್ಷ ನಿವ್ಹಳ ಲಾಭ ಗಳಿಸಿದೆ ಸಂಘದ ಮೂಲಕ ಸರ್ಕಾರವು ರೈತರಿಗೆ ಅಲ್ಪಾವಧಿ ಬೆಳೆ ಸಾಲ ಕೊಡುತ್ತಿದೆ. ಸಾಲ ಪಡೆದ ರೈತರು ಕೃಷಿ ಉದ್ಧೇಶಕ್ಕೆ ಬಳಸಿಕೊಂಡು ಅದನ್ನು ವμರ್Àದೊಳಗೆ ಮರುವಾತಿಸಿ ಮತ್ತೆ ಸಾಲ ಪಡೆಯಬೇಕು. ಈ ರೀತಿ ಮಾಡುವುದರಿಂದ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ದೊರೆಯುತ್ತದೆ ಎಂದರು.
ಸಹಕಾರಿ ಸಂಘದ ಮುಖ್ಯ ಕಾರ್ಯ ನಿರ್ವಾಹಕ ಸತೀಶ ಮಳಲಿ ಸಂಘದ ವಾರ್ಷಿಕ ವರದಿಯನ್ನು ಸಭೆಯಲ್ಲಿ ಮಂಡಿಸಿದರು.ಬಾಬು ಬರಗಿ,ಮಹಾನಿಂಗಪ್ಪ ಕುಂಬಾರ, ಸಂಘದ ಉಪಾಧ್ಯಕ್ಷ ದುರ್ಗಪ್ಪ ಗುರಕೇರ ಬಾಬು,ಬ್ಯಾಳಿ,ಹನಮಂತ ಮಿರ್ಜಿ,ಸುರೇಶ ಕುಂಬಾರ,ರಾಮಪ್ಪ ಈರಪ್ಪನವರ,ಲಕ್ಷ್ಮೀ ಮಳಲಿ,ಕಾಮಣ್ಣ ಕೋಚಿ,ಈರಯ್ಯ ಮಠಪತಿ,ಕಾಮಣ್ಣ ಕುರಿ,ಮವಿಮಲಾ ಪಾಟೀಲ.ಟಿ.ಎಸ್.ನಾಯಿಕ,ಅರವಿಂದ ಚಿನಿವಾಲ,ಮಹಾದೇವ ಬಿಳಿ ಕುರಿ ಸೇರಿದಂತೆ ಎಲ್ಲಾ ನಿರ್ದೇಶಕರು ಹಾಗೂ ಸೊಸೈಟಿಯ ಸಿಬ್ಬಂದಿಯಾದ ಗೋಪಾಲ ಮಳಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಉತ್ತೂರ ಸರ್ಕಾರಿ ಪ್ರೌಢ ಶಾಲೆಯ ಕು.ಶಾರದಾ ಪಾಟೀಲ,ಶ್ರೀಶೈಲ ಕುಂಬಾರ, ಸಾಕ್ಷಿ ಹಡಗಿನಾಳ ಕ್ರಮವಾಗಿ ಪ್ರಥಮ,ದ್ವಿತೀಯ,ತೃತೀಯ ಸ್ಥಾನಗಳಿಗೆ 1001,701,501 ರೂಗಳ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಿ ವಿದ್ಯಾರ್ಥಿಗಳಿಗೆ ಸನ್ಮಾನಿಸಿದರು. ಜಿ.ಎಂ.ಮಳಲಿ ನಿರೂಪಿಸಿ ವಂದಿಸಿದರು
ಪೋಟೋ;ಎಮ್ಡಿಎಲ್-26-1
ಉತ್ತೂರ ಪಿಕೆಪಿಎಸ್ ವಾರ್ಷಿಕ ಸಭೆಯಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಉತ್ತೂರ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಿದ ಸನ್ಮಾನಿಸಿದರು. ಪಿಕೆಪಿಎಸ್ ಅಧ್ಯಕ್ಷ ವೆಂಕಣಗೌಡ ಪಾಟೀಲ,ಉಪಾಧ್ಯಕ್ಷ ದುರ್ಗಪ್ಪ ಗುರಕೇರ,ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸತೀಶ ಮಳಲಿ, ಅರವಿಂದ ಚಿನಿವಾಲ ಇದ್ದರು.