‘ಕೆಟ್ಟ ಹವ್ಯಾಸಗಳು ದುಶ್ಚಟಗಳಾಗಿ ಪರಿವರ್ತನೆಗೊಳ್ಳುತ್ತವೆ’

‘ಕೆಟ್ಟ ಹವ್ಯಾಸಗಳು ದುಶ್ಚಟಗಳಾಗಿ ಪರಿವರ್ತನೆಗೊಳ್ಳುತ್ತವೆ’ 'Bad habits turn into addictions'

ಲೋಕದರ್ಶನ ವರದಿ 

ಉಗರಗೋಳ 02: ಮಕ್ಕಳಲ್ಲಿ ಬಾಲ್ಯದಲ್ಲಿಯೇ ಪ್ರಾರಂಭವಾಗುವ ಕೆಟ್ಟ ಹವ್ಯಾಸಗಳು, ಬೆಳೆಯುತ್ತ, ಬೆಳೆಯುತ್ತ ದುಶ್ಚಟಗಳಾಗಿ ಪರಿವರ್ತನೆಗೊಂಡು ಮುಂದೆ ಕುಟುಂಬದ ಅವನತಿಗೆ ಕಾರಣವಾಗಬಹುದು ಎಂದು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ಧೇಶಕ ಎಚ್ ಆರ ಲವಕುಮಾರ ಹೇಳಿದರು. 

ಸವದತ್ತಿ ತಾಲೂಕಿನ ಚಿಕ್ಕುಂಬಿ ಗ್ರಾಮದ ಶ್ರೀ ಬನ್ನಿಮಹಾಂಕಾಳಿ ದೇವಸ್ಥಾನದಲ್ಲಿ ಸೋಮವಾರ ರಂದು ವ್ಯಸನ ಮುಕ್ತಸಮಾಜ ನಿರ್ಮಾಣಕ್ಕಾಗಿ ‘’ವಿಶ್ವ ತಂಬಾಕು ವಿರೋಧಿ ದಿನ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಮಕ್ಕಳಲ್ಲಿ ಸಂಸ್ಕಾರ, ಸಂಸ್ಕ್ರುತಿ ಹಾಗೂ ಒಳ್ಳೆಯ ಹವ್ಯಾಸಗಳನ್ನು ಬೆಳೆಸಿ, ಕಲಿಸಿ ಕೊಡುವಲ್ಲಿ ಹೆತ್ತವರ ಪಾತ್ರ ಮುಖ್ಯವಾಗಿರುತ್ತದೆ ಎಂದರು. 

ಡಾ, ಗೀತಾ ಸೋಡಿ ಮಾತನಾಡಿ. ತಂಬಾಕು ಸೇವನೆಯಿಂದ ಆರೋಗ್ಯದಲ್ಲಿ ಆಗುವ ದುಷ್ಟರಿಣಾಮಗಳ ಕುರಿತು ಸಮಗ್ರ ಮಾಹಿತಿ ನೀಡಿದ ಅವರು ತಂದೆ, ತಾಯಿಗಳು ಮಕ್ಕಳಿಗಾಗಿ ಮಾಡುವ ತ್ಯಾಗಕ್ಕೆ. ಪ್ರತಿಯಾಗಿ ಮಕ್ಕಳು ಸಹ ದುಶ್ಚಟಗಳ ದಾಸರಾಗದೆ ವಿದ್ಯೆ ಕಲಿತು ಸಮಾಜದ ಕಣ್ಣುಗಳಾಗಬೇಕೆಂದರು. 

ತಾಲೂಕಾ ಯೋಜನಾಧಿಕಾರಿ ಸುಭ್ರರಾಯ್ ನಾಯಕ್, ಶಿವಲೀಲಾ ಒಂಟಮೂರಿ,  ವನಜಾಕ್ಷಿ ಸಾಲಿಮಠ, ಮಂಜುಳಾ ಹಿರೇಮಠ, ಪವಿತ್ರಾ ಬಡ್ಲಿ, ಮಮತಾಜ್ ಅತ್ತಾರ್, ಶಕುಂತಲಾ ಅಬ್ಬಿಗೇರಿ, ಸಾವಕ್ಕ ಬಾರ್ಕಿ ಹಾಗೂ ಒಕ್ಕೂಟದ ಪದಾಧಿಕಾರಿಗಳು ಮತ್ತು ಸಹಾಯ ಸಂಘದ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.