ವಿದ್ಯಾನಂದ ಗುರುಕುಲಕ್ಕೆ “ಶತಮಾನದ ಸಂಭ್ರಮ”
ಕುಕನೂರ 31: ಪಟ್ಟಣದ ರಾಷ್ಟ್ರ ಪ್ರಶಸ್ತಿ ವಿಜೇತ ವಿದ್ಯಾನಂದ ಗುರುಕುಲ ಸಂಸ್ಥೆಗೆ ನೂರರ ಸಂಭ್ರಮದ ಪ್ರಯುಕ್ತ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಆಚಾರ್ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಫಾಪನೆ ನೇರವೇರಿಸಿ ಮಾತನಾಡಿದ ಅವರು
ದೇಶದ ಸ್ವಾತ್ರಂತ್ಯ ಪೂರ್ವದಲ್ಲಿ ಸ್ಥಾಪಿತವಾದ ವಿದ್ಯಾನಂದ ಗುರುಕುಲ ಸಂಸ್ಥೆ ದೇಶಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದೆ, ದೇಶ ವಿದೇಶಗಳಲ್ಲಿ ಹಲವು ಉನ್ನತ ಸ್ತರದ ಹುದ್ದೆಗಳಿಂದ ಇಡಿದು ಎಲ್ಲಾ ಹಂತದ ಹುದ್ದೆಗಳಲ್ಲಿಯೂ ಇಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ಕಾರ್ಯನಿರ್ವಸುತ್ತಿದ್ದಾರೆ, ನಮ್ಮ ಜಿಲ್ಲೆಯ ನಮ್ಮ ತಾಲೂಕಿನ ಕಿರ್ತಿಯನ್ನು ವಿದೇಶಕ್ಕೆ ಕೊಂಡ್ಯೂಯದ ಶ್ರೇಯಸ್ಸು ವಿದ್ಯಾನಂದ ಗುರುಕುಲ ಸಂಸ್ಥೆಗೆ ಸಲ್ಲುತ್ತದೆ ಎಂದರು.
ನಂತರ ಸಂಸದ ಕರಡಿ ಸಂಗಣ್ಣ ಮಾತನಾಡಿ ವಿದ್ಯಾನಂದ ಗುರುಕುಲ ಸಂಸ್ಥೆಯನ್ನು ಕರ್ನಾಟಕದ ಡೈಮಂಡ್ ಎಂದರೆ ತಪ್ಪಗಾಲಾರದು, ಶಿಕ್ಷಣವನ್ನು ವ್ಯಾಪಾರೀಕರಣ ಮಾಡದೇ ನೂರು ವರ್ಷಗಳ ಕಾಲ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಯನ್ನು ನೀಡಿದೆ, ಇಂತಹ ಸಂಭ್ರಮದಲ್ಲಿ ಸಂಸ್ಥಯೆ ಹುಟ್ಟಿಗೆ ಕಾರಣರಾದ ರಾ.ಬೀ.ದೇಸಾಯಿಯವರನ್ನು ಒಳಗೊಂಡಂತೆ ಎಲ್ಲಾ ಮಹನೀಯರನ್ನ ಸ್ಮರೀಸಬೇಕು, ಇಂತಹ ಶಿಕ್ಷಣ ಸಂಸ್ಥೆಯಲ್ಲಿ ಮೆಡಿಕಲ್,ಇಂಜಿನಿಯರ್ ಕಾಲೇಜ ಸೇರಿದಂತೆ, ದೊರೆಯವಂತಾಗಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಮುಖಂಡರಾದ ಸಿ.ವಿ.ಚಂದ್ರಶೇಖರ್, ಸಂಸ್ಥೆಯ ಆಡಳಿತಾಧಿಕಾರಿ ಶರಣಪ್ಪ ಹೊಸಮನಿ, ಯಂಕಣ್ಣ ಯರಾಶಿ,ಶಫಿಸಾಬ ಗುಡಿಹಿಂದಲ,ಸಿ.ಎ ಜವಾಹರಲಾಲ ಜೈನ್,ಪ್ರಥಮ ದರ್ಜೆ ಗುತ್ತಿಗೆದಾರ ವೀರ್ಪ ಬಿಸನಳ್ಳಿ, ರಾಮಣ್ಣ ಬಜೇಂತ್ರಿ,ಹಮಂತಗೌಡ ಚಂಡೂರ, ನಿವೃತ್ತ ಶಿಕ್ಷಕ ಚನ್ನಬಸಪ್ಪ ತಳವಾರ, ಇನ್ನಿತರರು ಇದ್ದರು.