‘ವ್ಯಕ್ತಿಗಾಗಿ ಸಮಾಜ’ ‘ಸಮಾಜಕ್ಕಾಗಿ ವ್ಯಕಿ’್ತ ಎಂಬುವುದು ಸಹಕಾರಿ ತತ್ವವಾಗಿದೆ
‘Society for the individual’ and ‘Individual for society’ is the cooperative principle.
ಲೋಕದರ್ಶನ ವರದಿ
ಧಾರವಾಡ 02: ಭಾರತದಲ್ಲಿಯೇ ಪ್ರಥಮ ಸಹಕಾರಿ ಸಂಘವು ಅವಿಭಜಿತ ಧಾರವಾಡ ಜಿಲ್ಲೆಯ ಕಣಗಿನಹಾಳದಲ್ಲಿ ರೈತನ ಪತ್ತಿನ ಸಹಕಾರಿ ಸಂಘದ ಹೆಸರಿನಿಂದ 1905 ರಲ್ಲಿ ಆರಂಭವಾಯಿತು. ಹೀಗಾಗಿ ಅವಿಭಜಿತ ಧಾರವಾಡ ಜಿಲ್ಲೆಯನ್ನು ಸಹಕಾರಿ ತೊಟ್ಟಿಲು ಎಂದು ಕರೆಯುತ್ತಾರೆ. ಇದು ಕರ್ನಾಟಕಕ್ಕೆ ಹೆಮ್ಮೆ ಹಾಗೂ ಅಭಿಮಾನ ಪಡುವ ಸಂಗತಿಯಾಗಿದೆ ಎಂದು ಧಾರವಾಡ ಕೆ.ಎಂ.ಎಫ್. ಅಧ್ಯಕ್ಷ ಶಂಕರ ಮುಗದ ಹೇಳಿದರು.
ಸಾರ್ವಜನಿಕರ ಸಹಭಾಗಿತ್ವ ಇದ್ದಾಗ ಮಾತ್ರ ಸಹಕಾರಿ ಕ್ಷೇತ್ರವು ಉತ್ತರೋತ್ತರ ಅಭಿವೃದ್ಧಿ ಹೊಂದಲು ಸಾಧ್ಯ. ‘ವ್ಯಕ್ತಿಗಾಗಿ ಸಮಾಜ’ ‘ಸಮಾಜಕ್ಕಾಗಿ ವ್ಯಕಿ’್ತ ಎಂಬುವುದು ಸಹಕಾರಿ ತತ್ವವಾಗಿದೆ. ಸಹಕಾರಿ ತತ್ವದ ಮೇಲೆ ಪ್ರಾರಂಭವಾದ ಧಾರವಾಡದ ಹಾಲು ಒಕ್ಕೂಟ ನಾಲ್ಕು ದಶಕಗಳಲ್ಲಿ ಹಲವಾರು ಅಡೆತಡೆಗಳನ್ನು ಎದುರಿಸಿಯೂ ಲಾಭದತ್ತ ಮುನ್ನಡೆದಿದೆ. ಇದಕ್ಕೆ ಸಾರ್ವಜನಿಕರ ಸಹಭಾಗಿತ್ವವೆ ಕಾರಣವಾಗಿದೆ. ರೈತರ ಹಿತದೃಷ್ಟಿಯಿಂದ ಅವರಿಗೆ ಯಶಸ್ವಿನಿ ಯೋಜನೆಯನ್ನು ಕಲ್ಪಿಸಲಾಗಿದೆ.
ಸಹಕಾರಿ ಕ್ಷೇತ್ರದಲ್ಲಿ ಲಾಭ ಮುಖ್ಯವಲ್ಲ. ಗುಣಮಟ್ಟದ ಸೇವೆ ಮುಖ್ಯ. ಇಂದು ರಾಜ್ಯದಲ್ಲಿ ವಿವಿಧ ಪ್ರಕಾರದ ಸಹಕಾರಿ ಸಂಘಗಳಿದ್ದು ಅವೆಲ್ಲವೂ ಪರಸ್ಪರ ಸಹಕಾರ ತತ್ವದ ತಳಹದಿಯ ಮೇಲೆ ಕಾರ್ಯ ನಿರ್ವಹಿಸುತ್ತವೆ. ಈ ಕ್ಷೇತ್ರದಲ್ಲಿ ನೈತಿಕತೆ, ಪ್ರಾಮಾಣಿಕತೆ ಮುಖ್ಯ. ಹಳ್ಳಿಯ ರೈತರಿಂದ ಹಾಲು ಖರೀದಿಸಿ ಅವರ ಆರ್ಥಿಕ ಸಭಲತೆಗೆ ಕೆ.ಎಂ.ಎಫ್. ನಿರಂತರವಾಗಿ ಶ್ರಮಿಸುತ್ತಿದೆ ಎಂದು ಹೇಳಿದರು. ವೇದಿಕೆಯ ಮೇಲೆ ದತ್ತಿ ದಾನಿಗಳ ಪರವಾಗಿ ಕುಮಾರೇಶ್ವರ ಗೃಹ ನಿರ್ಮಾಣ ಅಭಿವೃದ್ಧಿ ಸಂಘದ ಅಧ್ಯಕ್ಷರಾದ ಬಿ.ಬಿ. ಭೂಮನಗೌಡರ ಉಪಸ್ಥಿತರಿದ್ದು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಶಿವಾನಂದ ಭಾವಿಕಟ್ಟಿ ಮಾತನಾಡಿ, ದಿ. ಎಸ್. ಎಂ. ಹೊಳೆಯಣ್ಣವರ ಸಹಕಾರಿ ಕ್ಷೇತ್ರದ ಮಹಾಮುತ್ಸದ್ದಿಗಳಾಗಿದ್ದರು. ಸಹಕಾರವೇ ಜೀವನ ಎಂದು ನಂಬಿದ ಅವರು ಜೀವನದುದ್ದಕ್ಕೂ ಸಹಕಾರಿ ತತ್ವವನ್ನು ಅಳವಡಿಸಿಕೊಂಡವರಾಗಿದ್ದರು. ನಾನು ಎನ್ನುವ ಬದಲು ನಾವು ಎಂಬುವುದು ಅವರ ಜೀವನದ ಧ್ಯೇಯವಾಗಿತ್ತು. ಇಲ್ಲಿಯ ಶ್ರೀ ಕುಮಾರೇಶ್ವರ ಗೃಹ ನಿರ್ಮಾಣ ಅಭಿವೃದ್ಧಿ ಸಂಘ ಹಾಗೂ ಶ್ರೀ ಮೃತ್ಯುಂಜಯ ಅರ್ಬನ್ ಕೋ-ಆಫ್ ಸೊಸೈಟಿಯನ್ನು ಕಟ್ಟಿ ಬೆಳೆಸುವಲ್ಲಿ ಅಪಾರ ಶ್ರಮವಹಿಸಿದವರು. ಸಹಕಾರಿ ಸಂಘಗಳಲ್ಲಿ ಪ್ರಾಮಾಣಿಕತೆ, ನಂಬಿಕೆ, ಕಾರ್ಯತತ್ಪರತೆ ಬಹಳ ಮುಖ್ಯ. ಸಹಕಾರಿ ಕ್ಷೇತ್ರ ರಾಜಕೀಯದಿಂದ ಮುಕ್ತವಾಗಿರಬೇಕು. ಇಲ್ಲಿ ಸಹಕಾರಿ ತತ್ವವೆ ಪ್ರಮುಖ್ಯವಾಗಬೇಕೇ ವಿನಃ ಸ್ವಜನಪಕ್ಷಪಾತವಿರಬಾರದು ಎಂದರು.
ವೀರಣ್ಣ ಒಡ್ಡೀನ ಸ್ವಾಗತಿಸಿದರು, ಸತೀಶ ತುರಮರಿ ಪ್ರಾಸ್ತಾವಿಕವಾಗಿ ಮಾತನಾಡಿದರು ಶಂಕರ ಕುಂಬಿ ನಿರೂಪಿಸಿದರು. ವಿಶ್ವೇಶ್ವರಿ ಹಿರೇಮಠ ವಂದಿಸಿದರು. ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ಡಾ. ಶೈಲಜಾ ಅಮರಶೆಟ್ಟಿ, ಡಾ. ಮಹೇಶ ಹೊರಕೇರಿ, ಡಾ. ಧನವಂತ ಹಾಜವಗೋಳ ಹಾಗೂ ಎಸ್. ಬಿ. ಹೂಗಾರ, ಎನ್. ಬಿ. ಗೋಲನ್ನವರ, ಎಲ್.ಸಿ. ಕಬ್ಬೂರ, ಜಗದೀಶ ತೋಟದ, ಮಡಿವಾಳಪ್ಪ ಸಿರಿಯಣ್ಣವರ, ಸಿ.ಜಿ. ಹಿರೇಮಠ, ಇಂಧುದರ ಹಿರೇಮಠ, ಸೇರಿದಂತೆ ಹೊಳೆಯಣ್ಣವರ ಅಭಿಮಾನಿಗಳು, ಪರಿವಾರದವರು ಮತ್ತಿತರರು ಭಾಗವಹಿಸಿದ್ದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 