ಕನ್ನಡ ಮಾಧ್ಯಮ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಕನ್ನಡ ಮಾಧ್ಯಮ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ World Environment Day celebrated in Kannada medium school

ಲೋಕದರ್ಶನ ವರದಿ 

ಮೂಡಲಗಿ 05 : ಪಟ್ಟಣದ ಲಕ್ಷ್ಮಣ ವೈ. ಅಡಿಹುಡಿಕನ್ನಡ ಮಾಧ್ಯಮ ಶಾಲೆಯಲ್ಲಿ "ವಿಶ್ವ ಪರಿಸರ ದಿನ"ವನ್ನುಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಸಿ ನೆಡುವ ಮೂಲಕ ಈ ಪರಿಸರ ದಿನದಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದರು.  “ಪ್ರಕೃತಿ ಪ್ರತಿಯೊಬ್ಬ ಮನುಷ್ಯನ ಅಗತ್ಯಗಳನ್ನು ಪೂರೈಸುತ್ತದೆಯೇ ಹೊರತು ಆತನ ದುರಾಸೆಯನ್ನಲ್ಲ” ಎಂದು ತಿಳಿಸಿದರು. ಅಲ್ಲದೆ, ಪ್ರಕೃತಿಯಲ್ಲಿರುವ ಹಸಿರು ಸಸ್ಯ ಸಮೂಹವು ಪ್ರತಿಯೊಂದು ಜೀವಕ್ಕೂರಕ್ಷಕವಾಗಿದ್ದು, ಪರಿಸರ ಸಂರಕ್ಷಿಸುವ ಮನೋಭಾವವನ್ನು ವಿದ್ಯಾರ್ಥಿಜೀವನದಲ್ಲಿಯೇ ಅಳವಡಿಸಿಕೊಳ್ಳುವುದು ಅತ್ಯಗತ್ಯ ಎಂದು ಶಿಕ್ಷಕಿ ರುಕ್ಮಿಣಿ ಶಿವಾಪುರ ಹೇಳಿದರು. 

ಶೋಭಾಕೆರ​‍್ಪನವರಅವರು ಪ್ರಾಸ್ತಾವಿಕವಾಗಿ ಮಾತನಾಡಿ, "ಒಂದು ಮನೆಗೆ ಒಂದು ಮರ, ಊರಿಗೆಒಂದು ವನ" ಎಂಬ ಪರಿಕಲ್ಪನೆಯೊಂದಿಗೆ ಈ ಪರಿಸರ ದಿನದಂದು ಪ್ರತಿಯೊಬ್ಬರೂ ಕನಿಷ್ಠ ಒಂದುಗಿಡವನ್ನಾದರೂ ನೆಟ್ಟು ಭೂಮಿಯನ್ನು ಹಸಿರಾಗಿಸೋಣ ಎಂದು ಕರೆ ನೀಡಿದರು. ಸಂಸ್ಥೆಯಅಧ್ಯಕ್ಷರಾದ ಲಕ್ಷ್ಮಣ ಅಡಿಹುಡಿ ಅವರು ಮಾತನಾಡಿ, ನಾವು ಪ್ರಾಮಾಣಿಕವಾಗಿ ಪರಿಸರವನ್ನು ರಕ್ಷಿಸಿದರೆ, ಖಂಡಿತವಾಗಿಯೂ ಪರಿಸರವು ನಮ್ಮನ್ನುರಕ್ಷಿಸುತ್ತದೆ" ಎಂದು ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ಪ್ರಧಾನ ಗುರುಗಳಾದ ಶಿಲ್ಪಾ ಗಡಾದ, ರವಿ ಕರಿಗಾರ, ಸಚಿನ್ ಕಾಂಬಳೆ, ಶ್ಯಾಮಲಾಖಾನಟ್ಟಿ, ಲಕ್ಷ್ಮಿಟಪಾಲ, ಸವಿತಾ ಕಂಕನವಾಡಿ, ಪ್ರಿಯಾಂಕಾ ರಾಮತೀರ್ಥ, ಗೌರಿ ಬಿದರಿಮತ್ತು ಮುದ್ದು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.