ಚಿಕ್ಕೋಡಿ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ

ಚಿಕ್ಕೋಡಿ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ World Environment Day celebrated at Chikkodi Sugar Factory premises

ಲೋಕದರ್ಶನ ವರದಿ 

ಮಾಂಜರಿ  05 : ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತ ಚಿಕ್ಕೋಡಿ, ಕಾರ್ಖಾನೆಯ ಆವರಣದಲ್ಲಿ ಶುಕ್ರವಾರರಂದು ಇಂದು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕಾರ್ಖಾನೆಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಕೋರೆ ಮತ್ತು ಉಪಾಧ್ಯಕ್ಷರಾದ ತಾತ್ಯಾಸಾಹೇಬ ಕಾಟೆ ಹಾಗೂ ಚಿಕ್ಕೋಡಿ ವಲಯ ಮತ್ತು ಸಾಮಾಜಿಕ ಅರಣ್ಯ ಅಧಿಕಾರಿಗಳಾದ. ಭಾರತಿ ನಂದಿಹಳ್ಳಿ ಇವರು ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಪ್ರಕೃತಿಯಿಂದ ಸ್ಫೂರ್ತಿ. ಹವಾಮಾನಕ್ಕಾಗಿ. ನಮ್ಮ ಭವಿಷ್ಯಕ್ಕಾಗಿ.” ಎಂಬ ಶೀರ್ಷಿಕೆಯೊಂದಿಗೆ ಆಚರಿಸಲಾಗುತ್ತಿರುವ ಈ ಸಾಲಿನ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕಾರ್ಖಾನೆಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಚಿಕ್ಕೋಡಿ ವಲಯ ಮತ್ತು ಸಾಮಾಜಿಕ ಅರಣ್ಯ ಅಧಿಕಾರಿಗಳು ಹಾಗೂ ಆಯಾ ವಿಭಾಗಾಧಿಕಾರಿಗಳಿಂದ ಕಾರ್ಖಾನೆಯ ಆವರಣದಲ್ಲಿ ಸಸಿ ನೆಡುವ ಮೂಲಕ ಆಚರಿಸಲಾಯಿತು. 

ಈ ವೇಳೆ ಕಾರ್ಖಾನೆಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಕೋರೆಯವರು ಮಾತನಾಡಿ ಕಾರ್ಖಾನೆಯ ರೂವಾರಿಗಳು, ಮಾರ್ಗದರ್ಶನ ಹಾಗೂ ಕಾರ್ಖಾನೆಯ ಪ್ರಭಾಕರ ಕೋರೆ ಇವರ ರಾಷ್ಟ್ರೀಯ ಸಹಕಾರಿ ಸಕ್ಕರೆ ಕಾರ್ಖಾನೆಗಳ ಮಹಾಮಂಡಳ, ಹೊಸದೆಹಲಿ ನಿರ್ದೇಶಕರಾಗಿರುವ ಅಮಿತ ಪ್ರಭಾಕರ ಕೋರೆಯವರ ಮುಂದಾಳತ್ವದಲ್ಲಿ ಮುನ್ನಡೆಯುತ್ತಿರುವ ಕಾರ್ಖಾನೆಯು ಯಾವತ್ತೂ ಹಸಿರು ಪಟ್ಟಿ ಬೆಳವಣಿಗೆ ಹಾಗೂ ಮಾಲಿನ್ಯ ರಹಿತ ಪರಿಸರ ಧೈಯವನ್ನು ಕಾಪಾಡಿಕೊಂಡು ಬಂದಿದ್ದು ಕಾರ್ಖಾನೆಯ ಒಳ ಮತ್ತು ಹೊರ ಆವರಣದಲ್ಲಿ ನಿರಂತರ ಸಸಿ ನೆಟ್ಟು ಮರಗಳನ್ನಾಗಿ ಬೆಳೆಸುವ ಕಾರ್ಯವನ್ನು ಶ್ರದ್ಧೆ ಮತ್ತು ಕಾಳಜಿ ಪೂರ್ವಕವಾಗಿ ಮಾಡುತ್ತಿದೆ. ಈ ನಿಟ್ಟಿನಲ್ಲಿ ಈ ವರ್ಷವೂ ಸಹ ಸಾವಿರಾರು ಸಸಿ ನೆಡುವ ಗುರಿಯನ್ನು ಹೊಂದಿದೆ. 

ಈಗ ಆಗುತ್ತಿರುವ ಮತ್ತು ಮುಂದೆ ಆಗಬಹುದಾದ ದುಷ್ಪರಿಣಾಮಗಳನ್ನು ಗಣನೆಗೆ ತೆಗೆದುಕೊಂಡು ಪರಿಸರ ಉಳಿಸಿದರೆ ಮಾತ್ರ ಜೀವಕುಲ ಉಳಿಯಲು ಸಾಧ್ಯ ಜನಸಂಖ್ಯೆ ಹೆಚ್ಚಳದೊಂದಿಗೆ ಮಾಲಿನ್ಯ ಹೆಚ್ಚಾಗುತ್ತ ಹೋಗುತ್ತಿದೆ. ಆದರೆ ಮನುಷ್ಯ ಇರುವ ಪರಿಸರ ಸಂಪತ್ತನ್ನು ಉಳಿಸಿಕೊಳ್ಳುವತ್ತ ಗಮನಹರಿಸುತ್ತಿಲ್ಲ. ಎಲ್ಲ ಕಾರ್ಮಿಕ/ಸಿಬ್ಬಂದಿಯವರು ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸಸಿ ನೆಡುವ ಮೂಲಕ ಪರಿಸರ ಉಳಿಸುವಲ್ಲಿ ತಮ್ಮ ಕೊಡುಗೆ ನೀಡಬೇಕು ಎಂದು ಚಿಕ್ಕೋಡಿ ವಲಯ ಮತ್ತು ಸಾಮಾಜಿಕ ಅರಣ್ಯ ಅಧಿಕಾರಿಗಳಾದ ಭಾರತಿ ನಂದಿಹಳ್ಳಿ ಹೇಳಿದರು. ಈ ಸಮಯದಲ್ಲಿ ಕಾರ್ಮಿಕ/ಸಿಬ್ಬಂದಿಯವರು ಯಶಸ್ವಿಗೊಳಿಸಿದರು. ಕಾರ್ಖಾನೆಯ ಎಲ್ಲ  ವಿಭಾಗದ ಅಧಿಕಾರಿಗಳು  ಮತ್ತು ಕಾರ್ಮಿಕರು ಹಾಜರಿದ್ದರು.