ಪ್ಯಾರಾ ಸಿಟಿಂಗ್ ಥ್ರೋ ಬಾಲ್ ಚಾಂಪಿಯನ್‌ಶಿಪ್ ಮಹಿಳೆಯರ ತಂಡ ಗೆಲುವು
Women's team wins Para Sitting Throw Ball Championship
ಗದಗ 15: ಶ್ರೀಲಂಕಾದಲ್ಲಿ ಆಯೋಜಿಸಲಾದ 1ನೇ ಸೌತ್ ಏಷ್ಯಾ ಪ್ಯಾರಾ ಸಿಟಿಂಗ್ ಥ್ರೋಬಾಲ್ ಚಾಂಪಿಯನ್‌ಶಿಪ್ ಯಶಸ್ವಿಯಾಗಿ ನಡೆಯಿತು. ಜಿಲ್ಲೆಯಿಂದ ಮಾಲತಿ ಇನಾಮತಿ ಕ್ಯಾಪ್ಟನ್‌ಶಿಪ್ ಅಡಿಯಲ್ಲಿ ಮಹಿಳೆಯರಿಗೆ ಚಿನ್ನ, ಗದಗ ಪುರುಷರ ವಿಭಾಗದ ಮಹಾಂತೇಶ ಹಾಗೂ ಆನಂದ ತಂಡ ಶ್ರೇಷ್ಠ ಪ್ರದರ್ಶನ ಮಾಡುವ ಮೂಲಕ ಬೆಳ್ಳಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ವರ್ಲ್ಡ ಪ್ಯಾರಾ ಥ್ರೋಬಾಲ್ ಫೆಡರೇಷನ್, ಏಷಿಯನ್ ಪ್ಯಾರಾ ಥ್ರೋಬಾಲ್ ಫೆಡರೇಷನ್ ಮತ್ತು ಶ್ರೀಲಂಕಾ ಪ್ಯಾರಾ ಥ್ರೋ ಬಾಲ್ ಫೆಡರೇಷನ್ ನಡೆಸಿಕೊಟ್ಟರು. ಚಾಂಪಿಯನ್‌ಶಿಪ್ ಅನ್ನು ಫಾದರ್ ಆಪ ಥ್ರೋಬಾಲ್ ಆಲ್ಬರ್ಟ್ ಪ್ರೇಮ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಆಯೋಜಿಸಲಾಗಿತ್ತು. ಸಬರಗಮುವಾ ಗವರ್ನರ ಚಂಪಾ ಜನಕೀ ರಾಜರತ್ನ, ಶ್ರೀಲಂಕಾ ಪ್ಯಾರಾಲಿಂಪಿಕ್ ಸಮಿತಿಯ ಅಧ್ಯಕ್ಷ ಬ್ರಿಗೇಡಿಯರ್ ದಾನಂಜಯ ಅಲುಡೆನಿಯ, ವರ್ಲ್ಡ ಪ್ಯಾರಾ ಥ್ರೋಬಾಲ್ ಫೆಡರೇಷನ್ ಅಧ್ಯಕ್ಷೆ ನಿರ್ಮಲಾ ರಾವತ್ ಮತ್ತಿತರರಿದ್ದರು. ಪ್ರಾರಂಭಿಕ ಪ್ರವಾಸ ಸಮಸ್ಯೆಗಳ ಕಾರಣ, ಇಂಡಿಗೋ ಏರ್‌ಲೈನ್ಸ್ನ ಸಮಸ್ಯೆಯಿಂದ ಭೂತಾನ್ ಮತ್ತು ಬಾಂಗ್ಲಾದೇಶ ತಂಡಗಳ ವಿಮಾನಗಳು ರದ್ದಾಗಿದ್ದು, ಪಾಕಿಸ್ತಾನ ತಂಡಕ್ಕೆ ಇಮಿಗ್ರೇಷನ್ ಸಮಸ್ಯೆ ಎದುರಿಸಿತು. ಈ ಕಾರಣದಿಂದ ಈ ಮೊದಲ ಆವೃತ್ತಿಯಲ್ಲಿ ಕಡಿಮೆ ತಂಡಗಳು ಮಾತ್ರ ಭಾಗವಹಿಸಬಹುದಾಯಿತು.
ಮಹಿಳೆಯರ ವಿಭಾಗ: ಮಾಲತಿ ಇನಾಮತಿ ಕ್ಯಾಪ್ಟನ್‌ಶಿಪ್ ಅಡಿ ಭಾರತ ತಂಡ ಶ್ರೇಷ್ಠ ಪ್ರದರ್ಶನ ನೀಡಿತು.ಭಾರತ-ನೇಪಾಳ 2ಹಿ0 ಗೆಲುವಿನಿಂದ ಆರಂಭಿಸಿತು. ಫೈನಲ್ ಪಂದ್ಯವು 3 ಸೀರಿಸ್ ಪಂದ್ಯಗಳ ರೂಪದಲ್ಲಿ ನಡೆಯಿತು. (ಪ್ರತಿ ಸೀರಿಸ್ 3 ಪಂದ್ಯಗಳು, ಪ್ರತಿ ಪಂದ್ಯ 21 ಪಾಯಿಂಟ್‌ಗಳ), ಭಾರತ ತಂಡ ಶ್ರೀಲಂಕಾವನ್ನು 2ಹಿ0 ಅಂತರದಲ್ಲಿ ಸೋಲಿಸಿ ಚಿನ್ನದ ಪದಕ ಹಾಗೂ 1ನೇ ಮಹಿಳಾ ಸೌತ್ ಏಷ್ಯಾ ಪ್ರಶಸ್ತಿಯನ್ನು ಗೆದ್ದಿತು.
ಪುರುಷರ ವಿಭಾಗ: ಪುರುಷರ ತಂಡ ಶ್ರೇಷ್ಠ ಪ್ರದರ್ಶನ ನೀಡಿದರೂ, ಫೈನಲ್ ಪಂದ್ಯವು ಕೂಡ 3 ಸೀರಿಸ್ ಆಧಾರಿತವಾಗಿದ್ದು, ಆತಿಥೇಯ ಶ್ರೀಲಂಕಾ ತಂಡ 2ಹಿ1 ಅಂತರದಲ್ಲಿ ಜಯ ಸಾಧಿಸಿತು. ಭಾರತ ಪುರುಷರು ಬೆಳ್ಳಿ ಪದಕ ಗೆದ್ದಾರೆ ಎಂದು ಅತ್ಲೇಟಿಕ್ ಕೋಚ್ ರಿಚರ್ಡ್ ಧರ್ಮದಾಸ್, ಟ್ರೈನರ್, ರಿಯಾಜ್ ಬಾನಿ ತಿಳಿಸಿದ್ದಾರೆ.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 