ಅಂತರರಾಷ್ಟ್ರೀಯ

ಟ್ರಂಪ್ ಚೇತರಿಕೆಗಾಗಿ ಕೊರಿಯ ನಾಯಕ ಕಿಮ್ ಜಾನ್ ಹಾರೈಕೆ

ಟ್ರಂಪ್  ಚೇತರಿಕೆಗಾಗಿ ಕೊರಿಯ ನಾಯಕ ಕಿಮ್ ಜಾನ್ ಹಾರೈಕೆ

ಪಯೋಂಗ್ಯಾಂಗ್, ಅಕ್ಟೋಬರ್ 3: ಕರೋನ  ಸೊಂಕಿನಿಂದ  ಬಳತ್ತಿರುವ ಅಮೆರಿಕ ಅದ್ಯಕ್ಷ  ಡೋನಾಲ್ಡ್ ಟ್ರಂಪ್   ಶೀಘ್ರ ಚೇತರಿಸಿಕೊಳ್ಳಲಿ ಕೊರಿಯಾದ ಉನ್ನತ ನಾಯಕ ಕಿಮ್ ಜಾನ್  ಉನ್ ಹಾರೈಸಿದ್ದಾರೆ. 

ಕೊರಿಯಾದ ಅಧಿಕೃತ ಕೇಂದ್ರ ಸುದ್ದಿ ಸಂಸ್ಥೆಯ ಪ್ರಕಾರ, ಅಧ್ಯಕ್ಷ ಟ್ರಂಪ್ ಮತ್ತು ಅವರ ಪತ್ನಿ ಕರೋನ ಸೋಂಕಿಗೆ ಒಳಗಾಗಿದ್ದಾರೆ  ಎಂಬ ಹಠಾತ್  ಸುದ್ದಿ ಕೇಳಿದ್ದೇನೆ ಮತ್ತು ಅವರು ಬೇಗ ಗುಣಮುಖರಾಗಲಿ ಎಂದು ಹಾರೈಸುವುದಾಗಿ  ಕಿಮ್ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ ಎಂದು ವರದಿಯಾಗಿದೆ . 

ತಾವು  ಮತ್ತು ಪತ್ನಿ ಕರೋನ ಸೋಂಕಿಗೆ ತುತ್ತಾಗಿರುವುದಾಗಿ ಟ್ರಂಪ್ ಶುಕ್ರವಾರ ಟ್ವೀಟ್ ಮಾಡಿದ್ದರು. 


ಸುದ್ದಿ ಓದಿ