ಶಾಸಕ ಕಾಗೆ, ಅಧಿಕಾರಿಗಳ ಪ್ರಯತ್ನದಿಂದ ಕಾಲುವೆಗೆ ನೀರು
Water in canal due to efforts of MLA Kaage and officials
ಶಾಸಕ ಕಾಗೆ, ಅಧಿಕಾರಿಗಳ ಪ್ರಯತ್ನದಿಂದ ಕಾಲುವೆಗೆ ನೀರು
ಕಾಗವಾಡ, 10 ; ತಾಲೂಕಿನ ಐನಾಪುರ ಯಾತ ನೀರಾವರಿ ಯೋಜನೆ ಮುಖಾಂತರ ಶಾಸಕ ರಾಜು ಕಾಗೆ ಹಾಗೂ ನೀರಾವರಿ ಅಧಿಕಾರಿಗಳ ಸತತ ಪ್ರಯತ್ನದಿಂದ ಬುಧವಾರ ದಿ. 10 ರಂದು ಕಾಲುವೆಗೆ ನೀರು ಹರಿಸಲಾಗಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ಇದೇ ಜೂನ್ 2025 ರಂದು ಕಾಲುವೆಗೆ ನೀರು ಹರಿಸಲಾಗಿತ್ತು. ಆದರೆ ಟ್ರಾನ್ಸ್ಫಾರ್ಮರ್ ಕೆಟ್ಟು ಹೋದ ಕಾರಣ ಕೇವಲ ಒಂದೇ ತಿಂಗಳಲ್ಲಿ ಕಾಲುವೆಯ ನೀರು ಬಂದಾಯಿತು. ಅದು ಈ ಭಾಗದಲ್ಲಿ ರಿಪೇರಿ ಆಗದ ಕಾರಣ ಚೆನ್ನೈಗೆ ತೆಗೆದುಕೊಂಡು ಹೋಗಿ ಆ ಟ್ರಾನ್ಸ್ಫರ್ಮರ್ ರಿಪೇರಿಗೆ ಕಳುಹಿಸಲಾಯಿತಾದರೂ ಅದು ಇನ್ನೂ ವರೆಗೆ ರೀಪೇರಿ ಆಗಿರಲಿಲ್ಲ. ಇದನ್ನು ಮನಗಂಡ ರಾಜು ಕಾಗೆ ಮತ್ತು ನೀರಾವರಿ ಅಧಿಕಾರಿಗಳು ಸೇರಿ ರೈತರ ಹಿತಾಸಕ್ತಿಯನ್ನು ಕಾಪಾಡಲು ಬಾಡಿಗೆ ಆಧಾರದ ಮೇಲೆ ಪ್ರತಿ ತಿಂಗಳಿಗೆ 30 ಸಾವಿರ ರೂಪಾಯಿಯಂತೆ ಬೇರೆ ಟ್ರಾನ್ಸ್ಫಾರ್ಮರ್‌ನ್ನು ಸೀಸನ್ ಮುಗಿಯುವ ವರೆಗೆ ಬಾಡಿಗೆ ಆಧಾರದಲ್ಲಿ ತಂದು ಆರಂಭಿಸಲಾಗಿದೆ ಎಂದು ನೀರಾವರಿ ಸಹಾಯಕ ಅಭಿಯಂತರ ಪ್ರಶಾಂತ ಪೋತದಾರ ತಿಳಿಸಿದ್ದಾರೆ.
ರೈತರು ಕಷ್ಟಪಟ್ಟು ಬೆಳೆದ ಬೆಳೆಯನ್ನು ಉಳಿಸುವಗೋಸ್ಕರ ಶಾಸಕರ ಪರಿಶ್ರಮದಿಂದ ಹಂಗಾಮಿಯಾಗಿ ಈ ವ್ಯವಸ್ಥೆಯನ್ನು ಪ್ರಾರಂಭಿಸಲಾಗಿದೆ. 2600 ಅಶ್ವಶಕ್ತಿ ಸಾಮರ್ಥ್ಯದ 2 ಮೋಟಾರ್‌ಗಳನ್ನು ಪ್ರಾರಂಭಿಸಲಾಗಿದ್ದು, ಇದರಿಂದ 21 ಸಾವಿರ ಹೆಕ್ಟರ್ ರೈತರ ಜಮೀನುಗಳಿಗೆ ನೀರಾವರಿ ಅನುಕೂಲವಾಗಲಿದೆ. ಐನಾಪೂರ, ಮೋಳೆ, ಕವಲಗುಡ್ಡ ಕೆಂಪವಾಡ, ಸಿದ್ದೆವಾಡಿ, ಮದಭಾವಿ ಸೇರಿದಂತೆ ಇನ್ನೂ ಅನೇಕ ಗ್ರಾಮಗಳ ರೈತರಿಗೆ ಇದರಿಂದ ಅನುಕೂಲವಾಗಲಿದೆ. ಕೃಷ್ಣಾ ನದಿಯ ಒಳಹರಿವು ಇರುವ ತನಕ ಬೇಸಿಗೆಯಲ್ಲಿ 6 ಟಿಎಂಸಿ ನೀರನ್ನು ಉಳಿಸಿ ಕೊಳ್ಳಬೇಕಾಗುತ್ತದೆ. ಅದರ ಆಧಾರದ ಮೇಲೆ ಅಂದಾಜು ನವಂಬರ್ ವರೆಗೆ ಕಾಲುವೆಗೆ ನೀರು ಹರಿಸಲಾಗುವುದು ಎಂದು ಪ್ರಶಾಂತ ಪೋತದಾರ ತಿಳಿಸಿದ್ದಾರೆ.ಈ ವೇಳೆ ಮಾಜಿ ಜಿ.ಪಂ. ಸದಸ್ಯ ರವೀಂದ್ರ ಪೂಜಾರಿ ಮಾತನಾಡಿ, ಐನಾಪೂರ ಯಾತ ನೀರಾವರಿ ಯೋಜನೆಯ ಕಾಲುವೆಗಳಿಗೆ ನೀರು ಬಂದಿರುವುದರಿಂದ ರೈತರ ಸಾವಿರಾರು ಎಕರೆ ಭೂಮಿಯಲ್ಲಿ ಬೆಳೆದ ಬೆಳೆಗಳಿಗೆ ಅನುಕೂಲವಾಗಲಿದೆಯಲ್ಲದೇ ಈ ಭಾಗದ ರೈತರ ಬಾವಿಗಳು ತುಂಬಲಿದೆ. ರೈತರ ಕಷ್ಟಕ್ಕೆ ನೆರವಾದ ಶಾಸಕರನ್ನು ಹಾಗೂ ಅಧಿಕಾರಿಗಳನ್ನು ಅಭಿನಂದಿಸುತ್ತೇನೆ ಎಂದರು. ಈ ವೇಳೆ ಮಲ್ಲಪ್ಪ ಚುಂಗ, ಮುಕುಂದ ಪೂಜಾರಿ, ಧರ್ಮಾ ಕೋಳೇಕರ, ರವಿ ಪಾಟೀಒ, ದೀಪಕ ಕುಟುವಡೆ, ಶರತ ಪಾಟೀಒ ಸೇರಿದಂತೆ ಅನೇಕ ರೈತ ಮುಖಂಡರು ಉಪಸ್ಥಿತರಿದ್ದರು.
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ 