ನಾಳೆಯಿಂದ ನಾಂದೇಡ್ ಎಕ್ಸ್ಪ್ರೆಸ್ನಲ್ಲಿ ಎರಡು ಸಾಮಾನ್ಯ ದರ್ಜೆ ಹೆಚ್ಚುವರಿ ಬೋಗಿ
ರಾಯಚೂರು, ಜ 29 ಜನಸಾಮಾನ್ಯರ ಸಂಚಾರ ಒತ್ತಡ ತಗ್ಗಿಸಲು ರಾಯಚೂರು ಮಾರ್ಗವಾಗಿ ನಾಂದೇಡ್ನಿಂದ ಬೆಂಗಳೂರಿಗೆ ಸಂಚರಿಸುವ ನಾಂದೇಡ್ ಎಕ್ಸ್ಪ್ರೆಸ್ನಲ್ಲಿ ಎರಡು ಸಾಮಾನ್ಯ ದರ್ಜೆಯ ಹೆಚ್ಚುವರಿ ಬೋಗಿಗಳು ಜೋಡಿಸಲು ದಕ್ಷಿಣ - ಪಶ್ಚಿಮ ರೈಲ್ವೆ ವಲಯ ನಿರ್ಧರಿಸಿದೆ. ಪ್ರತಿನಿತ್ಯ ಕಲ್ಯಾಣ ಕರ್ನಾಟಕ ಭಾಗದಿಂದ ಬಡ ಜನತೆ, ಕೂಲಿಕಾರರು ಬೆಂಗಳೂರಿಗೆ ತೆರಳುತ್ತಿದ್ದು ಸಂಚಾರಕ್ಕೆ ತೊಂದರೆ ನಿವಾರಿಸಲು ರೈಲ್ವೇ ಸಲಹಾ ಸಮಿತಿ ಸದಸ್ಯರ ಬೇಡಿಕೆ ಆಧರಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಗುಂತಕಲ್ ವಿಭಾಗೀಯ ಮಹಾ ಪ್ರಬಂಧಕ ಅಲೋಕ ತಿವಾರಿ ಆಸಕ್ತಿ ಮೇರೆಗೆ ಹೆಚ್ಚುವರಿಯಾಗಿ ಎರಡು ಸಾಮಾನ್ಯ ಬೋಗಿಗಳು ನಾಂದೇಡ್ ಎಕ್ಸ್ಪ್ರೆಸ್ಗೆ ಜೋಡಿಸಲು ನಿರ್ಧರಿಸಲಾಗಿದೆ. ಜನವರಿ 30 ರಿಂದ ನಾಂದೇಡ್ನಿಂದ ಬೆಂಗಳೂರಿಗೆ ತೆರಳುವ ರೈಲು ಸಂಖ್ಯೆ ೧೬೫೯೩ ಮತ್ತು ಬೆಂಗಳೂರಿನಿಂದ ನಾಂದೇಡ್ಗೆ ತೆರಳುವ ರೈಲು ಸಂಖ್ಯೆ ೧೬೫೯೪ ರಲ್ಲಿ ಈ ಸೇವೆ ಲಭ್ಯವಾಗಲಿದೆ.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 