ಅಂತರರಾಷ್ಟ್ರೀಯ

ಕರೋನ ಗೆದ್ದು ಆಸ್ಪತ್ರೆಯಿಂದ ಹೊರ ಬಂದ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಕರೋನ ಗೆದ್ದು ಆಸ್ಪತ್ರೆಯಿಂದ ಹೊರ ಬಂದ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್,  ಅಕ್ಟೋಬರ್ 5 :  ಕರೊನಾ ಚಿಕಿತ್ಸೆಗಾಗಿ ಆಸ್ಪತ್ರೆ ಸೇರಿದ್ದ  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್   ಆಸ್ಪತ್ರೆಯಿಂದ ಹೊರಬಂದು ತಮ್ಮ ಬೆಂಬಲಿಗರತ್ತ ಕೈಬೀಸಿದ್ದಾರೆ. 

ವಾಲ್ಟರ್ ರೀಡ್ ಸೇನಾ ಆಸ್ಪತ್ರೆಯಿಂದ ಹೊರಬಂದ ಟ್ರಂಪ್ ಕಪ್ಪು ಬಣ್ಣದ ಕಾರಿನಲ್ಲಿ  ಪ್ರಯಾಣಿಸಿದರು. ಈ ವೇಳೆ ಬೆಂಬಲಿಗರು ಟ್ರಂಪ್ ಪರವಾಗಿ  ಘೋಷಣೆ ಕೂಗಿದರು. ಟ್ರಂಪ್ ಬೆಂಬಲಿಗರತ್ತ ನೋಡಿ ಕೈ ಬೀಸಿ  ಸಂಭ್ರಮಿಸಿದರು.

ಟ್ರಂಪ್ ಅವರ ರಕ್ತದಲ್ಲಿನ ಆಮ್ಲಜನಕದ ಮಟ್ಟವು ಇತ್ತೀಚಿನ ದಿನಗಳಲ್ಲಿ ಎರಡು ಬಾರಿ ಇದ್ದಕ್ಕಿದ್ದಂತೆ ಕುಸಿಯಿತು. ಆದರೂ ಸೋಮವಾರವೇ ಅವರನ್ನು ಬಿಡುಗಡೆ ಮಾಡಬಹುದೆಂದು ಇದಕ್ಕೂ ಮುನ್ನ ಟ್ರಂಪ್ ಅವರ ವೈದ್ಯಕೀಯ ತಂಡ ಹೇಳಿತ್ತು. ಇಂದೇ ಟ್ರಂಪ್ ವೈಟ್ ಹೌಸ್ ತಲುಪಲಿದ್ದು   ಅಲ್ಲಿಯೇ ಚಿಕಿತ್ಸೆ ಮುಂದುವರಿಯುವ ಸಾಧ್ಯತೆ ಇದೆ ಎಂದೂ  ವೈದ್ಯರು ಹೇಳಿದ್ದಾರೆ.


ಸುದ್ದಿ ಓದಿ