ಅಂತರರಾಷ್ಟ್ರೀಯ

ಕೋವಿಡ್ 19 :ಟ್ರಂಪ್ ಚುನಾವಣಾ ಪ್ರಚಾರ ವ್ಯವಸ್ಥಾಪಕನಿಗೆ ಸೋಂಕು

ಕೋವಿಡ್ 19 :ಟ್ರಂಪ್ ಚುನಾವಣಾ ಪ್ರಚಾರ ವ್ಯವಸ್ಥಾಪಕನಿಗೆ ಸೋಂಕು

ವಾಷಿಂಗ್ಟನ್, ಅಕ್ಟೋಬರ್ 03 : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೋವಿಡ್ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಇದರ ಬೆನ್ನಲ್ಲೇ, ಅವರ ಚುನಾವಣಾ ಪ್ರಚಾರ ವ್ಯವಸ್ಥಾಪಕ ಬಿಲ್ ಸ್ಟೆಪೀನ್ ಅವರಲ್ಲಿಯೂ ಸೋಂಕು ದೃಢಪಟ್ಟಿದೆ.  42 ವರ್ಷ ವಯಸ್ಸಿನ ಸ್ಟೆಪೀನ್ ಅವರಲ್ಲಿ ಕೋವಿಡ್ ಸೋಂಕಿನ ಸೌಮ್ಯ ಲಕ್ಷಣಗಳು ಕಂಡು ಬಂದಿದೆ ಎಂದು ಮಾಧ್ಯಮದ ಪ್ರಕಟಣೆ ತಿಳಿಸಿದೆ.

ಸೋಂಕಿನಿಂದ ಚೇತರಿಸಿಕೊಳ್ಳುವತನಕವೂ ಬಿಲ್ ಸ್ಟೆಪೀನ್ ಅವರು ಮನೆಯಿಂದಲೇ ಕಾರ್ಯನಿರ್ವಹಿಸಲಿದ್ದಾರೆ ಎನ್ನಲಾಗಿದೆ.ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಅವರ ಪತ್ನಿ ಮೆಲಾನಿಯಾ ಟ್ರಂಪ್ ತಮಗೆ ಕೋವಿಡ್ ಸೋಂಕು ತಗುಲಿರುವುದಾಗಿ ಗುರುವಾರ ಮಾಹಿತಿ ನೀಡಿದ್ದರು.

ಸುದ್ದಿ ಓದಿ