ಕರೋನ ಹಾವಳಿ: ಪ್ರಯಾಣ ನಿಷೇಧ ವಿಸ್ತರಿಸಿದ ಕೆನಡಾ
ಟೊರೊಂಟೊ, ಅಕ್ಟೋಬರ್ 1: ಕರೋನ ಸೋಂಕಿನ ಕಾರಣ ವಿದೇಶಿ ಪ್ರಯಾಣ ನಿಷೇಧವನ್ನು ಕೆನಡಾ ಸರ್ಕಾರ ಅಕ್ಟೋಬರ್ 31 ರವರೆಗೆ ವಿಸ್ತರಿಸಿದೆ ಎಂದು ಸಾರ್ವಜನಿಕ ಸುರಕ್ಷತಾ ಸಚಿವ ಬಿಲ್ ಬ್ಲೇರ್ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಪ್ರಯಾಣದ ಮೇಲಿನ ನಿರ್ಬಂಧಗಳನ್ನು ಈ ತಿಂಗಳ 31, ವರೆಗೂ ವಿಸ್ತರಿಸಲಾಗಿದೆ ಎಂದು ಬ್ಲೇರ್ ಬುಧವಾರ ಟ್ವಿಟರ್ ಮೂಲಕ ತಿಳಿಸಿದ್ದಾರೆ.
ಈ ಆದೇಶ ಕೆಲವು ಅಮೆರಿಕ ಪ್ರಜೆಗಳು, ಫೆಡರಲ್ ಸರ್ಕಾರದಿಂದ ಅನುಮೋದಿಸಲ್ಪಟ್ಟ ತಾತ್ಕಾಲಿಕ ವಿದೇಶಿ ಕಾರ್ಮಿಕರು ಮತ್ತು ರಾಜತಾಂತ್ರಿಕರು ಮತ್ತು ವಿಮಾನ ಸಿಬ್ಬಂದಿ ಸೇರಿದಂತೆ ಇತರ ಆಯ್ದ ವ್ಯಕ್ತಿಗಳಿಗೆ ಅನ್ವಯಿಸುವುದಿಲ್ಲ.
ಕೆನಡಾಕ್ಕೆ ಪ್ರವೇಶಿಸಿದ ನಂತರ ಕಟ್ಟುನಿಟ್ಟಾದ ಕ್ವಾರಂಟೈನ್ ನಿಯಮ ಪಾಲನೆ ಮಾಡಬೇಕು ತಪ್ಪಿದಲ್ಲಿ ದಂಡ ಮತ್ತು ಆರು ತಿಂಗಳ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಎಂದು ಅವರು ಹೇಳಿದರು.