ಲೋಕದರ್ಶನ ವರದಿ ರಂಗಭೂಮಿಯ ರಸಪ್ರಸಂಗಗಳು: ವಿನೋದ ಕಾರ್ಯಕ್ರಮ ಬೆಳಗಾವಿ 8: ಹಾಸ್ಯಕೂಟ ಬೆಳಗಾವಿ ಮತ್ತು ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಇದೇ ದಿ. 11 ಶನಿವಾರದಂದು ಸಾಯಂಕಾಲ 4.30 ಕ್ಕೆ ನಗರದ ಚೆನ್ನಮ್ನ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನದಲ್ಲಿ ರಂಗಭೂಮಿಯ ರಸಪ್ರಸಂಗಗಳು ಎಂಬ ಹಾಸ್ಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ನಾಡಹಬ್ಬ ಉತ್ಸವ ಸಮಿತಿಯ ಅಧ್ಯಕ್ಷಡಾ. ಎಚ್.ಬಿ. ರಾಜಶೇಖರ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದಾರೆ. ಪ್ರಾಯೋಜಕತ್ವವನ್ನು
Theater Quizzes: Fun Program
ಲೋಕದರ್ಶನ ವರದಿ ಲೋಕದರ್ಶನ ವರದಿ
ರಂಗಭೂಮಿಯ ರಸಪ್ರಸಂಗಗಳು: ವಿನೋದ ಕಾರ್ಯಕ್ರಮ
ಬೆಳಗಾವಿ 8: ಹಾಸ್ಯಕೂಟ ಬೆಳಗಾವಿ ಮತ್ತು ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಇದೇ ದಿ. 11 ಶನಿವಾರದಂದು ಸಾಯಂಕಾಲ 4.30 ಕ್ಕೆ ನಗರದ ಚೆನ್ನಮ್ನ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನದಲ್ಲಿ ರಂಗಭೂಮಿಯ ರಸಪ್ರಸಂಗಗಳು ಎಂಬ ಹಾಸ್ಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ನಾಡಹಬ್ಬ ಉತ್ಸವ ಸಮಿತಿಯ ಅಧ್ಯಕ್ಷಡಾ. ಎಚ್.ಬಿ. ರಾಜಶೇಖರ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದಾರೆ. ಪ್ರಾಯೋಜಕತ್ವವನ್ನು ರಂಗಸಂಪದದ ಅಧ್ಯಕ್ಷ, ನಟ, ನಿರ್ದೇಶಕ ಡಾ. ಅರವಿಂದ ಕುಲಕರ್ಣಿಯವರು ವಹಿಸಿಕೊಂಡಿದ್ದು ಪ್ರಾಸ್ತಾವಿಕ ನುಡಿಯನ್ನು ಹಾಸ್ಯಕೂಟ ಸಂಚಾಲಕ ಗುಂಡೇನಟ್ಟಿ ಮಧುಕರ ಆಡಲಿದ್ದಾರೆ.
ರಂಗಭೂಮಿ ರಸಪ್ರಸಂಗಗಳನ್ನು ನಟ ನಿರ್ದೇಶಕ ಶೀರೀಷ ಜೋಶಿ, ಉಮೇಶ ಬಡಿಗೇರ ಅಲ್ಲದೇ ಕಲಾವಿದರಾದ ಪದ್ಮಾ ಕುಲಕರ್ಣಿ, ಪವಿತ್ರಾ ರೇವಣಕರ, ರಾಮಚಂದ್ರ ಭಟ್ಟ ಹಂಚಿಕೊಳ್ಳಲಿದ್ದಾರೆ. ಹಾಸ್ಯಕೂಟ ಕಲಾವಿದ ಅರವಿಂದ ಹುನಗುಂದ ನಿರೂಪಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಹಾಸ್ಯಾಸಕ್ತರು ಆಗಮಿಸುವಂತೆ ಸಾಹಿತ್ಯ ಭವನದ ಗೌರವ ಕಾರ್ಯದರ್ಶಿ ರಾಮಚಂದ್ರ ಕಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ 