ದೇಶಕ್ಕಾಗಿ ಜೀವನ ತ್ಯಾಗ ಮಾಡಿದ ಗಾಂ ಕುಟುಂಬ- ಅಮ್ಜದ್ ಪಟೇಲ್
The village family who sacrificed their lives for the country- Amjad Patel
ದೇಶಕ್ಕಾಗಿ ಜೀವನ ತ್ಯಾಗ ಮಾಡಿದ ಗಾಂ ಕುಟುಂಬ- ಅಮ್ಜದ್ ಪಟೇಲ್
ಕೊಪ್ಪಳ 11: ದೇಶದ ಸ್ವಾತಂತ್ರಕ್ಕಾಗಿ ಇಡೀ ತಮ್ಮ ಜೀವನ ತ್ಯಾಗ ಮಾಡುವುದಲ್ಲದೆ ದೇಶಕ್ಕಾಗಿ ಬಲಿದಾನ ಮಾಡಿದ ಕುಟುಂಬ ಅದು ಗಾಂದಿ ಕುಟುಂಬವಾಗಿದೆ ಎಂದು ಕೊಪ್ಪಳ ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್ ಹೇಳಿದರು. ಅವರು ಸೋಮವಾರ ತಾಲೂಕಿನ ಯೋಜನಾ ಪ್ರದೇಶವಾದ ಮುನಿರಾಬಾದ್ ಡ್ಯಾಮ್ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಬಳಿರಾಜೀವ್ ಗಾಂಧಿ ಸದ್ಭಾವನಾ ಜ್ಯೋತಿ ಯಾತ್ರೆಯನ್ನ ಮುನಿರಾಬಾದ್ ಹತ್ತಿರ ಸ್ವಾಗತಿಸಿ ಚಾಲನೆ ನೀಡಿ ಮಾತನಾಡಿದರು. ಮುಂದುವರೆದು ಮಾತನಾಡಿ ನಮ್ಮ ನಾಯಕದೇಶದ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರ ಕೊಡುಗೆ ಈ ದೇಶಕ್ಕೆ ಅಪಾರವಾಗಿದೆ. ಅವರ ಹಾಕಿಕೊಟ್ಟ ಮಾರ್ಗದಲ್ಲಿ ನಾವು ಶ್ರಮಿಸಬೇಕು ಮತ್ತು ಪ್ರತಿಯೊಬ್ಬರಲ್ಲಿ ದೇಶಾಭಿಮಾನ ಮತ್ತು ರಾಷ್ಟ್ರೀಯ ಭಾವೈಕ್ಯತೆ ಬೆಳೆಸುವಂಥ ಕೆಲಸ ಮಾಡಬೇಕು ಎಂದು ಹೇಳಿದರು.
ಸದರಿ ಜ್ಯೋತಿಯಾತ್ರೆಯು ಜನರಲ್ಲಿ ದೇಶಾಭಿಮಾನ ಮೂಡಿಸಲು ಹೊರಟಿದೆ ಪೇರಂ ಬದ್ದೂರ್ ನಿನ್ನ ಹೊರಟ ಈ ರಾಜೀವ್‌ಗಾಂಧಿ ಸದ್ಭಾವನ ಜ್ಯೋತಿಯಾತ್ರೆ ಯುವ ಜನರಲ್ಲಿ ಜಾಗೃತಿ ಮೂಡಿಸುವದರ ಮೂಲಕ ದೆಹಲಿ ತಲುಪಲಿದೆ ಎಂದು ಕೊಪ್ಪಳ ನಗರಸಭೆಯಅಧ್ಯಕ್ಷಅಮ್ಜದ್ ಪಟೇಲ್ ಹೇಳಿದರು. ಈ ಸಂದರ್ಭದಲ್ಲಿ ತಾಲೂಕು ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣರೆಡ್ಡಿ ಗಲಬಿ ಟೌನ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಾಟನ್ ಪಾಷಾ ಕಾಂಗ್ರೆಸ್ ಮುಖಂಡರಾದ ಕೆಎಂ ಸೈಯದ್ ಬಾಷೂ ಸಾಬ್ ಖತೀಬ್, ನಗರ ಸಭೆ ಸದಸ್ಯ ಅಕ್ಬರ್ ಪಾಷಾ ಪಲ್ಟನ್ ಮುನಿರಾಬಾದ್ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಆಯುಬ್‌ಖಾನ್ ಜಿಲ್ಲಾಯುವ ಕಾಂಗ್ರೆಸ್ ಅಧ್ಯಕ್ಷರಾದ ಲಿಂಗರಾಜ್ ಕಾಂಗ್ರೆಸ್ ಮುಖಂಡರಾದ ಸರ್ಫರಾಜ್ ಖಾನ್ ಕಾಂಗ್ರೆಸ್ ಕಾರ್ಮಿಕರ ಘಟಕದ ಜಿಲ್ಲಾಧ್ಯಕ್ಷರಾದ ವೆಂಕಟೇಶ್ ಜಿಲ್ಲಾಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪರಶುರಾಮ್ ಬೈರಾಪುರಕಾಂಗ್ರೆಸ್‌ರಾಜೀವ್‌ಗಾಂಧಿ ಪಂಚಾಯತ್, ಜಿಲ್ಲಾ ಸಂಚಾಲಕರಾದ ಸುರೇಶ ದಾಸ ರೆಡ್ಡ ಮಾಜಿ ಸಿಂಡಿಕೇಟ್ ಸದಸ್ಯರಾದ ಮೊಹಮ್ಮದ್ ಜಹೀರ್, ಮಹೇಶ್ ಮುಂಡರಗಿ ಕುಷ್ಟಗಿ ತಾಲೂಕಿನ ಯುವ ಕಾಂಗ್ರೆಸ್ ಮುಖಂಡರಾದ ಸದ್ದಾಮ್ ಹುಸೇನ್ ಮತ್ತು ಹುಸೇನ್ ಮುನಿರಾಬಾದ್‌ಗ್ರಾಮ ಪಂಚಾಯತಿಯ ಉಪಾಧ್ಯಕ್ಷರು. ಮತ್ತು ಎಲ್ಲಾ ಸದಸ್ಯರು ಮತ್ತು ಎಲ್ಲಾ ಮುಖಂಡರು ಕಾಂಗ್ರೆಸ್ ಪಕ್ಷದ ಹಿರಿಯರು ಮಹಿಳಾ ಪದಾಧಿಕಾರಿಗಳು ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 