ಆಧುನಿಕತೆಯಿಂದಾಗಿ ಕಿರಿದಾಗುತ್ತಿದೆ ವಿಶಾಲವಾದ ಜಗತ್ತು : ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು
The vast world is becoming narrower due to modernity: Dr. Siddarama Mahaswamy of Tonta
ಲೋಕದರ್ಶನ ವರದಿ
ಬೆಳಗಾವಿ 01: ಜಗದಗಲ ಮುಗಿಲಗಲವಾಗಿರುವ ಭಗವಂತನ ಸ್ವರೂಪ ಇಷ್ಟಲಿಂಗ ರೂಪದಲ್ಲಿಕಿರಿದಾಗಿ ಅಂಗೈಗೆ ಬಂದಿರುವಂತೆ ಈ ವಿಶಾಲವಾದ ಜಗತ್ತು ಆಧುನಕ ತಂತ್ರಜ್ಞಾನದಿಂದಾಗಿ ಕಿರಿದಾಗುತ್ತಿದೆ. ಟ್ಯಾಬ್, ಮೊಬೈಲ್ ಗಳಂತಹ ತಂತ್ರಜ್ಞಾನದಿಂದಜಗತ್ತಿನ ಮಾಹಿತಿ ಇಂದು ಅಂಗೈಯಲ್ಲಿ ದೊರೆಯುತ್ತಿದ್ದು, ವಿಶಾಲವಾದ ಜಗತ್ತು ಕಿರಿದಾಗುತ್ತಿದೆ ಎಂದು ಗದುಗಿನ ತೋಂಟದಾರ್ಯ ಮಠದ ಜಗದ್ಗುರುಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಅವರು ಇಂದು ಇಲ್ಲಿನ ಶಿವಬಸವ ನಗರದ ಎಸ್. ಜಿ. ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿನ ಎಸ್. ಜಿ. ಸಂಬರಗಿಮಠ ಸಭಾಭವನದಲ್ಲಿ ಹಮ್ಮಿಕೊಂಡ ನೂತನ ಸಿದ್ಧರಾಮೇಶ್ವರ ಸಿ.ಬಿ.ಎಸ್.ಇ. ಶಾಲೆಯ ಲೋಕಾರೆ್ಣಗೊಳಿಸಿ ಮಾತನಾಡಿದರು.
ಕಾರ್ಯಕ್ರಮದ ಸಾನಧ್ಯ ವಹಿಸಿ ನೇತೃತ್ವ ನುಡಿಗಳನ್ನಾಡಿದ ನಾಗನೂರು ರುದ್ರಾಕ್ಷಿ ಮಠದಡಾ. ಅಲ್ಲಮಪ್ರಭು ಮಹಾಸ್ವಾಮಿಗಳು, ತಮ್ಮ ಮಕ್ಕಳನ್ನು ಭವಿಷ್ಯದಇಂಜನಯರ್ ಹಾಗೂ ವೈದ್ಯರನ್ನಾಗಿಸಬೇಕೆಂಬ ಹಂಬಲ ಎಲ್ಲಾ ಪಾಲಕರಿಗಿರುತ್ತದೆ. ಆದರೆ ಮಕ್ಕಳ ಶಿಕ್ಷಣದ ಅಡಿಪಾಯ ಸರಿಯಾಗಿರದೇಇರುವುದರಿಂದ ನಗದಿತಗುರಿತಲುಪಲು ಸಾಧ್ಯವಾಗುವುದಿಲ್ಲ. ಉತ್ತಮ ಸಂಸ್ಕಾರದೊಂದಿಗೆಕಡಿಮೆ ವೆಚ್ಚದಲ್ಲಿಉತ್ಕೃಷ್ಟಗುಣಮಟ್ಟದ ಶಿಕ್ಷಣ ನಡಬೇಕೆಂಬ ಸದುದ್ದೇಶದಿಂದ ಸಿಬಿಎಸ್‌ಇ ಶಾಲೆ ಪ್ರಾರಂಭಿಸಲಾಗಿದ್ದು ನಾಡಿನ ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಪೋತದಾರ್ ಅಂತರಾಷ್ಟ್ರೀಯ ಶಾಲೆಯ ಪ್ರಾಚಾರ್ಯರಾಜ್ ಹುಲಮನ ಓರ್ವ ವಿದ್ಯಾರ್ಥಿಯ ಶೇ.95 ರಷ್ಟು ಮೆದುಳಿನ ಬೆಳವಣಿಗೆ ಮೊದಲ ಹತ್ತು ವರ್ಷದೊಳಗೆ ಆಗುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಬಾಲ್ಯದಲ್ಲಿರುವಾಗ ಉತ್ತಮ ಶಾಲೆಯಆಯ್ಕೆ ಬಹಳ ಪ್ರಮುಖವಾದುದು ಎಂದರು. ಇದೇ ಸಂದರ್ಭದಲ್ಲಿ ಅವರು 21 ನೇ ಶತಮಾನಕ್ಕೆ ತಕ್ಕುದಾದ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಸಿದ್ಧರಾಮೇಶ್ವರ ಸಿ.ಬಿ.ಎಸ್.ಇ. ಶಾಲೆಯನ್ನು ಆಯ್ಕೆ ಮಾಡಿಕೊಂಡಿರುವ ಪಾಲಕರನ್ನುಅವರು ಅಭಿನಂದಿಸಿದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಸ್.ಪಿ. ಹಿರೇಮಠ ದೇಶದಲ್ಲಿ ಎಲ್ಲಾ ಶಾಲೆಗಳು ಶಿಕ್ಷಣ ನಡುತ್ತವೆ. ಆದರೆ ಸಂಸ್ಕಾರಯುತ ಶಿಕ್ಷಣ ದೊರೆಯುವುದು ಕಷ್ಟ. ಸಂಸ್ಕಾರಯುತ ಶಿಕ್ಷಣದಿಂದಲೇ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದರು.
ಲಿಂಗಾಯಿತ ಮಹಾಸಭಾಜಿಲ್ಲಾಧ್ಯಕ್ಷ ಬಸವರಾಜ್‌ರೊಟ್ಟಿಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು . ಸಿಬಿಎಸ್‌ಇ ಶಾಲೆಯ ಪ್ರಾಚಾರ್ಯಡಾ. ಸಿ.ಬಿ. ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿಯರಾದ ಸವಿತಾರಾವ್, ಶಿಲ್ಪಾ ಅಮಟೆ ನರೂಪಿಸಿದರು. ಕೊನೆಗೆ ಸವಿತಾಎಚ್. ವಂದಿಸಿದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 