ಸಪ್ತ ಸಾಗರದಾಚೆ ಕನ್ನಡದ ಕಂಪು ಕನ್ನಡ ಬರಿ ಭಾಷೆಯಲ್ಲ, ನಮ್ಮ ಸಂಸ್ಕೃತಿ; ಡಾ.ಅರ್ಚನಾ
The taste of Kannada beyond the seven oceans Kannada is not just a language, it is our culture; Dr.
ಅಥಣಿ 01 : ಕನ್ನಡವನ್ನು ನಾವು ಒಂದು ಭಾಷೆಯನ್ನಾಗಿ ನೋಡದೆ ವಿವಿಧ ಆಯಾಮಗಳಲ್ಲಿ ನೋಡಬೇಕಿದೆ. ಎಲ್ಲ ಸೀಮಿತಗಳನ್ನು ಮೀರಿಯೂ ನಾವು ವಿಶ್ವ ಪ್ರಜ್ಷೆಯನ್ನಾಗಿ ಕನ್ನಡವನ್ನು ಬೆಳೆಸಬೇಕಿದೆ ಎಂದು ಸಾಹಿತಿ ಡಾ, ಅರ್ಚನಾ ಅಥಣಿ ಅಭಿಪ್ರಾಯ ಪಟ್ಟರು. ಇತ್ತಿಚಿಗೆ ಭೂತಾನ್ ದೇಶದ ರಾಜಧಾನಿ ಥಿಂಪುನ ಪೆಜೊಮ್ ಸಭಾಂಗಣದಲ್ಲಿ ಪ್ರತಿಷ್ಠಿತ ಇಂಟರನ್ಯಾಷನಲ್ ಕಲ್ಚರಲ್ ಫೆಸ್ಟ್ ಕೌನ್ಸಿಲ್ ಇಂಡಿಯಾ ಹಾಗೂ ಫ್ರೆಂಡ್ಸ್ ಶಿಫ್ ಕ್ಲಬ್ ಭೂತಾನ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿರುವ ಕಾರ್ಯಕ್ರಮದಲ್ಲಿ ಸಾಹಿತಿ ಡಾ.ಅರ್ಚನಾ ಅಥಣಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಮೇರು ದಿಗ್ಜರು ಸಾಹಿತ್ಯವನ್ನು ಕಟ್ಟಿ ಬೆಳೆಸಿದ್ದಾರೆ. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಸಮುದ್ರವಿದ್ದಂತೆ. ಇಲ್ಲಿ ಸಾಹಿತ್ಯವೇ ಸಾಮ್ರಾಟ. ಸಾಹಿತ್ಯ ನಮಗೆ ಅರಿವಿಲ್ಲದೆ ಸಂತೋಷ ನೀಡುತ್ತದೆ. ಒಬ್ಬ ಸಾಹಿತಿಗೆ ಸಾವಿರಾರು ಜನರನ್ನು ಬಡಿದೆಬ್ಬಿಸುವ ಶಕ್ತಿಯಿದೆ. ಜೊತೆಗೆ ಜನರನ್ನು ಶಾಂತಗೊಳಿಸುವ ಶಕ್ತಿಯೂ ಇದೆ. ಅಂತಹ ಸಮೃದ್ಧತೆ ಹೊಂದಿದ ನೆಲದಲ್ಲಿ ಜನಿಸಿದ ನಾವೇ ಪುಣ್ಯವಂತರು. ಕನ್ನಡ ಸಾಹಿತ್ಯಕ್ಕೆ ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ.
ವಚನ ಸಾಹಿತ್ಯ, ದಾಸ ಸಾಹಿಯ್ಯ, ಇಂದೂ ಅಚ್ಚಳಿಯದೆ ಉಳಿದಿದೆ. ಸಾಹಿತ್ಯ ಜೀವನ ಕಲಿಸಿ ಕೊಟ್ಟಿದೆ. ಅಂಥ ಶಕ್ತಿ ಕನ್ನಡ ಭಾಷೆಗಿದೆ. ನಡೆ,ನುಡಿಯನ್ನು ಕಲಿಸಿ ಕೊಡುವುದೇ ಕನ್ನಡ ಸಾಹಿತ್ಯ. ಇಂದು ಜಗತ್ತಿನಾದ್ಯಂತ ಮಾನವ ಗುಣವನ್ನು ಕಲಿಸಿ ಕೊಡುತ್ತಿದೆ.ಅಂತಹ ಸಾಹಿತ್ಯವನ್ನು ಭಾರತ ದೇಶದಲ್ಲಿ ಅಷ್ಟೇ ಅಲ್ಲ ವಿದೇಶಗಳಲ್ಲಿಯೂ ಕನ್ನಡ ಕಂಪನ್ನು ಬೀಸುತ್ತಿದೆ. ಆ ಶಕ್ತಿ ಕನ್ನಡ ಬಾಷೆಗಿದೆ ಎಂದರು. ಭೂತಾನ್ ಲೋಕಸಭಾ ಸದಸ್ಯ ಎಚ್.ಇ. ದಶೋ ಉಗೇನ್ ಲಾಮಾ ಮಾತನನಾಡಿ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಭಾರತ, ಭೂತಾನ್ ದೇಶಗಳ ನಡುವಿನ ಬಾಂಧವ್ಯವನ್ನು ಬೆಸೆಯುವ ಕಾರ್ಯ ಸಹಕಾರಿಯಾಗುತ್ತಿವೆ. ಈ ಕಾರ್ಯಕ್ರಮ ಅತ್ಯಂತ ಖುಷಿ ತಂದಿದೆ., ಇಂಥ ಕಾರ್ಯಕ್ರಮಗಳು ಮೇಲಿಂದ ಮೇಲೆ ನಡೆಸುವಂತೆ ಸಂಘಟಕರಿಗೆ ಹೇಳಿದರು. ಈ ಕಾರ್ಯಕ್ರಮದಲ್ಲಿ ಭೂತಾನಿನ ಸಂಸತ್ ಸದಸ್ಯ ಎಚ್.ಇ. ದಶೋ ಉಗೇನ್ ಲಾಮಾ ಸೇರಿದಂತೆ ಅನೇಕರು ಪಾಲ್ಗೊಂಡು ಡಾ.ಅರ್ಚನಾ ಅಥಣಿಯವರನ್ನು ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 